Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ

Leopard Attack : ಮಹಾರಾಷ್ಟ್ರದ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಆ ಮನುಷ್ಯನ ಪಕ್ಕದಲ್ಲಿ ನಾಯಿ ಇರದಿದ್ದರೆ ಮುಂದೇನಾಗುತ್ತಿತ್ತು ಊಹಿಸಿ! ನೆಟ್ಟಿಗರು ಭಯಂಕರ ಗಾಬರಿಗೆ ಬಿದ್ದಿದ್ದಾರೆ.

Viral Video: ಮಲಗಿದ್ದ ನಾಯಿಯನ್ನು ರಾತ್ರೋರಾತ್ರಿ ಹಿಡಿದೆಳೆದೊಯ್ದ ಚಿರತೆ
ಮಲಗಿದ್ದ ನಾಯಿಯನ್ನು ಬೇಟೆಯಾಡಿ ಎಳೆದೊಯ್ದ ಚಿರತೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 18, 2023 | 11:06 AM

Leopard : ಕಾಡುಪ್ರಾಣಿಗಳು ಯಾಕೆ ನಾಡಿಗೆ ಬರುತ್ತವೆ? ಆಹಾರದ ಕೊರತೆಯಾದಾಗಲೇ ಅಲ್ಲವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ರಾತ್ರಿಯಾಗಿದೆ. ಕಬ್ಬು, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆಯುವ ತೋಟದ ಬಳಿ ಹಾಕಲಾದ ಶೆಡ್​. ದಿನವಿಡೀ ಕೆಲಸ ಮಾಡಿ ಹೈರಾಣಾದ ಮನುಷ್ಯರು ಗಾಡಿಗಳು ವಿಶ್ರಾಂತಿಯಲ್ಲಿ. ಒಂದು ಮಂಚದ ಮೇಲೆ ಒಬ್ಬ ಮನುಷ್ಯ ಗಾಢನಿದ್ರೆಯಲ್ಲಿದ್ದಾನೆ. ಪಕ್ಕದಲ್ಲಿ ನಾಯಿಯೊಂದು ಮಲಗಿದೆ. ಆಗ ನೋಡಿ ಮುಂದೇನಾಗುತ್ತದೆ ಎಂದು.  ​

ಸ್ವಲ್ಪ ಹೊತ್ತಿಗೆ ಚಿರತೆಯೊಂದು ಮನುಷ್ಯ ಮಲಗಿದಲ್ಲಿ ಬರುತ್ತದೆ. ಪಕ್ಕದಲ್ಲಿ ಮಲಗಿದ್ದ ನಾಯಿಯು ಎಚ್ಚೆತ್ತು ಒಂದೇ ಸಮನೇ ಬೊಗಳಲು ಆರಂಭಿಸುತ್ತದೆ. ಆದರೆ ಚಿರತೆ ಒಂದೇ ಏಟಿಗೆ ಅದನ್ನು ಬೇಟೆಯಾಡಿ ಎಳೆದುಕೊಂಡು ಹೋಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಯಂಕರ ಹೌಹಾರಿದ್ದಾರೆ. ಇನ್ನು ಪಕ್ಕದಲ್ಲಿ ಮಲಗಿದ್ದ ಆ ಮನುಷ್ಯನಿಗೆ ಏನು ನಡೆಯುತ್ತಿದೆ ತನ್ನ ಸುತ್ತ ಎಂದು ಅರಗಿಸಿಕೊಳ್ಳಲು ಎಷ್ಟು ಸಮಯ ಬೇಕಾಯಿತೋ ಏನೋ.

ಇದನ್ನೂ ಓದಿ : Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?

ಈ ವಿಡಿಯೋ ಅನ್ನು ಮೇ 16ರಂದು ಹಂಚಿಕೊಳ್ಳಲಾಗಿದೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ತಾನು ಮಲಗಿಕೊಂಡಾಗ ಏನಾಯಿತು ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಆ ಮನುಷ್ಯನ್ ಫ್ಯೂಸ್ ಆಫ್​ ಆಗಿರಲು ಸಾಕು ಎಂದು ಹೇಳಿದ್ದಾರೆ ಒಬ್ಬರು. ಅಯ್ಯೋ, ನಾನು ಬಾಲ್ಯದಲ್ಲಿ ಇಂಥ ದೃಶ್ಯಗಳನ್ನು ಕಣ್ಣಾರೆ ನೋಡಿದ್ದೇನೆ. ಆಗ ಮೇಕೆಗಳನ್ನು ಚಿರತೆಗಳು ಹೀಗೇ ಎಳೆದುಕೊಂಡು ಹೋಗುತ್ತಿದ್ದವು. ಈಗಿಲ್ಲಿ ನಾಯಿಯಷ್ಟೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?

ಅಕಸ್ಮಾತ್​ ಇಲ್ಲಿ ನಾಯಿ ಇರದಿದ್ದಲ್ಲಿ ಮಲಗಿಕೊಂಡ ಮನುಷ್ಯನ ಬಲಿ ಗ್ಯಾರಂಟಿ! ಎಂದು ಮತ್ತೊಬ್ಬರು ಹೇಳಿದ್ದಾರೆ. ಚಿರತೆಗಳು ಬುದ್ಧಿವಂತ ಜೀವಿಗಳು. ಜಿಮ್ ಕಾರ್ಬೆಟ್​ನ ಪುಸ್ತಕದಲ್ಲಿ ಚಿರತೆಗಳ ನಡೆವಳಿಕೆಯ ಬಗ್ಗೆ ಸಾಕಷ್ಟು ಒಳ್ಳೆಯ ಮಾಹಿತಿ ಇದೆ. ಅವು ಬದುಕುವ ಬಗೆಯನ್ನು ಹೇಗೆ ಕಂಡುಕೊಂಡಿವೆ ಎನ್ನುವುದನ್ನು ಈ ಪುಸ್ತಕ ಓದಿ ತಿಳಿದುಕೊಳ್ಳಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ.

ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ