Viral News: ಮಗುವಿನ ಚಿಕಿತ್ಸೆಗೆ ಹಣಬೇಕು, ಮಧ್ಯಪ್ರದೇಶ ಸಿಎಂ ಇದ್ದ ವೇದಿಕೆಗೆ ಮಗುವನ್ನು ಎಸೆದ ತಂದೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮದಲ್ಲಿ ತಂದೆಯೊಬ್ಬರು ತಮ್ಮ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ತನ್ನ ಮಗುವನ್ನು ವೇದಿಕೆಗೆ ಎಸೆದಿರುವ ಘಟನೆ ನಡೆದಿದೆ. ಇದೀಗ ಈ ಬಗ್ಗೆ ಭಾರೀ ವೈರಲ್ ಆಗಿದೆ.
ಜೀವನದಲ್ಲಿ ಒಬ್ಬ ಮನುಷ್ಯನಿಗೆ ಒಂದಲ್ಲ ಒಂದು ಸಮಸ್ಯೆಗಳು ಇರುತ್ತದೆ. ಜನರು ಚುನಾವಣೆ ಮೂಲಕ ಒಬ್ಬ ವ್ಯಕ್ತಿಯನ್ನು ನಮ್ಮ ಪ್ರತಿನಿಧಿ ಎಂದು ಆಯ್ಕೆ ಮಾಡಿ ಕಳಿಸುತ್ತಾರೆ. ಯಾಕೆಂದರೆ ಅವರು ನಮ್ಮ ಕೆಲಸ ಮಾಡಬೇಕು ಎಂದು, ಆ ಕಾರಣಕ್ಕೆ ಅವರು ನಮ್ಮ ಎಲ್ಲ ಕೆಲಸ ಮಾಡಬೇಕೆಂದಲ್ಲ, ನಮ್ಮ ಕೆಲಸ ಆಗಬೇಕೆಂದರೆ ಒಬ್ಬ ನಾಯಕ ಅಥವಾ ಮಂತ್ರಿಗೆ ಹೇಗೆ ತಿಳಿಸಬೇಕು ಹಾಗೆ ತಿಳಿಸಬೇಕು, ಆದರೆ ಮಧ್ಯಪ್ರದೇಶದಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಹೌದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮದಲ್ಲಿ ತಂದೆಯೊಬ್ಬರು ತಮ್ಮ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ತನ್ನ ಮಗುವನ್ನು ವೇದಿಕೆಗೆ ಎಸೆದಿರುವ ಘಟನೆ ನಡೆದಿದೆ. ಇದೀಗ ಈ ಬಗ್ಗೆ ಭಾರೀ ವೈರಲ್ ಆಗಿದೆ.
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ಒಬ್ಬ ವ್ಯಕ್ತಿ ಹಠಾತ್ತಾಗಿ ತನ್ನ ಮಗುವನ್ನು ಸಿಎಂ ಇರುವ ವೇದಿಕೆಗೆ ಎಸೆದಿದ್ದಾರೆ, ಮುಖೇಶ್ ಪಾಟೇಲ್ ಎಂಬ ಕಾರ್ಮಿಕ ತನ್ನ ಮಗುವಿನ ಚಿಕಿತ್ಸೆಗೆ ಸಹಾಯಕ್ಕಾಗಿ ಸಿಎಂ ಅವರ ಗಮನ ಸೆಳೆಯಬೇಕು ಎಂದು ತನ್ನ ಮಗುವನ್ನು ವೇದಿಕೆ ಎಸೆದಿದ್ದಾನೆ ಎಂದು ಹೇಳಲಾಗಿದೆ.
ಸಾರ್ವಜನಿಕರ ಗುಂಪಿನಿಂದ ಮಗುವೊಂದು ವೇದಿಕೆಯತ್ತ ಬರುತ್ತಿರುವುದನ್ನು ಕಂಡು ಭದ್ರತಾ ಸಿಬ್ಬಂದಿ ಮಗುವನ್ನು ಹಿಡಿದು, ತಾಯಿಗೆ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡು ಸಿಎಂ ತನ್ನ ಅಧಿಕಾರಿಗಳಿಗೆ ತಿಳಿಸಿ ಅವರು ಸಮಸ್ಯೆಯನ್ನು ತಿಳಿದುಕೊಳ್ಳುವಂತೆ ಹೇಳಿದ್ದಾರೆ. ಅಧಿಕಾರಿಗಳು ಆತನನ್ನು ವಿಚಾರಿಸಿದಾಗ ತನ್ನ ಮಗುವಿಗೆ ಹೃದಯದಲ್ಲಿ ರಂಧ್ರವಿದೆ, ಹಾಗಾಗಿ ನಮಗೆ ಮಗುವಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?
ಇದನ್ನೂ ಸಿಎಂ ಬಳಿ ಅಧಿಕಾರಿಗಳು ವಿವರಿಸಿದ್ದಾರೆ, ತಕ್ಷಣ ಆ ಮಗುವಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಈ ಬಗ್ಗೆ ಎಲ್ಲ ಹೊಣೆಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮುಖೇಶ್ ಪಟೇಲ್ ಅವರು ತಮ್ಮ ಪತ್ನಿ ನೇಹಾ ಮತ್ತು ಅವರ ಒಂದು ವರ್ಷದ ಮಗನೊಂದಿಗೆ ಸಾಗರದ ಕೆಸ್ಲಿ ತಹಸಿಲ್‌ನ ಸಹಜ್‌ಪುರ ಗ್ರಾಮದಲ್ಲಿ ವಾಸವಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಗುವಿನ ತಂದೆ ಮುಖೇಶ್ ಪಟೇಲ್ ಅವರು ನನ್ನ ಮಗುವಿಗೆ 3 ತಿಂಗಳು ಇರಬೇಕಾದರೆ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಹೇಳಿದರು, ಈವರೆಗೆ ನಾನು 4 ಲಕ್ಷಕ್ಕೂ ಹೆಚ್ಚು ಮಗುವಿಗೆ ಖರ್ಚು ಮಾಡಿದ್ದೇನೆ. ಆದರೆ ಇನ್ನೂ ಚಿಕಿತ್ಸೆ ನೀಡಬೇಕಿದೆ, ಈಗ ನನ್ನ ಮಗುವಿಗೆ 1 ವರ್ಷ, ಮತ್ತೆ ಚಿಕಿತ್ಸೆ ನೀಡಬೇಕಿದೆ ಅದಕ್ಕೆ 3.50 ಲಕ್ಷದ ವರೆಗೆ ಖರ್ಚು ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದಕ್ಕಾಗಿ ನಾನು ಪ್ರಯತ್ನಪಟ್ಟರು ನನಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಅನೇಕರ ಬಳಿ ನಾನು ಹಣ ಕೇಳಿದ್ದೇನೆ ಆದರೆ ಯಾರು ಸಹಾಯ ಮಾಡಿಲ್ಲ, ಈಗ ಮುಖ್ಯಮಂತ್ರಿಗಳು ನಮಗೆ ಸ್ವಲ್ಪ ಸಹಾಯ ಮಾಡಬಹುದು ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ನಾನು ಈ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋಗಿದ್ದೆ ಆದರೆ ನನಗೆ ಪೊಲೀಸರು ಒಳಗೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ