ದೆಹಲಿ ಮದ್ಯ ನೀತಿ ಹಗರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ಜೂನ್ 1ರವರೆಗೆ ವಿಸ್ತರಣೆ

ದೆಹಲಿ ಮದ್ಯ ನೀತಿ ಹಗರಣ(Liquor Policy Case)ಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿ ಜೂನ್​ 1 ರವರೆಗೆ ವಿಸ್ತರಿಸಲಾಗಿದೆ.

ದೆಹಲಿ ಮದ್ಯ ನೀತಿ ಹಗರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ಜೂನ್ 1ರವರೆಗೆ ವಿಸ್ತರಣೆ
ಮನೀಶ್ ಸಿಸೋಡಿಯಾImage Credit source: Indian Express
Follow us
ನಯನಾ ರಾಜೀವ್
|

Updated on: May 23, 2023 | 12:37 PM

ದೆಹಲಿ ಮದ್ಯ ನೀತಿ ಹಗರಣ(Liquor Policy Case)ಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿ ಜೂನ್​ 1 ರವರೆಗೆ ವಿಸ್ತರಿಸಲಾಗಿದೆ. ವಿಚಾರಣೆ ವೇಳೆ ಮನೀಶ್ ಸಿಸೋಡಿಯಾ( Manish Sisodia) ಅವರು ಕುರ್ಚಿ, ಮೇಜು ಮತ್ತು ಪುಸ್ತಕಗಳಿಗೆ ಬೇಡಿಕೆ ಇಟ್ಟಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಅದೇ ಸಮಯದಲ್ಲಿ, ನ್ಯಾಯಾಲಯದಿಂದ ಹೊರಬರುವಾಗ, ದೆಹಲಿ ಸೇವೆಗಳ ಕುರಿತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಬಗ್ಗೆ ಮಾಧ್ಯಮಗಳು ಮನೀಶ್ ಸಿಸೋಡಿಯಾ ಅವರನ್ನು ಪ್ರಶ್ನಿಸಿದಾಗ, ಪ್ರಧಾನಿ ಮೋದಿ ತುಂಬಾ ಸೊಕ್ಕಿನ ಮನುಷ್ಯ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

ಅಬಕಾರಿ ಹಗರಣದ ಇಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಸೋಡಿಯಾ ಅವರ ನ್ಯಾಯಾಂಗ ಬಂಧನ ಮುಗಿದ ನಂತರ, ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಮತ್ತೊಮ್ಮೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

ಅಧ್ಯಯನದ ಉದ್ದೇಶಕ್ಕಾಗಿ ಕುರ್ಚಿ ಮತ್ತು ಮೇಜು ಒದಗಿಸುವಂತೆ ಅವರ ಮನವಿಯನ್ನು ಪರಿಗಣಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಮತ್ತಷ್ಟು ಓದಿ: ಮದ್ಯ ನೀತಿ ಹಗರಣ: ಮನೀಶ್​ ಸಿಸೋಡಿಯಾ ನ್ಯಾಯಾಂಗ ಬಂಧನದ ಅವಧಿ ಜೂನ್ 2 ರವರೆಗೆ ವಿಸ್ತರಣೆ

ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು ಮತ್ತು ಇಡಿ ಜೊತೆಗೆ ಮನೀಶ್ ಸಿಸೋಡಿಯಾ ಪ್ರಸ್ತುತ ಸಿಬಿಐ ಪ್ರಕರಣದಲ್ಲಿ ತಿಹಾರ್​ ಜೈಲಿನಲ್ಲಿದ್ದಾರೆ.

ಸಿಸೋಡಿಯಾ ಅಲ್ಲದೆ ಅರ್ಜುನ್ ಪಾಂಡೆ, ಬುಚ್ಚಿ ಬಾಬು ಗೋರಂಟ್ಲಾ ಮತ್ತು ಅಮನದೀಪ್ ಧಾಲ್ ಅವರ ಹೆಸರೂ ಚಾರ್ಜ್ ಶೀಟ್ ನಲ್ಲಿದೆ. ಅಬಕಾರಿ ನೀತಿ ಪ್ರಕರಣ (Excise Policy Case) ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿತ್ತು. ದೆಹಲಿ ಮದ್ಯದ ಅಬಕಾರಿ ನೀತಿ 2021-22ಕ್ಕೆ ಇಡಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿ ರೂಸ್ ಅವೆನ್ಯೂ ಕೋರ್ಟ್ ವಜಾಗೊಳಿಸಿತ್ತು.

ರೋಸ್ ಅವೆನ್ಯೂ ನ್ಯಾಯಾಲಯವು ಮೇ 8 ರಂದು ಅಬಕಾರಿ ನೀತಿ ವಿಷಯದ ಇಡಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 23 ರವರೆಗೆ ವಿಸ್ತರಿಸಿತ್ತು.

ಜೈಲಿನಲ್ಲಿರುವ ಎಎಪಿ ನಾಯಕನ ವಿರುದ್ಧ ಮೊದಲ ಬಾರಿಗೆ ಇಡಿ 2,000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ತಿಹಾರ್ ಜೈಲಿನಿಂದ ಇಡಿ ಬಂಧಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅವರನ್ನು ಮೊದಲು ಬಂಧಿಸಿತ್ತು.

ಈ ಮೊದಲು ಜೂನ್​ 2 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿತ್ತು, ಇಂದು ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ಜೂನ್​ 1 ರವರೆಗೆ ವಿಸ್ತರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ