ಫ್ಲೈಓವರ್ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಅದನ್ನು ಪೊಲೀಸ್ ಕಾನ್‌ಸ್ಟೆಬಲ್ ತಡೆದಿದ್ದು ಹೇಗೆ? ನೀವೇ ನೋಡಿ!
ಅಂತಹ ಜೀವನಾಘಾತ ಎದುರಾದಾಗ ವ್ಯಕ್ತಿ ದೌರ್ಬಲ್ಯದಿಂದ ಆತ್ಮಹತ್ಯಗೆ ಎದುರಾಗಿದ್ದು, ಅದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಕ್ಷಣವೇ ಚಾಕಚಕ್ಯತೆಯಿಂದ ವರ್ತಿಸಿ, ಆ ಮನುಷ್ಯನನ್ನು ಕಾಪಾಡಿ, ಮರುಜನ್ಮ ನೀಡಿದ್ದಾರೆ.
ಸಾಮಾನ್ಯವಾಗಿ ಅನೇಕ ಮಂದಿ ಜೀವನದಲ್ಲಿ ಯಾವುದೇ ಅಪಘಾತಗಳು, ಆಘಾತಗಳು, ಆತಂಕಗಳು, ಅಪಾಯಗಳು ಎದುರಾದಾಗ ಗೊಂದಲಕ್ಕೊಳಗಾಗುತ್ತಾರೆ. ಹೇಗೆ… ಹೇಗೆ… ಜೀವನ ನಡೆಸಬೇಕು ಎಂದು ಹೈರಾಣಗೊಳ್ಳುತ್ತಾರೆ. ಆಗ ಯಾರೇ ಆಗಲಿ ಮಾನಸಿಕವಾಗಿ ದೃಢಚಿತ್ತದಿಂದ ಸಮಯಕ್ಕೆ ಸರಿಯಾಗಿ ಸರಿಯಾದ ನಿರ್ಧಾರ ತೆಗೆದುಕೊಂಡು ಆ ಕೆಟ್ಟ ಘಳಿಗೆಯಿಂದ ಪಾರಾಗಬೇಕು. ಆ ಒಂದೇ ಒಂದು ಕ್ಷಣ ಶಾಂತವಾಗಿ ಯೋಚಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಹಾನಿ, ಅಪಾಯ ಅನಾಹುತಗಳು ತಪ್ಪುತ್ತವೆ ಎಂದು ಹೇಳುತ್ತಾ ತಾಜಾ ಘಟನೆಯೊಂದನ್ನು ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ.
ಅಂತಹ ಜೀವನಾಘಾತ ಎದುರಾದಾಗ ವ್ಯಕ್ತಿ ದೌರ್ಬಲ್ಯದಿಂದ ಆತ್ಮಹತ್ಯಗೆ ಎದುರಾಗಿದ್ದು, ಅದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಕ್ಷಣವೇ ಚಾಕಚಕ್ಯತೆಯಿಂದ ವರ್ತಿಸಿ, ಆ ಮನುಷ್ಯನನ್ನು ಕಾಪಾಡಿ, ಮರುಜನ್ಮ ನೀಡಿದ್ದಾರೆ.
#LifeSavedOn 12.05.2023 @LbnagarTrPS constable Sri. T.Sateesh, PC 3849 who was on duty at Vijayawada Bustop LBNagar saved the #Life of a 37-year-old man, who was allegedly trying to commit #Suicide by jumping down from #LBNagar_Flyover. #CP_Rachakonda appreciated. #LifeSaviour pic.twitter.com/Vh6qdyTxsd
— Rachakonda Police (@RachakondaCop) May 13, 2023
ಹಣಕಾಸಿನ ತೊಂದರೆಯಿಂದ ವ್ಯಕ್ತಿಯೊಬ್ಬರು ಹೈದರಾಬಾದ್‌ನ ಎಲ್‌ಬಿ ನಗರದಲ್ಲಿ ಫೈವ್‌ಓವರ್ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ಸತೀಶ್ ಹಾಗೂ ಮತ್ತೊಬ್ಬ ವ್ಯಕ್ತಿ ಆತನನ್ನು ಗಮನಿಸಿದ್ದಾರೆ. ತಕ್ಷಣ ಕಾನ್‌ಸ್ಟೆಬಲ್ ಸತೀಶ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸ್ ಸತೀಶ್ ಬಹಳ ಜಾಣತನದಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಗೆ ಕಿಂಚಿತ್ತೂ ಅನುಮಾನ ಬಾರದಂತೆ, ಆತ್ಮಹತ್ಯೆಗೆ ಸಜ್ಜಾಗುತ್ತಿದ್ದ ವ್ಯಕ್ತಿಯ ಬಗ್ಗೆ ತಲೆ ಕೆಡಿಸಿಕೊಳ್ಳದವರಂತೆ ಫೋನ್ ನಲ್ಲಿ ಮಾತನಾಡುತ್ತಾ, ಆತನ ಸಮೀಪಕ್ಕೆ ತೆರಳಿದ್ದಾರೆ. ಆ ವ್ಯಕ್ತಿ ಹತ್ತಿರ ಹೋದ ಕೂಡಲೇ ಅವನ ಕತ್ತಿನಲ್ಲಿದ್ದ ಟವೆಲ್ ಹಿಡಿದು ಅವನನ್ನು ಕೆಳಗೆ ಎಳೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 24 May 23