Viral News: ಒಂದೇ ಬಾವಿಯಲ್ಲಿ ಸಹಬಾಳ್ವೆಯಲ್ಲಿದ್ದ ನರಿ, ನಾಗರ ಹಾವು
ಮಹಾರಾಷ್ಟ್ರದ ಜುನ್ನಾರ್ ತಾಲೂಕಿನ ರಾಜೂರಿ ಗ್ರಾಮದಲ್ಲಿ ನರಿ ಮತ್ತು ನಾಗರ ಹಾವು ಒಂದೇ ಬಾವಿಯನ್ನು ಸಿಕ್ಕಿಕೊಂಡಿರುವ ಘಟನೆ ನಡೆದಿದೆ. 25 ಅಡಿಯ ಒಣ ಬಾವಿಯಲ್ಲಿ, ನಾಗರ ಹಾವು ಮತ್ತು ನರಿ ಸಿಲುಕಿಕೊಂಡಿರುವುದನ್ನು ಕಂಡು ರಾಜೂರಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜುನ್ನಾರ್ ತಾಲೂಕಿನ ರಾಜೂರಿ ಗ್ರಾಮದಲ್ಲಿ ನರಿ ಮತ್ತು ನಾಗರ ಹಾವು ಒಂದೇ ಬಾವಿಯನ್ನು ಸಿಕ್ಕಿಕೊಂಡಿರುವ ಘಟನೆ ನಡೆದಿದೆ. 25 ಅಡಿಯ ಒಣ ಬಾವಿಯಲ್ಲಿ, ನಾಗರ ಹಾವು ಮತ್ತು ನರಿ ಸಿಲುಕಿಕೊಂಡಿರುವುದನ್ನು ಕಂಡು ರಾಜೂರಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಘಟನೆ ಕಳೆದ ವಾರ ನಡೆದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ತಕ್ಷಣ ತಿಳಿಸಿದಾಗ, ಅರಣ್ಯ ಅಧಿಕಾರಿಗಳು ಎಸ್‌ಒಎಸ್ ತಂಡಕ್ಕೆ ತಿಳಿಸಿದ್ದಾರೆ, ಅಗತ್ಯವಿರುವ ಸಲಕರಣೆಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಒಎಸ್ ತಂಡ ಮೊದಲು ನರಿಯನ್ನು ಬಾವಿಯಿಂದ ಹೊರಗೆ ತಂದಿದ್ದಾರೆ. ನಂತರ ಒಬ್ಬ ಎಸ್‌ಒಎಸ್ ತಂಡದ ಸಿಬ್ಬಂದಿ ಬಾವಿಗೆ ಇಳಿದು 5 ಅಡಿ ಉದ್ದ ನಾಗರ ಹಾವನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
ಇದನ್ನೂ ಓದಿ:Viral Video: ಸೌಮ್ಯ ಸ್ವಭಾವದವರು ಹೀಗೆ ಘೀಳಿಡುತ್ತಾ ಕಾದಾಟಕ್ಕಿಳಿದಿದ್ದೇಕೆ?
ಎಸ್‌ಒಎಸ್ ತಂಡ 2 ಗಂಟೆಗಳ ಕಾಲ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದೆ ಎಂದು ಹೇಳಲಾಗಿದೆ. ನರಿ ಮತ್ತು ನಾಗರ ಹಾವುವನ್ನು ಕಾಡಿಗೆ ಬಿಡಲಾಗಿದೆ ಎಂದು ಹೇಳಲಾಗಿದೆ. ಇನ್ನೊಂದು ಅಚ್ಚರಿ ವಿಷಯವೆಂದರೆ, ನರಿ ಮತ್ತು ನಾಗರ ಹಾವು ಯಾವುದೇ ರೀತಿಯ ಅಪಾಯವನ್ನು ಉಂಟು ಮಾಡದೇ, ಜತೆಯಾಗಿತ್ತು, ಸಹಬಾಳ್ವೆಯಿಂದ ಇತ್ತು, ಇನ್ನೂ ಎರಡು ವರ್ಷದ ಈ ನರಿಯನ್ನು ಮತ್ತು ನಾಗರ ಹಾವನ್ನು ವೈದ್ಯಕೀಯ ಪರೀಕ್ಷೆ ನಡೆಸಿಯೇ ಕಾಡಿಗೆ ಬಿಡಲಾಗಿದೆ ಎಂದು ವನ್ಯಜೀವಿ ಎಸ್‌ಒಎಸ್‌ನ ಪಶುವೈದ್ಯಾಧಿಕಾರಿ ಡಾ.ಅಖಿಲೇಶ್ ಧಾಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:05 pm, Wed, 17 May 23