AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಯಕವೇ ಕೈಲಾಸ! ಬೆಂಗಳೂರು ಟ್ರಾಫಿಕ್​ನಲ್ಲಿ ಸ್ಕೂಟಿಯಲ್ಲೇ ಕುಳಿತು ಕೆಲಸ ಮಾಡಿದ ಮಹಿಳೆ: ಫೋಟೋ ವೈರಲ್

ಮಹಿಳೆಯೊಬ್ಬರು ಟ್ರಾಫಿಕ್ ಜಾಮ್​ನಲ್ಲಿ  ಲ್ಯಾಪ್ ಟಾಪ್​ ಓಪನ್​ ಕೆಲಸ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಯಕವೇ ಕೈಲಾಸ! ಬೆಂಗಳೂರು ಟ್ರಾಫಿಕ್​ನಲ್ಲಿ ಸ್ಕೂಟಿಯಲ್ಲೇ ಕುಳಿತು ಕೆಲಸ ಮಾಡಿದ ಮಹಿಳೆ: ಫೋಟೋ ವೈರಲ್
ಬೈಕ್​ ಮೇಲೆ ಕುಳಿತು ಕೆಲಸ ಮಾಡುತ್ತಿರುವ ಮಹಿಳೆ
ಗಂಗಾಧರ​ ಬ. ಸಾಬೋಜಿ
| Updated By: ನಯನಾ ರಾಜೀವ್|

Updated on:May 18, 2023 | 1:43 PM

Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್​ ಜಾಮ್​ ಆಗುವ ವಿಚಾರ ಹೊಸದೇನಲ್ಲ. ವಿಶ್ವದ 2ನೇ ಟ್ರಾಫಿಕ್​ ಜಾಮ್​ ನಗರಿ ಎನ್ನುವ ಕುಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ ಅದೆಷ್ಟೋ ಜನರು ಹಿಡಿಶಾಪ ಹಾಕದೆ ಇರಲಾರರು. ಆದರೆ ಸದ್ಯ ಮಹಿಳೆಯೊಬ್ಬರು ಟ್ರಾಫಿಕ್ ಜಾಮ್​ನಲ್ಲಿ  ಲ್ಯಾಪ್ ಟಾಪ್​ ಓಪನ್​ ಕೆಲಸ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಟ್ವಿಟರ್ ಬಳಕೆದಾರರೊಬ್ಬರು ಸೋಪಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬೆಂಗಳೂರಿನ ಉತ್ತುಂಗದ ಕ್ಷಣ ಎಂಬ ಶೀರ್ಷಿಕೆ ನೀಡಿದ್ದಾರೆ. ಫೋಟೋದಲ್ಲಿರುವ ಮಹಿಳೆ ರಾಪಿಡೋ ಬೈಕ್​ನಲ್ಲಿ ಕಚೇರಿಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ವೈರಲ್​ ಆದ ಫೋಟೋವನ್ನು ಕೋರಮಂಗಲ ಮತ್ತು ಅಗರ ಹೊರ ವರ್ತುಲ ರಸ್ತೆಯಲ್ಲಿ ತೆಗೆಯಲಾಗಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೋರಮಂಗಲ ಮತ್ತು ಅಗರ ರಸ್ತೆ ಸಂಚಾರ ಅವ್ಯವಸ್ಥೆಗೆ ಹೆಸರುವಾಸಿ ಆಗಿದೆ.

ಇದನ್ನೂ ಓದಿ: Chikmagluru: ಚಲಿಸುವ ಬಸ್​ನಲ್ಲಿ ಹೆರಿಗೆ ನೋವು; ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ಮಹಿಳಾ ಕಂಡಕ್ಟರ್.. ಪ್ರಶಂಸೆಯ ಮಹಾಪೂರ!

ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಅನೇಕರು ಫೋಟೋದಲ್ಲಿರುವ ಮಹಿಳೆಗೆ ಸಹಾನುಭೂತಿ ತೋರಿದ್ದಾರೆ. ಒತ್ತಡಗಳ ಮಧ್ಯೆ ನೀವು ದಿನಕ್ಕೆ 10 ಗಂಟೆಗಳಿಗೂ ಅಧಿಕ ಕಾಲ ಕೆಲಸ ಮಾಡುವುದನ್ನು ಕಲ್ಪಿಸಿಕೊಳ್ಳಿ ಎಂದಿದ್ದಾರೆ. ಸದ್ಯ ಆ ಮಹಿಳೆಗೆ ಬೇಕಾಗಿರುವುದು ಟ್ರಾಫಿಕ್​ ರಹಿತ ಸುಗಮ ಸಂಚಾರ. ಆ ರಸ್ತೆಯಲ್ಲಿ ಅವರು ತನ್ನ ಮನೆಯಿಂದ ಶಾಂತಿಯುತವಾಗಿ ಪ್ರಯಾಣಿಸಬಹುದು ಮತ್ತು 5 ಕಿ.ಮೀ ಪ್ರಯಾಣಕ್ಕೆ ಹೆಚ್ಚುವರಿ ಅವಧಿ ತೆಗೆದುಕೊಳ್ಳುವುದು ಉಳಿಯುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Belagavi News: ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ನಿರಂತರ ಹಾರಾಡಲಿದೆ ರಾಷ್ಟ್ರಧ್ವಜ; ಏನಿದರ ವಿಶೇಷ?

ಆ ಮಹಿಳೆ ಬೈಕಿನಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದಾರೆ ಅಂದರೆ ಒತ್ತಡ ಎಷ್ಟಿದೆ ಎಂದು ಊಹಿಸಿಕೊಳ್ಳಿ. ಉದ್ಯೋಗಿಗಳು ಎಷ್ಟು ಸಂವೇದನಾಶೀಲರಾಗಿದ್ದಾರೆ? ಆದರೆ ತನ್ನ ಸ್ವಂತ ಇಚ್ಛೆಯಿಂದಾಗಿ ಅವಳು ತಡವಾಗಿದ್ದರೆ ಅವಳನ್ನು ದೂಷಿಸಬೇಕಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:14 pm, Wed, 17 May 23