Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ

Reunion : ಭಾರತೀಯ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್​ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್​ ಅಬ್ದುಲ್​ ಅಜೀಜ್​ ಕರ್ತಾರಪುರದ ಕಾರಿಡಾರಿನಲ್ಲಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ನೋಡಿ ವಿಡಿಯೋ.

Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ
ಅಕ್ಕ ಮಹೇಂದ್ರ ಕೌರ್, ತಮ್ಮ ಶೇಖ್ ಅಬ್ದುಲ್ ಅಜೀಜ್​ ಪುನರ್ಮಿಲನ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 23, 2023 | 11:30 AM

Partition : 1947ರ ಆಗಸ್ಟ್​ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಗೊಂಡವು. ಬಂಗಾಳ ಮತ್ತು ಪಂಜಾಬ್​ ಪ್ರಾಂತ್ಯಗಳೂ ವಿಭಜನೆಗೊಂಡು ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶ ಎಂಬ ಹೊಸ ದೇಶಗಳು ರೂಪುಗೊಂಡವು. ಈ ಸಂದರ್ಭದಲ್ಲಿ ಅನೇಕ ಕುಟುಂಬ ಸದಸ್ಯರು ಬೇರ್ಪಟ್ಟರು. ಇದೀಗ 75 ವರ್ಷಗಳ ನಂತರ ಕರ್ತಾರ್​​ಪುರದಲ್ಲಿ ಅಣ್ಣ ತಂಗಿಯ ಜೋಡಿ ಒಂದಾಗಿದೆ! ನೋಡಿ ಈ ಕೆಳಗಿನ ವಿಡಿಯೋ.

ಪಿಎಂಯು ಕತಾರ್​ಪುರ್ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಇದನ್ನು ದಾಖಲಿಸಿದೆ. ಸ್ಥಳೀಯ ಆಡಳಿತ ವರ್ಗ ಮತ್ತು ಕುಟುಂಬಸ್ಥರು ಈ ಪುನರ್ಮಿಲನ ಸಭೆಯಲ್ಲಿ ಒಳಗೊಂಡಿದ್ದಾರೆ. ಭಾರತೀಯ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್​ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್​ ಅಬ್ದುಲ್​ ಅಜೀಜ್​ ಕರ್ತಾರಪುರದ ಕಾರಿಡಾರಿನಲ್ಲಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಪ್ಯಾರೀಸ್​ ಟೂರ್​​ ವಿಥ್​ ಅಜ್ಜಿ; ದಂತವೈದ್ಯರ ಈ ನಡೆಗೆ ಭಾವುಕರಾಗುತ್ತಿರುವ ನೆಟ್ಟಿಗರು

ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬ್​ನ ​ಸರ್ದಾರ್​ ಭಜನ್​ ಸಿಂಗ್​ ಕುಟುಂಬವು ಹರಿದು ಹಂಚಿಹೋಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿ ತಿಳಿದ ಕುಟುಂಬಸ್ಥರು ಒಡಹುಟ್ಟಿದವರನ್ನು ಒಂದಾಗಿಸಿದರು. ನಂತರ ಎರಡೂ ಕುಟುಂಬದವರು ಕರ್ತಾರಪುರದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಭೇಟಿ ಕೊಟ್ಟು ಒಟ್ಟಿಗೇ ಊಟ ಮಾಡಿದರು. ಪುನರ್ಮಿಲನದ ಈ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು. ನಂತರ ಕರ್ತಾರಪುರ ಆಡಳಿತ ಸಿಬ್ಬಂದಿಯು ಎಲ್ಲರಿಗೂ ಸಿಹಿ ಹಂಚಿತು.

ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು

ಕರ್ತಾರ್​ಪುರ ಕಾರಿಡಾರ್​, ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಗುರುದ್ವಾರ ದರ್ಬಾರವು ಸಾಹಿಬ್​ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ ಕೊನೆಯ ವಿಶ್ರಾಂತಿ ಸ್ಥಳವನ್ನು ಮತ್ತು ಭಾರತದ ಪಂಜಾಬ್​​ನ ಗುರುದಾಸ್​ಪುರ ಜಿಲ್ಲೆಯ ಡೇರಾಬಾಬಾ ನಾನಕ್​ ದೇವಾಲಯವನ್ನು ಸಂಧಿಸುತ್ತದೆ. 4 ಕಿಮೀ ಉದ್ದದ ಈ ಕಾರಿಡಾರ್ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ವೀಸಾಮುಕ್ತ ಪ್ರವೇಶವಾಗಿರುತ್ತದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ  

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ