ಪೆಟ್ರೋಲ್​ ಬಂಕ್​ನಲ್ಲಿ 2 ಸಾವಿರ ರೂ. ನೋಟು ಕೊಟ್ಟಿದ್ದಕ್ಕೆ ಗ್ರಾಹಕನ ಬೈಕ್​ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ

ಈ ಹಿಂದೆ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೂಡ ಜನರು ಗೊಂದಲಕ್ಕೀಡಾಗಿದ್ದರು. ಈಗ 2 ಸಾವಿರ ರೂ. ಮುಖಬೆಲೆಯ ನೋಟು ಬದಲಾವಣೆಗೆ ಕುರಿತು ಜನರು ಚಿಂತೆಗೀಡಾಗಿದ್ದಾರೆ.

ಪೆಟ್ರೋಲ್​ ಬಂಕ್​ನಲ್ಲಿ 2 ಸಾವಿರ ರೂ. ನೋಟು ಕೊಟ್ಟಿದ್ದಕ್ಕೆ ಗ್ರಾಹಕನ ಬೈಕ್​ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ
ಪೆಟ್ರೋಲ್ ಬಂಕ್
Follow us
ನಯನಾ ರಾಜೀವ್
|

Updated on: May 23, 2023 | 12:02 PM

ಈ ಹಿಂದೆ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೂಡ ಜನರು ಗೊಂದಲಕ್ಕೀಡಾಗಿದ್ದರು. ಅದಾದ ಬಳಿಕ ಯಾರ್ಯಾರದೋ ಮಾತು ಕೇಳಿ 10 ರೂ ನಾಣ್ಯವನ್ನೂ ಕೂಡ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ. ಇದೀಗ 2 ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆಗೆ ಅವಕಾಶ ನೀಡಲಾಗಿದ್ದರೂ, ಕೆಲ ತಿಂಗಳುಗಳ ಕಾಲ ಬ್ಯಾಂಕ್​ಗಳಿಗೆ ನೋಟುಗಳನ್ನು ಜಮಾ ಮಾಡಲು ಕಾಲಾವಕಾಶವಿದ್ದರೂ ಕೂಡ 2 ಸಾವಿರ ರೂ ಮುಖಬೆಲೆಯ ನೋಟನ್ನು ಪಡೆಯಲು ಹಿಂದು ಮುಂದು ನೋಡುತ್ತಿದ್ದಾರೆ.

2000 ರೂ. ಮುಖಬೆಲೆಯ ನೋಟುಗಳ ಚಲಾವಣೆ, ವಿತರಣೆಯನ್ನ ಆರ್‌ಬಿಐ ಬಂದ್‌ ಮಾಡಿದೆ. ಇಂದಿನಿಂದ ಅಂದರೆ ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಕ್ಲಾರಿಟಿ ನೀಡಿದೆ. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿದೆ.

ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರೊಬ್ಬರು 200 ರೂ. ಮೌಲ್ಯದ ಪೆಟ್ರೋಲ್​ ಅನ್ನು ಬೈಕ್​ಗೆ ಹಾಕಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿಗೆ 2 ಸಾವಿರ ರೂ ಕೈಗಿತ್ತಿದ್ದಾರೆ. ಅದಕ್ಕೆ ಸಿಬ್ಬಂದಿ ಗಾಡಿಯಿಂದ 200 ರೂ. ಮೌಲ್ಯದ ಪೆಟ್ರೋಲ್​ ಅನ್ನು ಹಿಂಪಡೆದು 2 ಸಾವಿರ ರೂ. ವಾಪಸ್ ಕೊಟ್ಟು ಕಳುಹಿಸಿದ್ದಾರೆ. ಸ್ಕೂಟಿ ಸವಾರರೊಬ್ಬರು ಸೋಮವಾರ ಬೆಳಗ್ಗೆ ಕೊತ್ವಾಲಿ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್​ಗೆ ಬಂದಿದ್ದರು.

ಮತ್ತಷ್ಟು ಓದಿ:2000 Rs Note Exchange: ಇಂದಿನಿಂದ 2000 ರೂ. ಮುಖಬೆಲೆ ನೋಟು ಬದಲಾವಣೆಗೆ ಅವಕಾಶ, ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ

200 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿ 2000 ರೂಪಾಯಿ ನೋಟು ಕೊಟ್ಟರೂ ಪಂಪ್ ಸಿಬ್ಬಂದಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸರಕಾರ ಸೆ.30ರವರೆಗೆ 2000 ನೋಟು ಚಲಾವಣೆಯಲ್ಲಿದೆ ಎಂದು ಯುವಕ ಬಂಕ್ ಸಿಬ್ಬಂದಿಗೆ ತಿಳಿಸಿದರೂ, ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬೈಕ್​ನಿಂದ ಪೆಟ್ರೋಲ್ ಹಿಂದಕ್ಕೆ ತೆಗೆದಿದ್ದಾರೆ.

ಸ್ಟೇಷನ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಆಪರೇಟರ್ ಪಂಪ್‌ಗೆ ನೋಟಿಸ್ ಅಂಟಿಸಿದ್ದಾರೆ. ಎರಡು ಸಾವಿರಕ್ಕೆ ಚಿಲ್ಲರೆ ಇಲ್ಲ ಎಂದು ಬರೆಯಲಾಗಿದೆ. ಇದರ ಮೇಲೆ ಜನರು 2000 ರೂಪಾಯಿ ನೋಟುಗಳನ್ನು ಹಿಡಿದುಕೊಂಡು ಅಲೆದಾಡುವ ದೃಶ್ಯ ಕಂಡುಬರುತ್ತಿದೆ.

ಸಾಮಾನ್ಯ ನಾಗರಿಕರು ನಿತ್ಯ ಬ್ಯಾಂಕ್​ಗಳಿಗೆ ಹೋಗಲು ಸಾಧ್ಯವಾಗದು, ಆದರೆ ಪೆಟ್ರೋಲ್ ಬಂಕ್​, ಬಸ್, ಹೋಟೆಲ್​​ ಇನ್ನಿತರೆ ಸೇವೆಗಳಲ್ಲಿ ಸಿಬ್ಬಂದಿ ನಿತ್ಯ ಹಣವನ್ನು ಬ್ಯಾಂಕ್​ಗೆ ಜಮಾವಣೆ ಮಾಡುತ್ತಾರೆ, ಅವರು ಸೆಪ್ಟೆಂಬರ್​ವರೆಗೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದರೆ ಜನರಿಗೆ ಸ್ವಲ್ಪ ಅನುಕೂಲವಾಗಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ