Viral Video: ಪ್ಲಾಸ್ಟಿಕ್ ಮೀನು; ಚೆನ್ನೈನ ಸಮುದ್ರ ತೀರದಲ್ಲಿ ತ್ಯಾಜ್ಯದಿಂದ ಕಲಾಕೃತಿ
Beach : ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವ ಜನರಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ನೀಡುವಂತ ಕಾರ್ಯಕ್ರಮಗಳಾಗಬೇಕು ಎಂದಿದ್ಧಾರೆ ಅನೇಕರು. ಬೀಚ್ ಬಳಿಯ ಅಂಗಡಿಗಳನ್ನು ನಿಷೇಧಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Chennai : ಸಮುದ್ರವೆಂದಮೇಲೆ ಕೊಟ್ಟಿದ್ದನ್ನೆಲ್ಲ ಬಾಯಿತೆರೆದು ಎಳೆದುಕೊಳ್ಳುತ್ತದೆ. ಆದರೆ ಅದರಿಂದ ತೊಂದರೆಯಾಗುವುದು? ಅದರಲ್ಲೂ ಪ್ಲಾಸ್ಟಿಕ್ ಎಂಬ ವಿಷದಕೂಪದ ಬಗ್ಗೆ ಕೇಳಬೇಕೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಚೆನ್ನೈನ ಅಧಿಕಾರಿಗಳು ಸಮುದ್ರದೊಳಗಿನ ಪ್ಲಾಸ್ಟಿಕ್ ತ್ಯಾಜ್ಯದಿಂದ ಮೀನಿನ ರೂಪು ಕೊಟ್ಟು ಕಲಾತ್ಮಕಗೊಳಿಸಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಪ್ಲಾಸ್ಟಿಕ್ ಮೀನಿನ ಇನ್ಸ್ಟಾಲ್ಲೇಷನ್.
We have put up this installation made with plastic waste retrieved from the ocean at Besant Nagar Beach in Chennai to mark the Mega Beach Clean up programme organised today. It not only portrays the sad reality of pollution in our oceans but also raises an alarm about the serious… pic.twitter.com/Vn0a7jhuGj
ಇದನ್ನೂ ಓದಿ— Supriya Sahu IAS (@supriyasahuias) May 21, 2023
ಮೆಗಾ ಬೀಚ್ ಕ್ಲೀನ್ ಅಪ್ ಪ್ರೋಗ್ರಾಮ್ನಡಿ ಬೆಸೆಂಟ್ನಗರದ ಬೀಚಿನಲ್ಲಿ ಹೀಗೊಂದು ಸೃಜನಶೀಲ ಆಲೋಚನೆ ಕಾರ್ಯಗತಗೊಂಡಿದೆ. ‘ಮೆಗಾ ಬೀಚ್ ಕ್ಲೀನ್ ಅಪ್ ಕಾರ್ಯಕ್ರಮದಡಿ ಈ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ಪರಿಸರ ಮಾಲಿನ್ಯದಿಂದ ಜೀವವೈವಿಧ್ಯತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಉದ್ಧೇಶ’ ಎಂದು ಐಎಎಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ
ಸುಮಾರು 70,000 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನೂರಾರು ಜನ ರೀಟ್ವೀಟ್ ಮಾಡಿದ್ದಾರೆ. ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವ ಜನರಿಗೆ ಇನ್ನೂ ಹೆಚ್ಚಿನ ತಿಳಿವಳಿಕೆ ನೀಡುವಂತ ಕಾರ್ಯಕ್ರಮಗಳಾಗಬೇಕು ಎಂದಿದ್ಧಾರೆ ಅನೇಕರು. ಬೀಚ್ ಬಳಿಯ ಅಂಗಡಿಗಳನ್ನು ನಿಷೇಧಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ‘ಫಾರೆಸ್ಟ್ ಎಸೆನ್ಷಿಯಲ್’ ಮಾಡೆಲ್
ಅಂಗಡಿಗಳನ್ನು ನಿಷೇಧಿಸಿದರೆ ಸುತ್ತಮುತ್ತಲಿನ ಜನಜೀವನ ಹೇಗೆ ಸಾಗಬೇಕು? ಸೂಕ್ತನಿಯಮಾವಳಿಗಳನ್ನು ಕಟ್ಟುನಿಟ್ಠಾಗಿ ಪಾಲಿಸಬೇಕು. ಆ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:16 pm, Tue, 23 May 23