ಸಿಎಂ ಆಯ್ಕೆ ಮಧ್ಯೆ ಹೆಚ್ಚಿದ ಡಿಸಿಎಂ ಕೂಗು, ಶುರುವಾಯ್ತು ಪೈಪೋಟಿ: ರಾಮಲಿಂಗಾರೆಡ್ಡಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರೆಡ್ಡಿ ಸಂಘ ಆಗ್ರಹ

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.13 ರಂದು ಹೊರಬಿದ್ದಿದೆ. ಕಾಂಗ್ರೆಸ್​ ಸರ್ಕಾರ ಸಂಪೂರ್ಣ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರೆಡ್ಡಿ ಸಂಘದ ಅಧ್ಯಕ್ಷ ರಾಮಚಂದ್ರರೆಡ್ಡಿ ಮಾತನಾಡಿ ‘ರಾಮಲಿಂಗಾರೆಡ್ಡಿಯವರನ್ನ ಉಪಮುಖ್ಯಮಂತ್ರಿ ಮಾಡಲೇಬೇಕೆಂದು ರೆಡ್ಡಿ ಸಂಘದ ಅಧ್ಯಕ್ಷ ರಾಮಚಂದ್ರರೆಡ್ಡಿ ಆಗ್ರಹಿಸಿದ್ದಾರೆ.

ಸಿಎಂ ಆಯ್ಕೆ ಮಧ್ಯೆ ಹೆಚ್ಚಿದ ಡಿಸಿಎಂ ಕೂಗು, ಶುರುವಾಯ್ತು ಪೈಪೋಟಿ: ರಾಮಲಿಂಗಾರೆಡ್ಡಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರೆಡ್ಡಿ ಸಂಘ ಆಗ್ರಹ
ರಾಮಲಿಂಗಾರೆಡ್ಡಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 16, 2023 | 12:22 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Karnataka Assembly Elections 2023 Result) ಮೇ.13 ರಂದು ಹೊರಬಿದ್ದಿದೆ. ಕಾಂಗ್ರೆಸ್(Congress)​ ಸರ್ಕಾರ ಸಂಪೂರ್ಣ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರೆಡ್ಡಿ ಸಂಘದ ಅಧ್ಯಕ್ಷ ರಾಮಚಂದ್ರರೆಡ್ಡಿ ಮಾತನಾಡಿ ‘ರಾಮಲಿಂಗಾರೆಡ್ಡಿ(Ramalinga Reddy)ಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಸಿದ್ದರಾಮಯ್ಯ, ಡಿಕೆಶಿಗಿಂತಲೂ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಎಸ್​ವೈ ಇದ್ದಾಗ ರೆಡ್ಡಿ ಸಮಾಜದ ಮೂವರನ್ನು ಮಂತ್ರಿ ಮಾಡಿದ್ದರು. ಕಳೆದ ಬಾರಿ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿ ಅನುಭವಿಸಿದೆ. ಹೀಗಾಗಿ ರಾಮಲಿಂಗಾರೆಡ್ಡಿಯನ್ನು ಉಪಮುಖ್ಯಮಂತ್ರಿ ಮಾಡಲೇಬೇಕು ಎಂದು ರೆಡ್ಡಿ ಸಂಘದ ಅಧ್ಯಕ್ಷ ರಾಮಚಂದ್ರರೆಡ್ಡಿ ಆಗ್ರಹಿಸಿದ್ದಾರೆ.

ಇನ್ನು ಇಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಈಗಾಗಲೇ ಎಐಸಿಸಿಗೆ ನಾವು ಪತ್ರ ಬರೆದು ಆಗ್ರಹಿಸಿದ್ದೇವೆ. ನಮ್ಮ ಬೇಡಿಕೆಗೆ ಒಪ್ಪದಿದ್ರೆ ಮುಂದೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಲಿದೆ. ಕಾಂಗ್ರೆಸ್ ಹೈಕಮಾಂಡ್​ಗೆ ರೆಡ್ಡಿ ಸಮುದಾಯದಿಂದ ಖಡಕ್ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸ್ಥಾನದ ತಿಕ್ಕಾಟದ ನಡುವೆ ಇದೀಗ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಬಿಟಿಎಂ ಶಾಸಕ ರಾಮಲಿಂಗ ರೆಡ್ಡಿಗೆ ಡಿಸಿಎಂ ಸ್ಥಾನ ಕೊಡಲೇಬೇಕೆಂದು ರೆಡ್ಡಿ ಸಮುದಾಯ ರಾಮಲಿಂಗ ರೆಡ್ಡಿ ಪರ ಪಟ್ಟು ಹಿಡಿದಿದೆ. ಈಗ ಸಚಿವ ಸಂಪುಟ ರಚನೆ ಆಗ್ತಾ ಇದೆ. ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಆಗಿದ್ರು, ನಂತರ ರಾಮಲಿಂಗಾರೆಡ್ಡಿ ಅವರನ್ನು ಬೆಳೆಸಿಕೊಂಡು ಬಂದ್ವಿ, ರಾಮಲಿಂಗಾರೆಡ್ಡಿ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ ಎಂದರು.

ಇದನ್ನೂ ಓದಿ:ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ

ಕೆ.ಹೆಚ್.ಮುನಿಯಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಮಾದಾರ ಚನ್ನಯ್ಯ ಶ್ರೀ ಆಗ್ರಹ

ಚಿತ್ರದುರ್ಗ: ಇನ್ನು ಎಲ್ಲ ಸಮುದಾಯದವರ ಮಧ್ಯೆ ಇದೀಗ ಚಿತ್ರದುರ್ಗದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿಕೆ ನೀಡಿದ್ದು, ‘ಕೆ.ಹೆಚ್.ಮುನಿಯಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಡಿಸಿಎಂ ಸ್ಥಾನ ಸೃಷ್ಟಿಸಿದರೆ ಮಾದಾರ ಸಮಾಜಕ್ಕೆ ಆದ್ಯತೆ ನೀಡಿ, ದಕ್ಷಿಣ ಪ್ರಾಂತ್ಯದಲ್ಲಿ ಕೆ.ಹೆಚ್.ಮುನಿಯಪ್ಪ, ಉತ್ತರ ಪ್ರಾಂತ್ಯದಲ್ಲಿ ಆರ್.ಬಿ.ತಿಮ್ಮಾಪುರ್ ಇಬ್ಬರಿಗೆ ಉತ್ತಮ ಖಾತೆಯ ಮಂತ್ರಿ ಸ್ಥಾನ ನೀಡಬೇಕು ಎಂದು ಸುದ್ದಿಗೋಷ್ಟಿ ನಡೆಸಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಲು ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಒತ್ತಾಯ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಲು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿ ಅವರ ನಾಯಕತ್ವ ಇದೆ. ಸತೀಶ್ ಜಾರಕಿಹೊಳಿ ಡಿಸಿಎಂ ಮಾಡಬೇಕು ಎಂದು ಹೈಕಮಾಂಡ್‌‌ಗೆ ವಿನಂತಿ ಮಾಡುತ್ತೆನೆ. ನಾನು ಪ್ರಚಾರ ಭಾಷಣದಲ್ಲಿ ನೀಡಿದ ಹೇಳಿಕೆಗೆ ಬದ್ಧನಿದ್ದೇನೆ. ಇನ್ನು ಇದೇ ವೇಳೆ ಜಮೀರ್ ಅಹಮ್ಮದ್‌ಗೆ ಡಿಸಿಎಂಗೆ ಸ್ಥಾನ ನೀಡಲು ಮುಸ್ಲಿಂ ಸಮುದಾಯ ಆಗ್ರಹ ವಿಚಾರ ‘ಅದು ಹೈಕಮಾಂಡ್‌ಗೆ ಬಿಟ್ಟಿದ್ದು, ಈಗಾಗಲೇ ಎಲ್ಲಾ ಕಾಂಗ್ರೆಸ್ ಶಾಸಕರು ಹೈಕಮಾಂಡ್‌ ನಿರ್ಣಯ ಮಾಡಲಿ ಎಂದು ಹೇಳಿದ್ದೇವೆ ಎಂದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ