ವಿಶಿಷ್ಟ ಪ್ರೇಮ ವಿವಾಹ: 22 ವರ್ಷದ ಮಲೇಷಿಯಾದ ಯುವಕ ತನ್ನ ಮಾಜಿ ಶಾಲಾ ಟೀಚರ್ ಜೊತೆಗೆ ಪ್ರೀತಿಗೆ ಬಿದ್ದು, ಮದುವೆಯಾದ!

Different love marriage: ವಯಸ್ಸು ಕೇವಲ ಒಂದು ಸಂಖ್ಯೆ. ವರನ ವಯಸ್ಸು 22. ವಧುವಿಗೆ 48. ಹೌದು, ಶಿಕ್ಷಕಿಯನ್ನು ಪ್ರೀತಿಸಿ ಮದುವೆಯಾದ ವಿದ್ಯಾರ್ಥಿಯ ಕತೆಯಿದು.

ವಿಶಿಷ್ಟ ಪ್ರೇಮ ವಿವಾಹ: 22 ವರ್ಷದ ಮಲೇಷಿಯಾದ ಯುವಕ ತನ್ನ ಮಾಜಿ ಶಾಲಾ ಟೀಚರ್ ಜೊತೆಗೆ ಪ್ರೀತಿಗೆ ಬಿದ್ದು, ಮದುವೆಯಾದ!
22 ವರ್ಷದ ಮಲೇಷಿಯಾದ ಯುವಕ ತನ್ನ ಮಾಜಿ ಕ್ಲಾಸ್ ಟೀಚರ್ ಜೊತೆಗೆ ಪ್ರೀತಿಗೆ ಬಿದ್ದು, ಮದುವೆಯಾದ!
Follow us
ಸಾಧು ಶ್ರೀನಾಥ್​
|

Updated on: May 15, 2023 | 10:06 AM

ವಯಸ್ಸು, ಸಂಪತ್ತು, ಸೌಂದರ್ಯ, ಯಾವುದೂ ಪ್ರೀತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸುವ ಅನೇಕ ಪ್ರೇಮಕಥೆಗಳು ಪ್ರಪಂಚದಾದ್ಯಂತ ಆಗಾಗ ಘಟಿಸುತ್ತಕೇ ಇರುತ್ತವೆ. ಆಗಾಗ್ಗೆ ಯುವಕರು ತಮಗಿಂತ ಹಿರಿಯ ಮಹಿಳೆಯನ್ನು ಮದುವೆಯಾಗುತ್ತಾರೆ. ಅಥವಾ ವಯಸ್ಸಾದ ಪುರುಷರು ತಮಗಿಂತ ಚಿಕ್ಕ ವಯಸ್ಸಿನ ಯುವತಿಯರನ್ನು ಮದುವೆಯಾಗುವುದನ್ನೂ ನೋಡಿದ್ದೇವೆ. ಪ್ರಸ್ತುತ ಅಂತಹ ಮದುವೆಯೊಂದು ಸುದ್ದಿಯಲ್ಲಿದೆ (love marriage). 22 ವರ್ಷದ ಯುವಕ ( youth) ತನಗಿಂತ ದೊಡ್ಡವಳಾದ 48 ವರ್ಷದ ಮಹಿಳೆಯನ್ನು ( youth) ಪ್ರೀತಿಸಿ ಮದುವೆಯಾದ. ವಯಸ್ಸು ಕೇವಲ ಒಂದು ಸಂಖ್ಯೆ. ಅವಳಲ್ಲಿ ನಾನು ಜೀವದ ಸಂಗಾತಿಯನ್ನು ಕಂಡಿರುವೆ. ನಮ್ಮನ್ನು ಆಶೀರ್ವದಿಸಿ ಸಾಕು ಎಂದು ಮಲೇಷ್ಯಾದ (love marriage) ಯುವಕನೊಬ್ಬ ಕೇಳುತ್ತಿದ್ದಾನೆ. ಇನ್ನು ವಿವರಗಳಿಗೆ ಹೋದರೆ..

22 ವರ್ಷದ ಮೊಹಮ್ಮದ್ ಡೇನಿಯಲ್ ಅಹ್ಮದ್ ಅಲಿ ತನ್ನ 48 ವರ್ಷದ ಕ್ಲಾಸ್ ಟೀಚರ್ ಜಮೀಲಾಳನ್ನು ಪ್ರೀತಿಸಿ ಮದುವೆಯಾದ. ಮೊಹಮ್ಮದ್ ಡೇನಿಯಲ್ 2016 ರಲ್ಲಿ ತನ್ನ 3 ನೇ ತರಗತಿಯಲ್ಲಿ ತನ್ನ ತರಗತಿಯಲ್ಲಿ ಪಾಠ ಮಾಡಲು ಬಂದಾಗ ಜಮೀಲಾಳನ್ನು ಮೊದಲ ಬಾರಿಗೆ ನೋಡಿದ್ದ. ಆಗ ಇವರಿಬ್ಬರ ನಡುವಿನ ಸಂಬಂಧ ಶಿಕ್ಷಕಿ ಮತ್ತು ವಿದ್ಯಾರ್ಥಿಯದ್ದಾಗಿತ್ತು. ಮೊಹಮ್ಮದ್ ಡೇನಿಯಲ್ ಸೇರಿದಂತೆ ತಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಜಮೀಲಾ ಅವರು ಬಹಳ ಗಮನ ಕೊಟ್ಟು ಪಾಠ ಮಾಡುತ್ತಿದ್ದರು. ಆಗಲಿಂದಲೇ ಮೊಹಮ್ಮದ್ ಡೇನಿಯಲ್, ಜಮೀಲಾ ಅವರನ್ನು ಶಿಕ್ಷಕಿಯಾಗಿ ಇಷ್ಟಪಟ್ಟಿದ್ದ. ಒಂದು ವರ್ಷದ ನಂತರ, ಅವರು ಬೇರ್ಪಟ್ಟರು. ಜಮೀಲಾಳನ್ನು ಕೊನೆಯ ಬಾರಿ ನೋಡಿದ್ದು 4ನೇ ತರಗತಿಯಲ್ಲಿಯಂತೆ.

ಆದರೆ, ಡೇನಿಯಲ್ ಹುಟ್ಟುಹಬ್ಬದಂದು ಜಮೀಲಾ ಫೋನ್ ಮೂಲಕ ಶುಭಾಶಯಗಳನ್ನು ಕಳುಹಿಸುತ್ತಿದ್ದರು. ಹೀಗಾಗಿ ಮೊಹಮ್ಮದ್ ಡೇನಿಯಲ್ ಅವರು ಶಿಕ್ಷಕರ ಮೇಲೆ ಮೋಹ ಬೆಳೆಸಿಕೊಂಡಿದ್ದರು. ಕೊನೆಗೆ ಮೊಹಮ್ಮದ್ ಡೇನಿಯಲ್ ಗೆ ತನ್ನ ಪ್ರೀತಿಯನ್ನು ಗುರುವಿಗೆ ನಿವೇದನೆ ಮಾಡುವ ಧೈರ್ಯ ಬಂದಿತಂತೆ. ಆದರೆ ಇಬ್ಬರ ನಡುವೆ 26 ವರ್ಷ ವಯಸ್ಸಿನ ವ್ಯತ್ಯಾಸವಿದ್ದ ಕಾರಣ ಶಿಕ್ಷಕಿ ಜಮೀನಾ ಪ್ರೀತಿಯನ್ನು ತಿರಸ್ಕರಿಸಿದ್ದಳು. ಆದಾಗ್ಯೂ, ಡೇನಿಯಲ್ ತನ್ನ ಹಠವನ್ನು ಬಿಡಲಿಲ್ಲ. ಅವನು ಅವಳ ಮನೆಯ ವಿಳಾಸವನ್ನು ಕಂಡುಕೊಂಡನು. ಜಮೀನಾರನ್ನು ಭೇಟಿ ಮಾಡಿದ. ಇಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲಿಂದಾಚೆಗೆ ಮಾತು ಕತೆ ಗಳು ಜಾರಿಯಲ್ಲಿದ್ದವು. ಬರುಬರುತ್ತಿದ್ದಂತೆ ಇಬ್ಬರ ನಡುವಿನ ಅಂತರ ನಿಧಾನವಾಗಿ ಮಾಯವಾಗತೊಡಗಿತು. ಪರಿಚಯ ಪ್ರೀತಿಗೆ ತಿರುಗಿತ್ತು. ಪ್ರೀತಿ ಮಾಗತೊಡಗಿತ್ತು.

ಕೊನೆಗೆ ಜಮೀಲಾ ಅಹ್ಮದ್ ಅಲಿಯ ಪ್ರೀತಿಯನ್ನು ಅಂಗೀಕರಿಸುತ್ತಾಳೆ. ಅವರ ಪ್ರೀತಿಗೆ ಹಿರಿಯರ ಒಪ್ಪಿಗೆಯೂ ದಕ್ಕುತ್ತದೆ. ಇಬ್ಬರೂ 2019 ರಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ ಅದೇ ವೇಳೆಗೆ ಕೊರೊನಾ ವೈರಸ್ ಹರಡಿತ್ತು. ಇದರಿಂದ ಮದುವೆ ಮುಂದೂಡಲಾಗಿತ್ತು. ಅವರು ಮತ್ತೊಮ್ಮೆ 2020 ರಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ ನೆರವೇರಿರಲಿಲ್ಲ. ಕೊನೆಗೂ ಜಮೀಲಾ – ಅಹ್ಮದ್ ಅಲಿ 21 ನವೆಂಬರ್ 2021 ರಂದು ವಿವಾಹವಾದರು. ಕುಟುಂಬಸ್ಥರು ಹಾಗೂ ಸ್ನೇಹಿತರ ನಡುವೆ ಸರಳವಾಗಿ ವಿವಾಹ ನೆರವೇರಿತು. ಪ್ರಸ್ತುತ ಅಹ್ಮದ್ ಅಲಿ ವಾಟರ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಜಮೀಲಾ ಶಿಕ್ಷಕಿಯಾಗಿ ಕೆಲಸ ಮುಂದುವರಿಸಿದ್ದಾರೆ.

ಜಮೀಲಾ 2007ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ವಯಸ್ಸು ಕೇವಲ ಒಂದು ನಂಬರ್ ಎನ್ನುತ್ತಾರೆ ಈ ನವ ಜೋಡಿ. ತಮ್ಮಿಬ್ಬರ ನಡುವಿನ 26 ವರ್ಷಗಳ ವ್ಯತ್ಯಾಸ ತಮ್ಮ ಪ್ರೀತಿಗೆ ಅಡ್ಡಿಯಾಗಿಲ್ಲ. ಅಲ್ಲದೇ ಅಲಿ ತನ್ನನ್ನು ಪ್ರೀತಿಸುತ್ತಿದ್ದುದ್ದನ್ನು ಮನೆಯವರಿಂದ ಮುಚ್ಚಿಟ್ಟಿರಲಿಲ್ಲ. ಧೈರ್ಯವಾಗಿ ನಿಂತು ಆಕೆಯ ಮನ ಗೆದ್ದಿದ್ದಾನೆ. ತಾವಿಬ್ಬರೂ ದೇವರು ಮಾಡಿದ ಜೋಡಿ.. ಎನ್ನುತ್ತಾರೆ ಶಿಕ್ಷಕಿ ಜಮೀಲಾ.