ಪ್ಯಾರೀಸ್ ಟೂರ್ ವಿಥ್ ಅಜ್ಜಿ; ದಂತವೈದ್ಯರ ಈ ನಡೆಗೆ ಭಾವುಕರಾಗುತ್ತಿರುವ ನೆಟ್ಟಿಗರು
Paris Trip : ಕುಟುಂಬವನ್ನು ಕಟ್ಟಲು ಶ್ರಮಿಸುವ ಹಿರಿಯರಿಗಾಗಿ ಕಿರಿಯರು ಇಂಥ ಖುಷಿ ಸಂಗತಿಗಳಿಗೆ ಅವರನ್ನು ಹತ್ತಿರವಾಗಿಸಬೇಕು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯ?
Viral Video : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಕನಸುಗಳು ಗರಿಗೆದರುತ್ತವೆ. ಓದು ಮಗಿಯುತ್ತಿದ್ದಂತೆ ನೌಕರಿ ಹಿಡಿದು ಕನಸನ್ನು ನನಸು ಮಾಡಿಕೊಳ್ಳಲು ಮನಸ್ಸು ಹಾತೊರೆಯುತ್ತದೆ. ತಾನು ತನ್ನ ಖುಷಿ ತನ್ನ ಆಸೆಗಳತ್ತ ಮನಸ್ಸು ಹುರಿಗೊಳ್ಳುತ್ತದೆ. ಹೀಗಿರುವಾಗ ಮನೆಯಲ್ಲಿರುವ ಮುಪ್ಪಾನುಮುದುಕರ ಕಡೆಗೆ ಗಮನ ಹೋಗುತ್ತದೆಯೇ? ಆದರೆ ಈ ಕೆಳಗಿನ ವಿಡಿಯೋ ನೋಡಿ. ದಂತವೈದ್ಯನಾಗಿರುವ ಮೊಮ್ಮಗ ತನ್ನ ಅಜ್ಜಿಯನ್ನು ಪ್ಯಾರೀಸ್ ಪ್ರವಾಸ ಮಾಡಿಸಿದ್ದಾನೆ.
ಇದನ್ನೂ ಓದಿView this post on Instagram
ನಿಮ್ಮ ನಡೆ ನಮ್ಮನ್ನು ಭಾವುಕರನ್ನಾಗಿಸುತ್ತಿದೆ ನೀವು ಅನೇಕರಿಗೆ ಮಾದರಿ ಎಂದು ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ ಡಾ. ಉಸಾಮಾ ಅಹಮ್ಮದ್ಗೆ. ನಿಮ್ಮ ಈ ಕಾಳಜಿ, ಪ್ರೀತಿಯ ಮುಂದೆ ಯಾವ ಮಾತೂ ಸೋಲುತ್ತಿವೆ ಎನ್ನುತ್ತಿದ್ಧಾರೆ ಕೆಲವರು. ಮೇ 14ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ 3 ಮಿಲಿಯನ್ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು
ನೀವು ನಿಜಕ್ಕೂ ಅದೃಷ್ಟವಂತರು. ನನ್ನ ಅಜ್ಜನ ಕನಸನ್ನು ನನಸು ಮಾಡುವ ಮೊದಲೇ ಅವರು ನಿಧನರಾದರು. ನಿಮ್ಮಂಥವರನ್ನು ನಾನು ನಿಜಕ್ಕೂ ಶ್ಲಾಘಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ನಾನೂ ನನ್ನ ಅಜ್ಜಿಗಾಗಿ ಹೀಗೆ ಏನಾದರೂ ಪ್ರವಾಸ ಕೈಗೊಳ್ಳುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮ ಅಜ್ಜಿಗೆ ನಮಸ್ಕಾರ ತಿಳಿಸಿ, ಇದು ಹೃದಯಕ್ಕೆ ಹತ್ತಿರವಾದ ವಿಷಯ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral Video : ಲತಾ ಮಂಗೇಶ್ಕರ್ ‘ಕ್ರಾಂತಿ’ ಹಾಡಿಗೆ ವೃದ್ಧದಂಪತಿ ಲಿಪ್ ಸಿಂಕ್; 2 ಮಿಲಿಯನ್ ವೀಕ್ಷಣೆ
ನಾವೂ ಕೂಡ ನಮ್ಮ ತಂದೆ, ತಾಯಿ ಮತ್ತು ಅಜ್ಜ ಅಜ್ಜಿ ಅಥವಾ ಮನೆಯ ಹಿರಿಯರಿಗಾಗಿ ಹೀಗೆ ಪ್ರವಾಸ ಏರ್ಪಡಬೇಕು ಎಂದು ಅನೇಕರು ಪ್ರತಿಕ್ರಿಯಿಸಿದ್ಧಾರೆ. ಮಕ್ಕಳನ್ನು ಮೊಮ್ಮಕ್ಕಳನ್ನು ಮತ್ತಿಡೀ ಕುಟುಂಬವನ್ನು ಕಟ್ಟಲು ಹಗಲೂ ರಾತ್ರಿ ತಮ್ಮತನವನ್ನೂ ಕಳೆದುಕೊಂಡು ಶ್ರಮಿಸುವ ಹಿರಿಯರನ್ನು ಖುಷಿಪಡಿಸುವ ಕರ್ತವ್ಯ ಪ್ರೀತಿ ಚಿಕ್ಕವರದಲ್ಲವೆ. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ