Viral: ಸಾಮರ್ಥ್ಯಕ್ಕೆ ಮೀರಿ ವಯಾಗ್ರ ನುಂಗಿದ, 24 ಗಂಟೆ ನಿರಂತರ ಶೃಂಗಾರ ಲೀಲೆಯಲ್ಲಿ ತೊಡಗಿದ, ಕೊನೆಗೆ ಮೈಂಡ್​​ ಬ್ಲಾಂಕ್​​ ಟ್ವಿಸ್ಟ್​ ಸಿಕ್ಕಿದೆ!

‘ಬಾಧಿತ‘ನನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಂತ್ರಸ್ತ ಮನ್ಮಥ ಪುರುಷ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

Viral: ಸಾಮರ್ಥ್ಯಕ್ಕೆ ಮೀರಿ ವಯಾಗ್ರ ನುಂಗಿದ, 24 ಗಂಟೆ ನಿರಂತರ ಶೃಂಗಾರ ಲೀಲೆಯಲ್ಲಿ ತೊಡಗಿದ, ಕೊನೆಗೆ ಮೈಂಡ್​​ ಬ್ಲಾಂಕ್​​ ಟ್ವಿಸ್ಟ್​ ಸಿಕ್ಕಿದೆ!
ಸಾಮರ್ಥ್ಯಕ್ಕೆ ಮೀರಿ ವಯಾಗ್ರ ನುಂಗಿದ, 24 ಗಂಟೆ ನಿರಂತರ ಶೃಂಗಾರ ಲೀಲೆಯಲ್ಲಿ ತೊಡಗಿದ, ಕೊನೆಗೆ Image Credit source: Getty Images
Follow us
ಸಾಧು ಶ್ರೀನಾಥ್​
|

Updated on: May 23, 2023 | 11:49 AM

ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೂಲತಃ ಜರ್ಮನಿಯ ಪುರುಷನೊಬ್ಬ (German Tourist) ಶಿಶ್ನ ನಿಮಿರುವಿಕೆಗಾಗಿ ವಯಾಗ್ರಗಳನ್ನು ನುಂಗಿ 24 ಗಂಟೆಗಳಿಗೂ ಹೆಚ್ಚು ಕಾಲ ಮನ್ಮಥಲೀಲೆಯಲ್ಲಿ (Love Making) ತೊಡಕಿಸಿಕೊಳ್ಳುತ್ತಾನೆ. ಅದರಿಂದಾಗಿ ತೀವ್ರ ನೋವಿನ ಭಾದೆಯಿಂದ ಆಸ್ಪತ್ರೆಗೆ (Hospital) ಧಾವಿಸುತ್ತಾನೆ. ಶಿಶ್ನದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿ ರಾದ್ಧಾಂತವಾಗಿದೆ. ಕೊನೆಗೆ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸಿಸರ್​ ಹಿಡಿದು ಕೈಹಾಕಿದರು. ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.

50 ವರ್ಷ ವಯಸ್ಸಿನ ಜರ್ಮನ್ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಲೈಂಗಿಕತೆ ಶಿಖರಗಳನ್ನು ತಲುಪಲು ಬಯಸುತ್ತಾನೆ. ಅದಕ್ಕಾಗಿ ಅವರು ದೀರ್ಘಕಾಲದವರೆಗೆ ಸಂಭೋಗಿಸಲು ಹೆಚ್ಚಿನ ಪ್ರಮಾಣದಲ್ಲಿ ಔಷಧಗಳನ್ನು ಸೇವಿಸಿದ್ದಾರೆ. ಆ ಮಾದಕದ್ರವ್ಯದ ಪರಿಣಾಮ ಅವರು 24 ಗಂಟೆಗಳ ಸುದೀರ್ಘ ಕಾಲ ಸೆಕ್ಸ್ ಮ್ಯಾರಥಾನ್‌ನಲ್ಲಿ ತೊಡಗುತ್ತಾರೆ.

ಆದರೆ, ಕಥೆಗೆ ಆ ನಂತರ ತಿರುವು ಸಿಕ್ಕಿದೆ. ನಿಜವಾದ ಸಮಸ್ಯೆ ಎದುರಾಗಿದೆ. ಶಿಶ್ನದಲ್ಲಿ ನಿಧಾನವಾಗಿ ನೋವು ಪ್ರಾರಂಭವಾಗಿದೆ. ಅದರ ನಂತರ ನೋವು ತೀವ್ರವಾಗಿದೆ. ಅದರಿಂದ ಆಘಾತಕ್ಕೊಳಗಾದ ವ್ಯಕ್ತಿ ಮರುಕ್ಷಣವೇ ಕಾರು ಏರಿ ಆಸ್ಪತ್ರೆಯತ್ತ ಓಡಿದ್ದಾನೆ. ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

Also Read: ವಿಶಿಷ್ಟ ಪ್ರೇಮ ವಿವಾಹ: 22 ವರ್ಷದ ಮಲೇಷಿಯಾದ ಯುವಕ ತನ್ನ ಮಾಜಿ ಶಾಲಾ ಟೀಚರ್ ಜೊತೆಗೆ ಪ್ರೀತಿ

‘ಬಾಧಿತ‘ನನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಂತ್ರಸ್ತ ಮನ್ಮಥ ಪುರುಷ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇದು ಅವನ ಶಿಶ್ನ ಮತ್ತು ಸ್ಕ್ರೋಟಮ್​ ನೆಕ್ರೋಸಿಸ್​ಗೆ ( scrotum necrosis) ಕಾರಣವಾಗಿದೆ. ಸದ್ಯ ವೈದ್ಯರು ಮನ್ಮಥನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ