ನಾಯಿ ಜಮೀನಿಗೆ ಬಂತೆಂದು ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾಯಾದಿಗಳು!

ಹುಟ್ಟುತ್ತಾ ಅಣ್ಣತಮ್ಮಂದಿರರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ವಿಜಯಪುರ ಜಿಲ್ಲೆಯಲ್ಲಿ ನಿಜವಾಗಿದೆ. ಹಳೇ ದ್ವೇಷಕ್ಕೆ ದಾಯಾದಿಗಳೇ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ನಾಯಿ ಜಮೀನಿಗೆ ಬಂತೆಂದು ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾಯಾದಿಗಳು!
ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾಯಾದಿಗಳು (ಸಾಂದರ್ಭಿಕ ಚಿತ್ರ)
Follow us
Rakesh Nayak Manchi
|

Updated on: May 16, 2023 | 3:06 PM

ವಿಜಯಪುರ: ಹುಟ್ಟುತ್ತಾ ಅಣ್ಣತಮ್ಮಂದಿರರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಇಲ್ಲಿ ನಿಜವಾಗಿದೆ. ಸಹೋರರ ಮಕ್ಕಳು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟು ಜಗಳ ತೆಗೆದು ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿವಾಗಿ ಹಲ್ಲೆ (Assault) ಮಾಡಿದ ಘಟನೆ ಇದಕ್ಕೆ ಉದಾಹರಣೆಯಾಗಿದೆ. ನಿನ್ನೆ ವಿಜಯಪುರ (Vijayapura) ಜಿಲ್ಲೆ ಇಂಡಿ ತಾಲೂಕಿನ ಮೈಲಾರ ಗ್ರಾಮದ ತೋಟದ ಮನೆಯ ಬಳಿ ದಾಯಾದಿಗಳೇ ಹೊಡೆದಾಡಿಕೊಂಡಿದ್ದಾರೆ.

ಮೈಲಾರ ಗ್ರಾಮದ ಪಾಟೀಲ್ ಕುಟುಂಬಗಳ ಮದ್ಯೆ ಹಳೆಯ ಜಗಳವಿತ್ತು. ನಿನ್ನೆ ಕುಟುಂಬಸ್ಥರ ಮನೆಯ ನಾಯಿ ಅದೇ ಕುಟುಂಬದ ಮತ್ತೋರ್ವ ಸದಸ್ಯನ ಜಮೀನಿಗೆ ಹೋಗಿದೆ. ಇದನ್ನೇ ಕಾರಣ ಮಾಡಿಕೊಂಡು ಹಳೇ ದ್ವೇಷವನ್ನು ಸಾಧಿಸಲು ನಿರ್ಧಿರಿಸಿದ ಅಶೋಕ ಪಾಟೀಲ್, ಅರವಿಂದ ಪಾಟೀಲ್, ಸಂಕೇತ ನಾರಾಯಣ ಘಾಟಗೆ, ತುಕಾರಾಂ ಪಾಟೀಲ್ ಎಂಬವರು ದಾಯಾದಿ ಸಹೋದರರರಾದ ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಮೇಲೆ ಮುಗಿ ಬಿದ್ದಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ

ಕೊಡಲಿ ಬಡಿಗೆ ಹಾಗೂ ರಾಡ್ ಬಳಸಿ ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಮನ ಬಂದಂತೆ ಹಲ್ಲೆ ನಡೆಸಿದ್ದು, ಬೂಬಾಸಾಹೇಬ ಪಾಟೀಲ್, ಸಂಜೀವ ಪಾಟೀಲ್, ಮಾರುತಿ ಮಾಟೀಲ್ ಅವರಿಗೆ ಗಂಭೀರ ಗಾಯಗಳಾಗಿವೆ. ತಲೆ, ಮುಖ, ಎದೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಬೂಬಾಸಾಹೇಬ ಪಾಟೀಲ್ ಎಂಬುವವರಿಗೆ ಹೆಚ್ಚಿನ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ತೀವ್ರ ಹಲ್ಲೆಗೆ ಒಳಗಾಗಿರುವ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹಲ್ಲೆ ನಡೆಸಿದ ಅಶೋಕ ಪಾಟೀಲ್, ಅರವಿಂದ ಪಾಟೀಲ್, ಸಂಕೇತ ನಾರಾಯಣ ಘಾಟಗೆ, ತುಕಾರಾಂ ಪಾಟೀಲ್ ವಿರುದ್ದ ದೂರು ಗಾಯಾಳುಗಳು ನೀಡಿದ್ದು, ಹೊರ್ತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈವರೆಗೆ ಯಾರ ಬಂಧನವಾಗಿಲ್ಲ. ತಮ್ಮ ಜೀವ ತೆಗೆಯಲು ಬಂದು ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕೆಂದು ಮೂವರು ಗಾಯಾಳುಗಳು ಒತ್ತಾಯ ಮಾಡಿದ್ದಾರೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಕ್ರೈಂ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್