Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು

Instagram : ಮೇಡಮ್​, ಎಷ್ಟೋ ಸ್ಥೂಲಕಾಯದವರು ಖಿನ್ನತೆಗೆ ಜಾರಿದ್ದಾರೆ. ಅಂಥವರಿಗೆ ನೀವು ವಿಶೇಷ ಸ್ಪೂರ್ತಿ ಎಂದಿದ್ದಾರೆ ಕೆಲವರು. ಮಚ್ಚಾ ನಿನ್ನ ಡವ್!​ ಎಂದು ಯಾರೋ ಯಾರ್ಯಾರನ್ನೋ ಟ್ಯಾಗ್ ಮಾಡಿದ್ದಾರೆ. ನೀವೇನಂತೀರಿ?

Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು
ದಿವ್ಯಾ ವಿಕ್ರಮ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 22, 2023 | 11:34 AM

Dance: ನಿಮ್ಮ ಗಾತ್ರವು ನಿಮ್ಮನ್ನು ವ್ಯಾಖ್ಯಾನಿಸುವುದಿಲ್ಲ ಎನ್ನುತ್ತಾರೆ ಇನ್​ಸ್ಟಾಗ್ರಾಂನ ಈ ಕಲಾವಿದೆ ದಿವ್ಯಾ ವಿಕ್ರಮ್​. ಇದೀಗ ವೈರಲ್ ಆಗಿರುವ ಇವರ ಈ ವಿಡಿಯೋ ಮಿಲಿಯನ್​ಗಟ್ಟಲೇ ಜನರಿಂದ ವೀಕ್ಷಿಸಲ್ಪಟ್ಟಿದೆ. ಲಕ್ಷಾಂತರ ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಇವರ ಆತ್ಮವಿಶ್ವಾಸ ಮಾತ್ರ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ. ಸಾರ್ವಜನಿಕ ನೃತ್ಯ ಕಾರ್ಯಕ್ರಮಗಳನ್ನೂ ಕೊಡುವ ಈಕೆ 2 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್​​ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dhivyaa vikram (@snazzytamilachi)

ತೂಕ ಎನ್ನುವುದು ಎಂದಿಗೂ ಗಂಭೀರವಾದ ವಿಷಯವೇ ಅಲ್ಲ ಎನ್ನಿಸುತ್ತಿದೆ ನಿಮ್ಮ ನೃತ್ಯವನ್ನು ನೋಡುತ್ತಿದ್ದರೆ ಎಂದಿದ್ದಾರೆ ಅನೇಕರು. ತೂಕ ಮತ್ತು ಸೌಂದರ್ಯ ಮುಖ್ಯವಲ್ಲ. ಛಂದನೆಯ ಹೃದಯ ಮುಖ್ಯ ಎಂದು ಒಬ್ಬರು ಹೇಳಿದ್ಧಾರೆ. ನಿಮ್ಮ ಆಸಕ್ತಿ, ಆತ್ಮವಿಶ್ವಾಸ, ಶಕ್ತಿ ನಿಜಕ್ಕೂ ಸ್ತುತ್ಯಾರ್ಹ, ತೂಕವಂತರಿಗೆ ನೀವು ನಿಜಕ್ಕೂ ಮಾದರಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಆಕಾರ ಗಾತ್ರ ಮುಖ್ಯವಲ್ಲ, ಪ್ರತಿಭೆ ಮುಖ್ಯ. ಅದಕ್ಕೆ ತಕ್ಕಂಥ ಧೈರ್ಯ ನಿಮಗಿದೆ ಒಳ್ಳೆಯದಾಗಲಿ ಎಂದಿದ್ದಾರೆ ಅನೇಕರು. ಆದರೆ ಕೆಲವರು ಕೆಟ್ಟ ಅಭಿರುಚಿಯಿಂದ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ, ನಿನಗೆ ಈಕೆ ಒಳ್ಳೆಯ ಜೋಡಿ ಎಂದಿದ್ದಾರೆ. ಇನ್ನೂ ಕೆಲವರು, ಮುಂಬರುವ ದಿನಗಳಲ್ಲಿ ನನ್ನ ಅಣ್ಣನ ಹೆಂಡತಿಯಾಗಲಿದ್ಧಾರೆ ಎಂದಿದ್ದಾರೆ. ಮಚ್ಚಾ ನಿನ್ನ ಡವ್​ ಎಂದೊಬ್ಬರು ಯಾರನ್ನೋ ಟ್ಯಾಗ್ ಮಾಡಿದ್ದಾರೆ.

ಆಕೆ ದಪ್ಪಗಿರುವುದು ಅವಳ ಸಮಸ್ಯೆ ಅಲ್ಲ. ದಯವಿಟ್ಟು ಆಕೆಯನ್ನು ಮತ್ತು ಅವಳ ಉತ್ಸಾಹವನ್ನು ಪ್ರೋತ್ಸಾಹಿಸಿ ಎಂದು ಕೆಲವರು ಮನವಿ ಮಾಡಿಕೊಂಡಿದ್ಧಾರೆ. ಮೇಡಮ್​, ಅನೇಕರು ಸ್ಥೂಲಕಾಯದಿಂದ ಬಳಲುತ್ತ ಖಿನ್ನತೆಗೆ ಜಾರಿದವರಿದ್ದಾರೆ. ಅಂಥವರ ಮಧ್ಯೆ ನೀವು ನನಗೆ ವಿಶೇಷವಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರಿಗೆ ಅನೇಕ ವಿಷಯಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಅವಕಾಶವಿದೆ. ಎಲ್ಲರ ಆತ್ಮವಿಶ್ವಾಸ, ಅಭಿವ್ಯಕ್ತಿ, ಅಭಿರುಚಿಗೆ ತಕ್ಕಂಥ ವೇದಿಕೆ ಇದಾಗಿದೆ. ಹುಟ್ಟಿದ ಮೇಲೆ ಬದುಕನ್ನು ಛಂದಗೊಳಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಹಿಂಜರಿಕೆಯನ್ನು ಹಿಂದೆಯೇ ಬಿಡಬೇಕು. ಹೀಗಳೆಯುವವರನ್ನು ಕಡೆಗಣಿಸಬೇಕು. ಅವರಿಗೆ ದೇವರು ಬಹಳ ಒಳ್ಳೆಯದನ್ನೇ ಮಾಡಲಿ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:29 am, Mon, 22 May 23

ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ