Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

Underwater : ನಾನು ಇಷ್ಟಕ್ಕೇ ನನ್ನ ಈ ಯಾನವನ್ನು ನಿಲ್ಲಿಸುವುದಿಲ್ಲ. ಇನ್ನೂ 23 ದಿನಗಳು ಬಾಕಿ ಇವೆ. ಯುವಪೀಳಿಗೆಗೆ ಸ್ಫೂರ್ತಿ ತುಂಬಲಷ್ಟೇ ನಾನು ಇದನ್ನು ಕೈಗೊಂಡಿಲ್ಲ...

Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ
ಸಮುದ್ರದಾಳದಲ್ಲಿ 74 ದಿನಗಳ ಕಾಲ ಇದ್ದ ಡಾ. ಜೋಸೆಫ್​ ಡಿಟುರಿ
Follow us
| Updated By: ಶ್ರೀದೇವಿ ಕಳಸದ

Updated on:May 18, 2023 | 1:06 PM

Deep Sea: ನೀವು ನೀರಿನಾಳದೊಳಗೆ ಎಷ್ಟು ನಿಮಿಷಗಳಿರಬಹುದು? ಹೋಗಲಿ ಸುರಕ್ಷಾ ಸಾಧನಗಳನ್ನು ಧರಿಸಿಯೇ ಎಷ್ಟು ಗಂಟೆ ಇರಬಹುದು? ಅರ್ಧ ಗಂಟೆ, ಒಂದು ಗಂಟೆ? ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಮೆರಿಕದ ಡಾ. ಜೋಸೆಫ್ ಡಿಟುರಿ 74ದಿನಗಳ ಕಾಲ ನೀರಿನಾಳದೊಳಗಿದ್ದು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 100 ದಿನಗಳ ಕಾಲ ನೀರಿನಾಳದೊಳಗೆ ಇರಬೇಕು ಎಂದು ಈ ಮೊದಲು ಅವರು ಅಂದುಕೊಂಡಿದ್ದರು. ಆದರೆ ಸಾಧ್ಯವಾಗಿದ್ದು 74 ದಿನಗಳು. ಆದರೂ ಜೋಸೆಫ್​ ಇಷ್ಟಕ್ಕೇ ಸುಮ್ಮನಾಗಿಲ್ಲ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Joe Dituri (@drdeepsea)

ಫ್ಲೋರಿಡಾದ ಕೀ ಲಾರ್ಗೊದಲ್ಲಿರುವ ಜಲಾವೃತ ಪ್ರದೇಶದ ಆಳದಲ್ಲಿ ಇವರು ವಾಸವಾಗಿದ್ದಾರೆ. ಅವರ ಈ ಸಾಹಸದ ವಿಡಿಯೋ ಮತ್ತು ಮಾಹಿತಿಯನ್ನು ಅವರ ಇನ್​ಸ್ಟಾಗ್ರಾಂ ಪುಟದಲ್ಲಿ ನೋಡಬಹುದಾಗಿದೆ. ಅಲ್ಲದೆ ಈ ಮೇಲಿನ ವಿಡಿಯೋದಲ್ಲಿ ಅವರು ತಮ್ಮ ಈ ಸಾಹಸ ಸಂಶೋಧನೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Video : ‘ಮೂನ್​ವಾಕ್​’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ

‘ನನ್ನ ಕುತೂಹಲ ಮನೋಭಾವವೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. 73 ದಿನಗಳ ಕಾಲ ನಾನು ನೀರಿನಾಳದಲ್ಲಿ ವಾಸಿಸಿದೆ. ಇನ್ನೊಂದು ದಿನ ಕಳೆದರೆ 74 ದಿನಗಳಾಗುತ್ತವೆ. ನನ್ನ ಗುರಿ, ಯುವಪೀಳಿಗೆಗೆ ಸ್ಫೂರ್ತಿಯಾಗಿರಬೇಕೆನ್ನುವುದು ಮಾತ್ರವಲ್ಲ. ಸಮುದ್ರದ ಆಳ, ಅಲ್ಲಿಯ ಪರಿಸರ ಮತ್ತು ಜೀವಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಜಗತ್ತಿನ ವಿಜ್ಞಾನಿಗಳಿಗೆ ನನ್ನ ಈ ಸಾಹಸ ಮೈಲಿಗಲ್ಲಾಗಬೇಕು. ಈ ನನ್ನ ಯಾನ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಇನ್ನೂ 23 ದಿನಗಳು ಬಾಕಿ ಇವೆ.‘ ಎಂದಿದ್ದಾರೆ.

View this post on Instagram

A post shared by Joe Dituri (@drdeepsea)

ಅನೇಕರು ಈ ವಿಡಿಯೋಗೆ ಪ್ರತಿಕ್ರಯಿಸಿದ್ಧಾರೆ. ಡಾಕ್ಟರ್​ ನೀವು ಸಮುದ್ರದಾಳದಲ್ಲಿ ಉಣ್ಣಲು ತಿನ್ನಲು ಮತ್ತು ನೀರು ಕುಡಿಯಲು ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂದು ಹಲವಾರು ಜನ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಜೋಸೆಫ್​, ಯೂ ಟ್ಯೂಬ್​ನಲ್ಲಿ ನನ್ನ ಚಾನೆಲ್​ ನೋಡಿ, ಅದರಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿಯೂ ಇದೆ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:05 pm, Thu, 18 May 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ