Watch: ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್ ಬಳಿ ಬ್ಯಾರಿಕೇಡ್ ತೆಗೆದು ನುಗ್ಗಿದ ರೈತ ಸಂಘಟನೆ
ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸವು ಜಂತರ್ ಮಂತರ್‌ಗೆ ರೈತರ ಮೆರವಣಿಗೆಯ ನಡುವೆ ದೆಹಲಿ ಪೊಲೀಸರು ಭಾನುವಾರ 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದರು. ದೆಹಲಿ ಪೊಲೀಸರ ಪ್ರಕಾರ, ಜನರು ತಮ್ಮ ಖಾಸಗಿ ವಾಹನಗಳು ಮತ್ತು ಬಸ್‌ಗಳಲ್ಲಿ ದೆಹಲಿಗೆ ಪ್ರವೇಶಿಸಬಹುದು. ಟ್ರಾಕ್ಟರ್ ಟ್ರಾಲಿಗಳಲ್ಲಿ ಪ್ರವೇಶಿಸುವಂತಿಲ್ಲ.
ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಕುಸ್ತಿಪಟುಗಳು (wrestlers’ protest) ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳಿಗೆ ಬೆಂಬಲ ನೀಡಲು ಭಾರತೀಯ ಕಿಸಾನ್ ಒಕ್ಕೂಟದ ರೈತರು ಸೋಮವಾರ ಜಂತರ್ ಮಂತರ್ ತಲುಪಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ಹಂಚಿಕೊಂಡ ವಿಡಿಯೊದಲ್ಲಿ ಬಿಕೆಯು ಸದಸ್ಯರು ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನಾ ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿರುವುದನ್ನು ಕಾಣುತ್ತದೆ. ರೈತರ ಗುಂಪು ಜಂತರ್ ಮಂತರ್‌ಗೆ ಬಂದಿದ್ದಾರೆ. ಅವರು ಪ್ರತಿಭಟನಾಸ್ಥಳವನ್ನು ತಲುಪಲು ಅವಸರದಲ್ಲಿದ್ದರು, ಅದರಲ್ಲಿ ಕೆಲವರು ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಹತ್ತಿದ್ದು, ಇನ್ನು ಕೆಲವರು ಅದನ್ನು ಕಿತ್ತು ಬಿಸಾಡಿದ್ದಾರೆ. ಅವರ ಪ್ರವೇಶಕ್ಕೆ ಅನುಕೂಲವಾಗುವಂತೆ ಪೊಲೀಸ್ ತಂಡವು ಬ್ಯಾರಿಕೇಡ್‌ಗಳನ್ನು ಹಿಂಭಾಗದಲ್ಲಿ ಇರಿಸಿದೆ ಎಂದು ಡಿಸಿಪಿ ಪ್ರಣವ್ ತಯಾಲ್ ಹೇಳಿದ್ದಾರೆ.
ಪ್ರತಿಭಟನಾಕಾರರು ಧರಣಿ ಸ್ಥಳಕ್ಕೆ ತಲುಪಿದ್ದಾರೆ. ಸಭೆ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದೆಹಲಿಗೆ ಪ್ರವೇಶಿಸದಂತೆ ಪೊಲೀಸರು ತಡೆದ ನಂತರ ಮಹಿಳೆಯರು ಸೇರಿದಂತೆ ಬಿಕೆಯು (ಏಕ್ತಾ ಉಗ್ರಾನ್) ಕಾರ್ಯಕರ್ತರು ಟಿಕ್ರಿ ಗಡಿಯಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ ಒಂದು ದಿನದ ನಂತರ ಇದು ಬಂದಿದೆ. ಇವರು ಬ್ಯಾರಿಕೇಡ್‌ಗಳನ್ನು ಮುರಿದು ರಾಜಧಾನಿ ಪ್ರವೇಶಿಸಿದ್ದರು.
ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಜಂತರ್ ಮಂತರ್‌ಗೆ ರೈತರ ಮೆರವಣಿಗೆಯ ನಡುವೆ ದೆಹಲಿ ಪೊಲೀಸರು ಭಾನುವಾರ 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದರು. ದೆಹಲಿ ಪೊಲೀಸರ ಪ್ರಕಾರ, ಜನರು ತಮ್ಮ ಖಾಸಗಿ ವಾಹನಗಳು ಮತ್ತು ಬಸ್‌ಗಳಲ್ಲಿ ದೆಹಲಿಗೆ ಪ್ರವೇಶಿಸಬಹುದು. ಟ್ರಾಕ್ಟರ್ ಟ್ರಾಲಿಗಳಲ್ಲಿ ಪ್ರವೇಶಿಸುವಂತಿಲ್ಲ.
#WATCH | Farmers break through police barricades as they join protesting wrestlers at Jantar Mantar, Delhi
The wrestlers are demanding action against WFI chief and BJP MP Brij Bhushan Sharan Singh over allegations of sexual harassment. pic.twitter.com/k4d0FRANws
— ANI (@ANI) May 8, 2023
ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಭಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು, ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾನುವಾರ, ಕುಸ್ತಿಪಟುಗಳು ತಮ್ಮ ಬೇಡಿಕೆಗಳನ್ನು ಸ್ವೀಕರಿಸಲು ಕೇಂದ್ರಕ್ಕೆ ಮೇ 21 ಗಡುವು ನೀಡಿದರು. ಖಾಪ್‌ಗಳು, ರೈತ ಮತ್ತು ಮಹಿಳಾ ಸಂಘಟನೆಗಳ ಸುಮಾರು 2,000 ಬೆಂಬಲಿಗರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ತಾವು ದೀರ್ಘಕಾಲದ ಪ್ರತಿಭಟನೆಗೆ ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ನೀಡಲಿದ್ದಾರೆ ಆಗ್ರಾದ ವಕೀಲರು
ಮತ್ತೊಂದು ಬೆಳವಣಿಗೆಯಲ್ಲಿ, ತನ್ನ ವಿರುದ್ಧ ಕುಸ್ತಿಪಟುಗಳ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ತಪ್ಪು ಮಾಡಬೇಡಿ, ತನಿಖೆಯ ಫಲಿತಾಂಶಕ್ಕೆ ಕಾಯಿರಿ ಎಂದು ಡಬ್ಲ್ಯುಎಫ್‌ಐ ಮುಖ್ಯಸ್ಥ ಸಿಂಗ್ ಸಂಯುಕ್ತ ಕಿಸಾನ್ ಮೋರ್ಚಾಗೆ ಹೇಳಿದ್ದಾರೆ
ಕೈಸರ್‌ಗಂಜ್‌ನ ಬಿಜೆಪಿ ಸಂಸದರಾಗಿರುವ ಸಿಂಗ್, ತಾನು ನಿರಪರಾಧಿ ಎಂದು ಹೇಳಿದ್ದು, ಕುಸ್ತಿಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತಂದಿದ್ದರಿಂದ ತನ್ನನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Mon, 8 May 23