ಒಬ್ಬರೇ ಸಿಎಂ-ಡಿಸಿಎಂ ಇದ್ದರೆ ಒಳ್ಳೆಯದು: ಸಚಿವನಾಗಿಯೇ ಇರ್ತೀನಿ ಎಂದ ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯಗೆ ಈ ಹಿಂದೆ ಆಡಳಿತ ನೀಡಿದ ಅನುಭವ ಇದೆ, ಕಳೆದ ಬಾರಿಯಂತೆ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ. ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು: ‘ಸಿದ್ದರಾಮಯ್ಯ(Siddaramaiah)ಗೆ ಈ ಹಿಂದೆ ಆಡಳಿತ ನೀಡಿದ ಅನುಭವ ಇದೆ, ಕಳೆದ ಬಾರಿಯಂತೆ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ. ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ ಎಂದು ಸತೀಶ್ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ.ಡಿಕೆ ಶಿವಕುಮಾರ್ ಡಿಸಿಎಂ ಇರಬಹುದು, ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಲೋಕಸಭೆ ಚುನಾವಣೆ ಕೂಡ ಮಾಡ್ತೇನೆ ಎಂದರು.
‘ಬೇರೆ ಸಮುದಾಯಕ್ಕೆ ಡಿಸಿಎಂ ಕೊಟ್ಟರೆ ನಾನೂ ಕೂಡ ಡಿಸಿಎಂ ಕ್ಲೇಮ್ ಮಾಡ್ತೇನೆ, ವೈಯಕ್ತಿಕವಾಗಿ ಡಿಸಿಎಂ ನನಗೆ ಬೇಡ, ಸಚಿವನಾಗಿಯೇ ಇರ್ತೀನಿ. ಡಿಕೆ ಶಿವಕುಮಾರ್ ಕೆಲಸ ಕೊಡುಗೆ ಬಹಳ ಇದೆ. ಸಮಾಧಾನಕರ ರೀತಿಯಲ್ಲೇ ಸಂಧಾನ ಆಗಿದೆ ಅವರ ಮಧ್ಯೆ, ನಾಲ್ಕು ಡಿಸಿಎಂ ಆಗೋದಕ್ಕಿಂತ ಒಬ್ಬರೇ ಇದ್ದರೆ ಒಳ್ಳೆಯದು, ಕ್ಯಾಪ್ಟನ್ ಒಬ್ಬರೇ ಇರಬೇಕು. ಇನ್ನು ಮುಂದೆ ಯಾವುದೇ ಗೊಂದಲ ಆಗೋದಿಲ್ಲ. ಅಂತಿಮವಾಗಿ ನಾವೆಲ್ಲರೂ ಕಾಂಗ್ರೆಸ್ನವರೇ, ಸಚಿವ ಸಂಪುಟ ವಿಚಾರದಲ್ಲಿ ಜಾತಿ ಧರ್ಮ ಬ್ಯಾಲೆನ್ಸ್ ಮಾಡಬೇಕು, ಬೆಳಗಾವಿಗೆ ಕನಿಷ್ಟ 3 ಸಚಿವ ಸ್ಥಾನದ ಡಿಮ್ಯಾಂಡ್ ಇದೆ ಎಂದರು.
ಇದನ್ನೂ ಓದಿ:ಸಿದ್ದರಾಮನ ಹುಂಡಿಯಲ್ಲಿ ಹಬ್ಬದ ಸಂಭ್ರಮ: ಸಿದ್ದರಾಮಯ್ಯನ ಫ್ಲೆಕ್ಸ್ಗೆ ಹಾಲಿನ ಅಭಿಷೇಕ
ಇನ್ನು ರಾಜ್ಯ ವಿಧಾನಸಭೆ ಚುನಾವಣಾ ಮತದಾನ ಭರ್ಜರಿಯಾಗಿ ನಡೆದಿದ್ದು, ಮೇ.13 ರಂದು ಫಲಿತಾಂಶ ಬಂದಿತ್ತು. ಅದರಂತೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಗೆದ್ದಿತ್ತು. ಇದಾದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಂದು(ಮೇ.13) ಇದಕ್ಕೆಲ್ಲ ತೆರೆ ಬಿದ್ದಿದ್ದು, ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನ ಅಲಂಕರಿಸಿದ್ದು, ನಾಳೆ (ಮೇ.18) ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ