ಬೆದರಿಕೆ ಯಾಕೆ ಹಾಕ್ತೀರಿ, ನನ್ನನ್ನು ಬಂಧಿಸಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಬಿಜೆಪಿಯವರು ಕೇಜ್ರಿವಾಲ್ ಅರೆಸ್ಟ್ ಆಗುತ್ತಾರೆ ಎಂದು ಹೇಳುತ್ತಿದ್ದಾರೆ.ಇಡಿ ಮತ್ತು ಸಿಬಿಐ ಅನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಮುಂದಿನವರು ಯಾರು ಎಂದು ಅವರಿಗೆ ಹೇಗೆ ಗೊತ್ತು? ಅವರು ಸಿಬಿಐಗೆ ಹೇಳಿದ್ದಾರಾ ಅಥವಾ ಸಿಬಿಐ ಅವರಿಗೆ ಹೇಳಿದೆಯಾ?

ಬೆದರಿಕೆ ಯಾಕೆ ಹಾಕ್ತೀರಿ, ನನ್ನನ್ನು ಬಂಧಿಸಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: May 08, 2023 | 3:12 PM

ನಾನು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ (Satya Pal Malik) ಅವರ ಸಂದರ್ಶನ ವೀಕ್ಷಿಸಿದ್ದೇನೆ. ಅದರಲ್ಲಿ ಅಲ್ಲಿ ಮಲಿಕ್ ಅವರು ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ. ನನ್ನನ್ನು ಬಂಧಿಸಿ, ಯಾಕೆ ಬೆದರಿಕೆಗಳನ್ನು ಹಾಕುತ್ತೀರಿ? ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.ದೆಹಲಿ ಅಬಕಾರಿ ನೀತಿ ಹಗರಣ (liquor scam) ಆರೋಪಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಅವರು, ಕೇಜ್ರಿವಾಲ್ ಬಹುತ್ ಛೋಟಿ ಚೀಜ್ ಹೈ, ಪೂರಾ ದೇಶ್ ದೇಖ್ ರಹಾ ಹೈ(ಕೇಜ್ರಿವಾಲ್ ತುಂಬಾ ಸಣ್ಣ ವ್ಯಕ್ತಿ, ಇಡೀ ದೇಶವೇ ನೋಡುತ್ತಿದೆ). ಅವರು ಪ್ರತಿದಿನ ನಮ್ಮ ಮಾನಹಾನಿ ಮಾಡುತ್ತಿದ್ದಾರೆ. ಯಾಕೆಂದರೆ ಆಮ್ ಆದ್ಮಿ ಪಕ್ಷವು ದೇಶದ ಏಕೈಕ ‘ಇಮಾಂದಾರ್’ ಪಕ್ಷ (ಪ್ರಾಮಾಣಿಕ ಪಕ್ಷ) ಎಂದು ಇಡೀ ದೇಶಕ್ಕೆ ತಿಳಿದಿದೆ. ನೀವು ಬಂಧಿಸಲು ಬಯಸಿದರೆ, ಅದನ್ನು ಮಾಡಿ. ಯಾಕೆ ಬೆದರಿಕೆ ಹಾಕುತ್ತಿದ್ದೀರಿ?. ಬಿಜೆಪಿಯವರು ಕೇಜ್ರಿವಾಲ್ ಅರೆಸ್ಟ್ ಆಗುತ್ತಾರೆ ಎಂದು ಹೇಳುತ್ತಿದ್ದಾರೆ.ಇಡಿ ಮತ್ತು ಸಿಬಿಐ ಅನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಮುಂದಿನವರು ಯಾರು ಎಂದು ಅವರಿಗೆ ಹೇಗೆ ಗೊತ್ತು? ಅವರು ಸಿಬಿಐಗೆ ಹೇಳಿದ್ದಾರಾ ಅಥವಾ ಸಿಬಿಐ ಅವರಿಗೆ ಹೇಳಿದೆಯಾ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.

ಇಲ್ಲಿ ಯಾವುದೇ ಮದ್ಯ ಹಗರಣ ನಡೆದಿಲ ಎಂದು ಪುನರುಚ್ಚರಿಸಿದ ಕೇಜ್ರಿವಾಲ್, ಎಎಪಿಗೆ ₹ 100 ಕೋಟಿ ಲಂಚ ನೀಡಿದ ದಕ್ಷಿಣ ಲಾಬಿ ಇದೆ ಎಂಬ ಆರೋಪವಿದೆ. ಸಿಬಿಐ ಮತ್ತು ಇಡಿ ಕೂಡ ನ್ಯಾಯಾಲಯದಲ್ಲಿ ಅದನ್ನೇ ಹೇಳಿವೆ .ಆದರೆ ಈ ಆಪಾದಿತ 100ಕೋಟಿಯಲ್ಲಿ ₹ 70 ಕೋಟಿ ಬಗ್ಗೆ ಯಾವುದೇ ಪುರಾವೆಗಳಿಲ್ಲ. ರಾಜೇಶ್ ಜೋಶಿ ಎಂಬವರು ದಕ್ಷಿಣ ಲಾಬಿಯಿಂದ ಉಳಿದ ₹ 30 ಕೋಟಿಯನ್ನು ಸಾಗಿಸಿದರು ಮತ್ತು ಅದನ್ನು ಕೆಲವು ಎಎಪಿ ನಾಯಕರಿಗೆ ನೀಡಿದರು ಎಂದು ಅವರು ಹೇಳಿದರು. ಅವರ ಬಳಿ ಯಾವುದೇ ಪುರಾವೆಗಳಿಲ್ಲ, ಸಾಕ್ಷಿಗಳಿಲ್ಲ, ಇದು ಕೇವಲ ಆರೋಪ ಅಷ್ಟೇ ಎಂದಿದ್ದಾರೆ ಕೇಜ್ರಿವಾಲ್.

ಈಗ ಮೇ 6ರ ನ್ಯಾಯಾಲಯದ ಆದೇಶದಲ್ಲಿ ರಾಜೇಶ್ ಜೋಶಿ ಈ ಹಣ ತಂದಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳುತ್ತದೆ. ₹1 ಕೊಟ್ಟಿದ್ದರ ಬಗ್ಗೆಯೂ ಸಾಕ್ಷಿ ಇಲ್ಲ. ರಾಜೇಶ್ ಜೋಶಿ ಹಣ ತರದಿದ್ದರೆ, ಆಪ್ ನಾಯಕರು ಹಣ ಪಡೆದಿಲ್ಲ, ಹಾಗಾದರೆ ಪ್ರಕರಣವೇನು? ರಾಜೇಶ್ ಜೋಶಿಗೆ ಜಾಮೀನು ಸಿಕ್ಕಿದೆ.

ಗೋವಾ ಚುನಾವಣೆಯಲ್ಲಿ ಎಎಪಿ ₹ 100 ಕೋಟಿ ಖರ್ಚು ಮಾಡಿದೆ ಎಂದು ಅವರು ಹೇಳಿದರು. ಅವರು ಗೋವಾದಲ್ಲಿ ನಮ್ಮೊಂದಿಗೆ ಕೆಲಸ ಮಾಡಿದವರೆಲ್ಲರ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದರು. ನಂತರ ಎಎಪಿ ಸುಮಾರು ₹ 19 ಲಕ್ಷ – ₹ 20 ಲಕ್ಷ ಹಣವನ್ನು ಖರ್ಚು ಮಾಡಿದೆ ಎಂದು ಇಡಿ ಹೇಳಿದೆ. ಉಳಿದವು ಚೆಕ್‌ನಲ್ಲಿವೆ. ಇದು ಎಎಪಿಗೆ ಪ್ರಾಮಾಣಿಕತೆಯ ದೊಡ್ಡ ಪ್ರಮಾಣಪತ್ರವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅವರು ಸಂಜಯ್ ಸಿಂಗ್ ಅವರ ಹೆಸರನ್ನು ಸಹ ಹಾಕಿದರು ಮತ್ತು ನಂತರ ಇಡಿ ಇದು ತಪ್ಪಾಗಿ ಸಂಭವಿಸಿದೆ ಎಂದು ಹೇಳಿದರು. ಸಂಜಯ್ ಸಿಂಗ್ ಅವರು ಇಡಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅವರು ಊಹಿಸಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ರೋಸ್ ಅವೆನ್ಯೂ ನ್ಯಾಯಾಲಯದ ಇತ್ತೀಚಿನ ಜಾಮೀನು ಆದೇಶದ ಆಧಾರದ ಮೇಲೆ ಎಎಪಿ ಮದ್ಯದ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಮದ್ಯದ ಪ್ರಕರಣದ ಇಬ್ಬರು ಆರೋಪಿಗಳಾದ ರಾಜೇಶ್ ಜೋಶಿ ಮತ್ತು ಗೌತಮ್ ಮಲ್ಹೋತ್ರಾ ಅವರಿಗೆ ಶನಿವಾರ ಜಾಮೀನು ಮಂಜೂರಾಗಿದೆ. ಆರೋಪಿಗಳಾದ ರಾಜೇಶ್ ಜೋಶಿ ಮತ್ತು ಗೌತಮ್ ಮಲ್ಹೋತ್ರಾ ಅವರ ವಿರುದ್ಧದ ಪ್ರಕರಣವನ್ನು ಪ್ರಾಥಮಿಕವಾಗಿ ನಿಜ ಎಂದು ಪರಿಗಣಿಸಲು ಅವರ ವಿರುದ್ಧದ ಸಾಕ್ಷ್ಯಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Watch: ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್ ಬಳಿ ಬ್ಯಾರಿಕೇಡ್ ತೆಗೆದು ನುಗ್ಗಿದ ರೈತ ಸಂಘಟನೆ

ಇಡೀ ಮದ್ಯದ ಹಗರಣ ಸುಳ್ಳು. ನಾವು ಮೊದಲಿನಿಂದಲೂ ಅದನ್ನು ಹೇಳುತ್ತಿದ್ದೆವು. ಈಗ ನ್ಯಾಯಾಲಯಗಳು ಕೂಡ ಅದನ್ನು ಹೇಳಲು ಪ್ರಾರಂಭಿಸಿವೆ. ಇದು ಎಎಪಿಯಂತಹ ಪ್ರಾಮಾಣಿಕ ಪಕ್ಷವನ್ನು ಕೆಡಿಸಲು ಬಿಜೆಪಿಯ ಹತಾಶ ಕ್ರಮ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್