ಸೋತಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು, ಇದನ್ನು ನೋಡಿ ಗದ್ಗದಿತರಾದ ಶ್ರೀರಾಮುಲು: ವಿಡಿಯೋ ವೈರಲ್
ಶ್ರೀರಾಮುಲು ಸೋಲಿಗೆ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ಅಭಿಮಾನಿಗಳ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಶ್ರೀರಾಮುಲು ಸಹ ಭಾವುಕರಾಗಿದ್ದಾರೆ.
ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಸೋಲುಕಂಡಿದ್ದಾರೆ. ಅದರಲ್ಲೂ 12 ಹಾಲಿ ಸಚಿವರು ಪರಾಭವಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿವ ಶ್ರೀರಾಮುಲು ಇದ್ದಾರೆ. ಹೌದು…ಮೊಳಕಾಲ್ಮೂರು ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮಾತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀರಾಮುಲು ಕಾಂಗ್ರೆಸ್ನ ನಾಗೇಂದ್ರ ವಿರುದ್ಧ ಮಂಡಿಯೂರಿದ್ದಾರೆ. ಇದು ಶ್ರೀರಾಮುಲು ಅವರ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಶ್ರೀರಾಮುಲು ಸೋಲಿಗೆ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ಅಭಿಮಾನಿಗಳ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಶ್ರೀರಾಮುಲು ಸಹ ಭಾವುಕರಾಗಿದ್ದಾರೆ. ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೆವು ಎಂದು ಅಭಿಮಾನಿಗಳು ಅತ್ತಿದ್ದಾರೆ. ಅಭಿಮಾನಿಗಳನ್ನ ಸಮಾಧಾನ ಮಾಡುವಲ್ಲಿ ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದು, ಇದೀಗ ಈ ವಿಡಿಯೋ ವೈರಲ್ ಭಾರೀ ವೈರಲ್ ಆಗುತ್ತಿದೆ.
Published on: May 16, 2023 11:51 AM
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

