ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ: ಮೇ 18ಕ್ಕೆ ಪ್ರಮಾಣ ವಚನ ಎಂದ ನೂತನ ಶಾಸಕ ಕೆಎನ್ ರಾಜಣ್ಣ

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.13 ರಂದು ಹೊರಬಿದ್ದಿದ್ದು, ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಗೆದ್ದು ಬಂದಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಈ ಮಧ್ಯೆ ಶಾಸಕ ಕೆಎನ್ ರಾಜಣ್ಣ ಮಾತನಾಡಿ ‘ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ, ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ ಎಂದರು.

ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ: ಮೇ 18ಕ್ಕೆ ಪ್ರಮಾಣ ವಚನ ಎಂದ ನೂತನ ಶಾಸಕ ಕೆಎನ್ ರಾಜಣ್ಣ
ಕೆ ಎನ್​ ರಾಜಣ್ಣ
Follow us
|

Updated on:May 16, 2023 | 11:35 AM

ತುಮಕೂರು; ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಫಲಿತಾಂಶ ಮೇ.13 ರಂದು ಹೊರಬಿದ್ದಿದೆ. ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಗೆದ್ದು ಬಂದಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಈ ಮಧ್ಯೆ ಸಿಎಂ ಆಯ್ಕೆ ಇನ್ನೂ ಕಗ್ಗಂಟು ಹಿನ್ನೆಲೆ ಮಾತನಾಡಿದ ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ(KN Rajanna) ‘ ಕಗ್ಗಂಟು ಇಲ್ಲ, ಯಾವ ಗಂಟು ಇಲ್ಲ, ಎಲ್ಲಾ ಸರಾಗವಾಗಿದೆ. ಇದೇ 18 ಕ್ಕೆ ಪ್ರಮಾಣ ವಚನವಾಗಬಹುದು. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ. ಎಲ್ಲರನ್ನ ಕರೆಸಿ ವಿಶ್ವಾಸ ತೆಗೆದುಕೊಂಡು ಸಮಾನಕರವಾದ ಘಟ್ಟ ತರಬೇಕೆಂಬ ಪ್ರಯತ್ನ ಅಷ್ಟೇ. ಶಿವಕುಮಾರ್ ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸ ಇದೆ. ಜೊತೆಗೆ ಸಿಎಂ ವಿಚಾರ ಇಂದು(ಮೇ.16) ಪೈನಲ್ ಆಗಲೇಬೇಕು ಎಂದರು.

ತುಮಕೂರಿನಲ್ಲಿ ಸಚಿವ ಸಂಪುಟ ರಚನೆ ವಿಚಾರ ಕುರಿತು ಕೆಎನ್ ರಾಜಣ್ಣ ಮಾತನಾಡಿ ‘ ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೆ ಪ್ರಮಾಣ ವಚನ ಮಾಡಲಿದ್ದು, ಮೊದಲ ದಿನವೇ ಕ್ಯಾಬಿನೆಟ್ ಮಾಡಿ, 10 ಕೆಜಿ ಅಕ್ಕಿ ಘೋಷಣೆ ಮಾಡುವ ಮೂಲಕ ಅನ್ನಭಾಗ್ಯ ಯೋಜನೆ ಜಾರಿಗೆ ತರೋದೆ ಮೊದಲ ತಿರ್ಮಾನ. ನಾನು ಸಚಿವ ಆಗಲೇಬೇಕು ಅದು ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನು ಕೇಳಲ್ಲ ಎಂದರು. ಜೊತೆಗೆ ಮಧುಗಿರಿ ಜಿಲ್ಲೆ ಕುರಿತು ‘ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನ ಮಾಡಲಾಗುವುದು. ನಾನು ಹೇಳಿದಂತೆ ನಡೆಯುವ ಮಧುಗಿರಿ ಜಿಲ್ಲೆ ಆಗಲಿದೆ ಎಂದರು.

ಇದನ್ನೂ ಓದಿ:ನಿಜವಾಯ್ತಾ ವಿಜಯಪುರದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ರಾಜಕೀಯ ಭವಿಷ್ಯ? ಏನದು ನುಡಿ, ಇಲ್ಲಿದೆ

ಇದೇ ವೇಳೆ ಬಿಜೆಪಿ ಸೋಲು ವಿಚಾರ ‘ 40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ನಾಲ್ಕು ವರ್ಷಗಳಲ್ಲಿ ಒಂದು ಜನಪರ ಕಾರ್ಯ ಬಿಜೆಪಿ ನೀಡಲಿಲ್ಲ. ಮೀಸಲಾತಿ ಕೂಡ ಎಪೆಕ್ಟ್ ಆಗಿದೆ. ಜನರಿಗೆ ಸರ್ಕಾರದ ಬಗ್ಗೆ ಬೇಸರವಾಗಿತ್ತು. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ ಎಂದರು. ಇನ್ನು ಡಿಜಿಪಿ ಪ್ರವಿಣ್ ಸೂದ್ ಸಿಬಿಐಗೆ ನೇಮಕ ‘ಡಿಕೆ ಶಿವಕುಮಾರ್ ಪ್ರವಿಣ್ ಸೂದ್ ರನ್ನ ಬೈದಿದ್ದರು. ಈಗ ಪ್ರವೀಣ್ ಸೂದ್​ರನ್ನ ಸಿಬಿಐಗೆ ನೇಮಿಸಿದ್ದಾರೆ. ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಲಿ ಎಂದು ನೇಮಿಸಿದ್ದಾರೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸಿಲು ಹಾಗೇ ಮಾಡಿದ್ದಾರೆ. ಹೆದರಿಸುವುದು, ಬ್ಲಾಕ್ ಮೇಲ್ ರಾಜಕರಣ ಮಾಡುವುದು ಅವರ ಕೆಲಸ ಎಂದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Tue, 16 May 23

‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?