ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ

ಪ್ರಸಕ್ತ ರಾಜಕೀಯ ವಿಚಾರ ಸೇರಿದಂತೆ ಇತರೆ ವಿಚಾರಗಳ ಕುರಿತು ಪ್ರತಿ ವರ್ಷದಂತೆ, ಈ ವರ್ಷವು ನುಡಿದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಕಾಲಜ್ಞಾನ ಭವಿಷ್ಯ ಮತ್ತೆ ನಿಜವಾಗಿದೆ.

ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ
ಬಬಲಾದಿ ಶ್ರೀ ಸದಾಶಿವ ಮುತ್ಯಾ
Follow us
ವಿವೇಕ ಬಿರಾದಾರ
|

Updated on:May 15, 2023 | 3:19 PM

ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಅಬ್ಬರಕ್ಕೆ ತೆರೆ ಬಿದ್ದಿದೆ. ಮತದಾರರರು ಕಾಂಗ್ರೆಸ್​​​ಗೆ (Congress) ಜೈ ಎಂದರೆ ಬಿಜೆಪಿಗೆ (BJP) ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ (JDS) ಹಾಗೂ ಇತರೆ ಪಕ್ಷಗಳು ನಾಮಕಾವಸ್ಥೆಯಾಗಿವೆ. ಇದೀಗ ಸೋಲು ಗೆಲುವಿನ ಲೆಕ್ಕಾಚಾರ, ಅಧಿಕಾರದ ಗದ್ದುಗೆ ಏರಲು ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಪ್ರಸಕ್ತ ರಾಜಕೀಯ ವಿಚಾರ ಸೇರಿದಂತೆ ಇತರೆ ವಿಚಾರಗಳ ಕುರಿತು ಪ್ರತಿ ವರ್ಷದಂತೆ, ಈ ವರ್ಷವು ನುಡಿದ ಬಬಲಾದಿ ಶ್ರೀ ಸದಾಶಿವ ಮುತ್ಯಾರ (Babaladi Sadashiv Mutya) ಕಾಲಜ್ಞಾನ ಭವಿಷ್ಯ ಮತ್ತೆ ನಿಜವಾಗಿದೆ.

ಹೌದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಬಬಲಾದಿ ಗ್ರಾಮದಲ್ಲಿ ಚಂದ್ರಗಿರಿ ಮೂಲ ಮಹಾಸಂಸ್ಥಾನದ ಶ್ರೀ ಸದಾಶಿವ ಮುತ್ಯಾರ ಮಠವಿದೆ. ನೂರಾರು ವರ್ಷಗಳ ಐತಿಹ್ಯವನ್ನು ಹೊಂದಿರುವ ಶಕ್ತಿಕೇಂದ್ರವೆಂದೇ ಪ್ರಸಿದ್ದಿಯನ್ನು ಪಡೆದಿದೆ. ಪ್ರತಿ ವರ್ಷ ಶಿವರಾತ್ರಿ ವೇಳೆ ನಡೆಯುವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನು ನೇವೈದ್ಯ ಮಾಡುವ ಸಂಪ್ರದಾಯವಿದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ವೇಳೆ ನುಡಿಯುವ ಕಾಲಜ್ಞಾನ ಭವಿಷ್ಯ ಸುಳ್ಳಾಗಿರುವ ಉದಾಹರಣೆಯೇ ಇಲ್ಲ. ಸದಾಶಿವ ಮುತ್ಯಾ ಅವರು ನುಡಿದ ಭವಿಷ್ಯವನ್ನು ಚಿಕ್ಕಪ್ಪಯ್ಯ ತಾಳೆಗೆರೆಯಲ್ಲಿ ಬರೆದಿಟ್ಟಿದ್ದಾರೆ. ಆಯಾ ವರ್ಷ ಭವಿಷ್ಯನನ್ನು ಮಾತ್ರ ನೋಡಿ ಹೇಳಬೇಕೆಂಬ ನಿಯಮವಿದೆ.

ಅದರೆಂತೆ ಈ ಬಾರಿ 2023 ರ ಫೆಬ್ರುವರಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಬಬಲಾದಿ ಸದಾಶಿವ ಮಠದ ಪೀಠಾಧಿಪತಿಗಳು ನುಡಿದ ರಾಜಕಾರಣ ಭವಿಷ್ಯ ಕೂಡಾ ನಿಜವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಬಲಾದಿ ಮಠದ ರಾಜಕೀಯ ಭವಿಷ್ಯದ ಕುರಿತು ಚರ್ಚೆಯಾಗುತ್ತಿದೆ. 2023 ರ ಫೆಬ್ರುವರಿಯ ಜಾತ್ರೆಯಲ್ಲಿ ಮಠದ ಪೀಠಾಧಿಪತಿ ಶ್ರೀ ಸಿದ್ರಾಮಯ್ಯ ಹೋಳಿಮಠ ಅವರು “ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಉಂಟಾಗುತ್ತದೆ. ಪ್ರಜೆಗಳಲ್ಲಿ ಏರುಪೇರು. ಆಳುವ ಪ್ರಭುಗಳಿಗೆ ಸುಭೀಕ್ಷೆಯಿದೆ. ತನ್ನಿಂದ ತಾನೇ ಹಸನಾಗುತ್ತದೆ. ಜಾತಿ ಬೇಧ ಭಾವಕ್ಕೆ ಹೆಚ್ಚಿನ ಒಲವು ಸಿಗುತ್ತದೆ”ಎಂದು ನುಡಿದಿದ್ದರು.

ಇದನ್ನೂ ಓದಿ: Basanagouda Patil Yatnal Profile: ವಿಜಯಪುರದಲ್ಲಿ ಗೆಲುವು ಸಾಧಿಸಿದ ಬಸನಗೌಡ ಪಾಟೀಲ್ ಯತ್ನಾಳ್ ವ್ಯಕ್ತಿಚಿತ್ರ

ಸ್ವಾಮೀಜಿಯವರು ನುಡಿದದಂತೆ ರಾಜ್ಯ ರಾಜಕಾರಣದಲ್ಲಿ ತಿರುವು ಉಂಟಾಗಿ ಕಾಂಗ್ರೆಸ್​ ಭರ್ಜರಿ ಬಹುಮತ ಪಡೆದುಕೊಂಡಿದೆ. ಮತದಾರರು ಇಡೀ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಿದರು. ಬಿಜೆಪಿಯವರ ನಿರೀಕ್ಷೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಪರ ವಾಲಿದರು. ಆಳುವ ಪ್ರಭುಗಳಿಗೆ ಸುಭೀಕ್ಷೆಯಿದೆ ಎಂದು ಮಠದ ಪೀಠಾಧಿಪತಿಗಳು ಕಾಲಜ್ಞಾನದಲ್ಲಿ ಹೇಳಿದ್ದು ಯಾರೇ ಆಧಿಕಾರದ ಚುಕ್ಕಾಣಿ ಹಿಡಿದರೂ ತೊಂದರೆ ಇಲ್ಲದೆ ಆಡಳಿತ ನಡೆಸಬಹುದು ಎಂದು ಹೇಳಿದ್ದಾರೆ.

ತನ್ನಿಂದ ತಾನೇ ಹಸನಾಗುತ್ತದೆ ಜಾತಿ ಬೇಧ ಭಾವಕ್ಕೆ ಹೆಚ್ಚಿನ ಒಲವು ಸಿಗುತ್ತದೆ ಎಂಬುದರ ಅರ್ಥ ಒಂದು ಪಕ್ಷ ಆಧಿಕಾರ ತನ್ನಿಂದ ತಾನೇ ಕಳೆದುಕೊಳ್ಳುತ್ತದೆ ಹಾಗೂ ಜಾತಿ ಬೇಧದ ಆಧಾರದ ಮೇಲೆ ಆಧಿಕಾರ ಸಿಗುತ್ತದೆ ಎಂಬ ಚರ್ಚೆ ಆಗುತ್ತಿದೆ.

ಬಬಲಾದಿಯ ಕಾಲಜ್ಞಾನ ಭವಿಷ್ಯ ಪುರಾತನವಾಗಿದೆ. 500 ಕ್ಕೂ ಆಧಿಕ ವರ್ಷಗಳ ಹಿಂದೆ ಸದಾಶಿವ ಮುತ್ಯಾರು ಹೇಳಿದ್ದನ್ನು ಚಿಕ್ಕಪ್ಪಯ್ಯ ಮುತ್ಯಾರು ಕಾಲಜ್ಞಾನ ಭವಿಷ್ಯವನ್ನು ತಾಳೆಗೆರೆಯಲ್ಲಿ ಬರೆದಿಟ್ಟಿದ್ದಾರೆ. ಮಠದ ನಿಯಮಗಳಂತೆ ಆಯಾ ವರ್ಷದ ಭವಿಷ್ಯವನ್ನು ಮಾತ್ರ ಆಯಾ ವರ್ಷ ನೋಡಬೇಕು. ಪ್ರಸಕ್ತ ವರ್ಷದ ಭವಿಷ್ಯವನ್ನು ಮಾತ್ರ ನುಡಿಯಬೇಕೆಂಬ ನಿಯಮವಿದೆ. ಇಲ್ಲಿ ನುಡಿಯುವ ಭವಿಷ್ಯ ಎಂದೂ ಸುಳ್ಳಾಗಲ್ಲ.

ಈ ಬಾರಿಯ ಬಬಲಾದಿ ಸದಾಶಿವ ಮಠದ ಕಾಲಜ್ಞಾನ ಭವಿಷ್ಯ ರಾಜಕಾರಣದ ವಿಚಾರದಲ್ಲಿ ನಿಜವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಆಧಿಕಾರ ಸಿಕ್ಕ ಬಳಿಕ ಆಂತರಿಕ ಕಲಹ ಆಗುತ್ತದೆ. ಅದಕ್ಕಾಗಿ ಸಮರ್ಥವಾದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವವರಿಗೆ ಆಧಿಕಾರ ನೀಡಬೇಕೆಂಬ ತತ್ವವೂ ಕಾಲಜ್ಞಾನ ಭವಿಷ್ಯದಲ್ಲಿದೆ ಎಂದು ಪರಿಣಿತರ ಲೆಕ್ಕಾಚಾರವಾಗಿದೆ.

ಸದಾಶಿವ ಮಠದ ಕಾಲಜ್ಞಾನ ಭವಿಷ್ಯ ರಾಜಕೀಯ ವಿಚಾರದಲ್ಲಿ ನಿಜವಾಗಿದ್ದು ಇದೀಗ ಈ ಕುರಿತ ಮಾತುಗಳು ಜಿಲ್ಲೆಯಲ್ಲಿ ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿವೆ. ಕೆಲವರು ತಮ್ಮದೇ ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಕೇವಲ ರಾಜಕೀಯ ಭವಿಷ್ಯವಷ್ಟೇಯಲ್ಲಾ ಮಳೆ ಬೆಳೆಯ ಬಗ್ಗೆ ರೋಗ ರುಜಿನಗಳ ಬಗ್ಗೆಯೂ ಭವಿಷ್ಯ ನುಡಿಯಲಾಗಿದ್ದು ಅವೆಲ್ಲವು ನಿಜವಾಗುತ್ತಾ ಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Mon, 15 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ