Belagavi News: ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ನಿರಂತರ ಹಾರಾಡಲಿದೆ ರಾಷ್ಟ್ರಧ್ವಜ; ಏನಿದರ ವಿಶೇಷ?

ಬೆಳಗಾವಿ ಕೋಟೆ ಕೆರೆಯ ಆವರಣದಲ್ಲಿ ದೇಶದ ಅತಿ ಎತ್ತರದ (361 ಅಡಿ ಎತ್ತರ) ಧ್ವಜ ಸ್ತಂಭಕ್ಕೆ ಮಂಗಳವಾರ ಮರು ಚಾಲನೆ ನೀಡಲಾಯಿತು.

Belagavi News: ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ನಿರಂತರ ಹಾರಾಡಲಿದೆ ರಾಷ್ಟ್ರಧ್ವಜ; ಏನಿದರ ವಿಶೇಷ?
ರಾಷ್ಟ್ರಧ್ವಜ
Follow us
Ganapathi Sharma
| Updated By: Digi Tech Desk

Updated on:May 17, 2023 | 4:10 PM

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಆವರಣದಲ್ಲಿ ದೇಶದ ಅತಿ ಎತ್ತರದ (361 ಅಡಿ ಎತ್ತರ) ಧ್ವಜ ಸ್ತಂಭಕ್ಕೆ ಮಂಗಳವಾರ ಮರು ಚಾಲನೆ ನೀಡಲಾಯಿತು. ಕಾರಣಾಂತರಗಳಿಂದ ಕೆಲವು ವರ್ಷಗಳ ಹಿಂದೆ ಈ ಸ್ತಂಭದಿಂದ ಕೆಳಗಳಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಶಾಸಕ ಆಸೀಫ್ (ರಾಜು) ಸೇಠ್ ಮಂಗಳವಾರ ಆರೋಹಣ ಮಾಡಿದರು. ಧ್ವಜ ಸ್ತಂಭವನ್ನು 2018 ರ ಮಾರ್ಚ್ 12 ರಂದು ಮಾಜಿ ಶಾಸಕ ಫಿರೋಜ್ ಸೇಠ್ ಅವರು ಉದ್ಘಾಟಿಸಿದ್ದರು. ಆದರೆ, ಮಳೆ ಮತ್ತು ಗಾಳಿಯಿಂದ ಧ್ವಜಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಅದನ್ನು ಅವರೋಹಣ ಮಾಡಿ ತೆಗೆದಿಡಲಾಗಿತ್ತು. ಆ ನಂತರ ಸ್ವಾತಂತ್ರ್ಯೋತ್ಸವ ದಿನ ಮಾತ್ರ ಇಲ್ಲಿ ಧ್ವಜಾರೋಹಣ ಮಾಡಲಾಗುತ್ತಿತ್ತು. ಇದರೊಂದಿಗೆ ನಾಲ್ಕು ವರ್ಷಗಳ ನಂತರ ಬೆಳಗಾವಿಯ ಕೋಟೆ ಕೆರೆಯ ಆವರಣದಲ್ಲಿ ಭಾರತದ ಅತಿ ಎತ್ತರದ ರಾಷ್ಟ್ರಧ್ವಜವನ್ನು ಮತ್ತೊಮ್ಮೆ ಹಾರಿಸಿದಂತಾಯಿತು. ಈ ಧ್ವಜಸ್ತಂಭವು ಪಂಜಾಬ್‌ನ ಅಟ್ಟಾರಿ-ವಾಘಾ ಗಡಿಯಲ್ಲಿರುವ ಧ್ವಜಸ್ತಂಭಕ್ಕಿಂತ 1 ಅಡಿ ಎತ್ತರವಾಗಿದೆ.

ಈ ಸ್ತಂಭದಲ್ಲಿ ಹಾರಾಡಿಸುವುದಕ್ಕೆಂದು ನಾಲ್ಕು ಧ್ವಜಗಳನ್ನು ಹೊಲಿಯಲಾಗಿದೆ ಮುಂಬೈ ಮೂಲದ ಕಂಪನಿಯೊಂದು ಈ ಧ್ವಜಗಳನ್ನು ಸಿದ್ಧಪಡಿಸಿದೆ ಎಂದು ಬೆಳಗಾವಿ ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಧ್ವಜಾರೋಹಣದ ನಂತರ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಆಸಿಫ್, ಬೆಳಗಾವಿ ನಗರದ ಕೋಟೆ ಕೆರೆ ಪ್ರದೇಶದಲ್ಲಿ ಅತಿ ಎತ್ತರದ ರಾಷ್ಟ್ರಧ್ವಜ ನಿರಂತರವಾಗಿ ಹಾರಾಡುತ್ತಿರಬೇಕು. ಈ ಬಗ್ಗೆ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:  Belagavi News; ಬೆಳಗಾವಿ – ಜೈಪುರ ಮಧ್ಯೆ ಹೊಸ ವಿಮಾನ, ವಾರಕ್ಕೆ ಮೂರು ದಿನ ಸೌಲಭ್ಯ

ಕೋಟೆ ಕೆರೆಯ ದಡದಲ್ಲಿ ನಿರಂತರವಾಗಿ ರಾಷ್ಟ್ರಧ್ವಜ ಹಾರಾಡಬೇಕು ಎಂಬುದು ಕಾಂಗ್ರೆಸ್ ಪ್ರಣಾಳಿಕೆಯ ಆಶಯವೂ ಆಗಿದೆ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರೂ ದೇಶದ ಧ್ವಜವನ್ನು ಗೌರವಿಸಬೇಕು. ರಾಷ್ಟ್ರಧ್ವಜವು ನಮ್ಮ ಸ್ವಾಭಿಮಾನ ಮತ್ತು ಗೌರವದ ಸಂಕೇತವಾಗಿದೆ. ದೇಶಭಕ್ತಿ ಹೃದಯದಿಂದ ಬರಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರೆಲ್ಲರೂ ರಾಷ್ಟ್ರಧ್ವಜವನ್ನು ನೋಡಬೇಕು ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Wed, 17 May 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?