Belagavi News; ಬೆಳಗಾವಿ – ಜೈಪುರ ಮಧ್ಯೆ ಹೊಸ ವಿಮಾನ, ವಾರಕ್ಕೆ ಮೂರು ದಿನ ಸೌಲಭ್ಯ
ಬೆಳಗಾವಿ ಮತ್ತು ಜೈಪುರ ಮಧ್ಯೆ ವೈಮಾನಿಕ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ ಉಭಯ ನಗರಗಳ ಮಧ್ಯೆ ಹೊಸ ವಿಮಾನ ಸಂಚಾರ ಆರಂಭಿಸಲಾಗಿದೆ. ನೂತನ ವಿಮಾನ ಸಂಚಾರ ಸೋಮವಾರ ಆರಂಭಗೊಂಡಿದೆ.
ಜೈಪುರ: ಬೆಳಗಾವಿ ಮತ್ತು ಜೈಪುರ ಮಧ್ಯೆ ವೈಮಾನಿಕ ಸಂಪರ್ಕ ಸುಧಾರಿಸುವ ನಿಟ್ಟಿನಲ್ಲಿ ಉಭಯ ನಗರಗಳ ಮಧ್ಯೆ ಹೊಸ ವಿಮಾನ ಸಂಚಾರ ಆರಂಭಿಸಲಾಗಿದೆ. ನೂತನ ವಿಮಾನ ಸಂಚಾರ ಸೋಮವಾರ ಆರಂಭಗೊಂಡಿದೆ. ಜೈಪುರದಿಂದ ವಿಮಾನ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಸೋಮವಾರ ಜೈಪುರ-ಬೆಳಗಾವಿ ನಡುವೆ ಹೊಸ ವಿಮಾನ ಸಂಚಾರ ಪ್ರಾರಂಭಿಸಲಾಯಿತು. ಹೊಸ ವಿಮಾನಯಾನ ವಾರದಲ್ಲಿ ಮೂರು ದಿನ ಕಾರ್ಯನಿರ್ವಹಿಸಲಿದೆ. ಸೋಮವಾರ ಬುಧವಾರ ಮತ್ತು ಶುಕ್ರವಾರ ವಿಮಾನ ಸಂಚಾರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ವಿಮಾನವು ಮಧ್ಯಾಹ್ನ 12.55ಕ್ಕೆ ಬೆಳಗಾವಿಯಿಂದ ಹೊರಟು 3.10 ಕ್ಕೆ ಜೈಪುರ ತಲುಪಲಿದೆ. 3.40ಕ್ಕೆ ಜೈಪುರದಿಂದ ಹೊರಟು 5.55ಕ್ಕೆ ಬೆಳಗಾವಿಗೆ ತಲುಪಲಿದೆ.
ಸೋಮವಾರ, ಬೆಳಗಾವಿಗೆ ಮೊದಲ ವಿಮಾನವು 50 ಪ್ರಯಾಣಿಕರೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಹಾರಾಟ ನಡೆಸಿತು. ಮಧ್ಯಾಹ್ನ 3:10ಕ್ಕೆ ವಿಮಾನ ಇಲ್ಲಿಗೆ ಬಂದಿಳಿದಾಗ ಜಲಫಿರಂಗಿ ಸೆಲ್ಯೂಟ್ ಕೂಡ ನೀಡಲಾಯಿತು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಜೈಪುರದಿಂದ ಮೂರು ಹೊಸ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Tue, 16 May 23