Viral Video: ಪುಟ್ಟ ಬಾಲಕಿಯ ಮೇಲೆ ಕಾಡೆಮ್ಮೆಯ ಭಯಾನಕ ದಾಳಿ, ಪೋಷಕರ ಮೇಲೆ ನೆಟ್ಟಿಗರು ಆಕ್ರೋಶ
ಪುಟ್ಟ ಹುಡುಗಿಯೊಬ್ಬಳು ದೈತ್ಯ ಕಾಡೆಮ್ಮೆಯ ದಾಳಿಗೆ ಮಾಡಿದ ಹೃದಯವಿದ್ರಾವಕ ಘಟನೆಯ ವೀಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಕಾಡು ಪ್ರಾಣಿಗಳ ಜೊತೆ ಆದಷ್ಟು ಜಾಗರೂಕವಾಗಿರಬೇಕು. ಅವುಗಳು ಯಾವಾಗ ಕ್ರೋಧಗೊಳ್ಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅದೆಷ್ಟೋ ಜನ ಕಾಡು ಪ್ರಾಣಿಗಳ ಕೋಪಕ್ಕೆ ತುತ್ತಾಗಿ ಬಲಿಯಾಗಿರುವ ಉದಾಹರಣೆಗಳಿವೆ. ಈ ರೀತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೇ ರೀತಿ ಕಾಡೆಮ್ಮೆಯೊಂದು ಹಠಾತ್ತನೇ ಕೋಪಗೊಂಡು ಜನರನ್ನು ಅಟ್ಟಾಡಿಸಿ, ಪುಟ್ಟ ಬಾಲಕಿಯನ್ನು ಕೊಂಬಿನಿಂದ ಎಗರಿಸಿದ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ನೋಡುಗರನ್ನು ಬೆಚ್ಚಿಬೀಳಿಸಿದೆ.
ಟೆರಿಫೈಯಿಂಗ್ ನೇಚರ್ (@TerrifyingNatur) ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ದೈತ್ಯ ಕಾಡೆಮ್ಮೆಯೊಂದು ಶಾಂತ ರೀತಿಯಲ್ಲಿ ಮೇಯುತ್ತಿತ್ತು. ಅಷ್ಟರಲ್ಲಿ ಅಲ್ಲಿಯೇ ಒಂದಷ್ಟು ಜನ ಮಾತನಾಡಿಕೊಂಡು ಹೋಗುತ್ತಿದ್ದರು, ಅವರ ಮಾತಿನ ಸದ್ದನ್ನು ಕಂಡು ಕೋಪಗೊಂಡ ಕಾಡೆಮ್ಮೆ ಅವರ ಮೇಲೆ ದಾಳಿ ಮಾಡಲು ಹೋಗುತ್ತದೆ, ಅಲ್ಲಿದ್ದ ಕೆಲವರು ಓಡಿ ಹೋಗಿ ಹೇಗೋ ದಾಳಿಯಿಂದ ತಪ್ಪಿಸಿಕೊಂಡರು, ಆದರೆ ದುರಾದೃಷ್ಟವಶಾತ್ ಪುಟ್ಟ ಬಾಲಕಿಯೊಂದು ಕಾಡೆಮ್ಮೆಯ ದಾಳಿಗೆ ಒಳಗಾಗಿದ್ದಾಳೆ. ಕೆರಳಿದ ಕಾಡೆಮ್ಮೆಯು ಪುಟ್ಟ ಬಾಲಕಿಯನ್ನು ತನ್ನ ಕೊಂಬಿನಿಂದ ಎಗರಸಿರುವ ಈ ವೀಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ:Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?
ಪ್ರಾಣಿಗಳ ಬಳಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಪೋಷಕರಾದವರು ಮಕ್ಕಳನ್ನು ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಪ್ರಾಣಿಗಳು ಯಾವಾಗ ಕೋಪಗೊಂಡು ದಾಳಿ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು. ಅದರಲ್ಲೂ ನಿಮ್ಮ ಪುಟ್ಟ ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಈ ರೀತಿಯ ಪ್ರಾಣಿಗಳ ದಾಳಿಯು ಮಕ್ಕಳಿಗೆ ದೈಹಿಕವಾಗಿ ಗಾಯಗಳನ್ನು ಮಾಡುವುದು ಮಾತ್ರವಲ್ಲದೆ, ಇದು ಮಗುವಿಗೆ ಮಾಸಿಕ ಆಘಾತವನ್ನು ನೀಡಬಹುದು.
Bison attacks child pic.twitter.com/IKxdlOf6xw
— Terrifying Nature (@TerrifyingNatur) May 15, 2023
ಟ್ವಿಟರ್ ನಲ್ಲಿ ಮೇ 15 ರಂದು ಹಂಚಿಕೊಳ್ಳಲಾದ ವೀಡಿಯೋ ಈವರೆಗೆ ಸುಮಾರು 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 23.9 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಕಾಡು ಪ್ರಾಣಿ ಅದರ ಬುದ್ಧಿಯನ್ನು ತೋರಿಸಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅದು ನನ್ನ ಮಗಳಾಗಿದ್ದರೆ, ಕಾಡೆಮ್ಮೆ ಇಷ್ಟೊತ್ತಿಗೆ ನಮ್ಮ ಆಹಾರವಾಗುತ್ತಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಮಗಳನ್ನು ಆ ಪರಿಸ್ಥಿತಿಗೆ ತಳ್ಳುವ ಮೂಲಕ ನೀವು ಪೋಷಕರಾಗಿ ವಿಫಲರಾಗಿದ್ದೀರಿ, ಕಾಡು ಪ್ರಾಣಿಗಳು ಸಾಕು ಪ್ರಾಣಿಗಳಲ್ಲ’ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ