Viral Video: ಹೈದರಾಬಾದಿನ 76 ವರ್ಷದ ಈ ‘ಯುವಕ’ನ ಲಗೇಜು ತಾಲೀಮು

Senior Citizen : ಇವರು ಹೆಂಡತಿಯೊಂದಿಗೆ ಪ್ರವಾಸಕ್ಕೆ ಹೊರಟಿದ್ಧಾರೆ. ಇಲ್ಲಿ ರೈಲೂ, ಬಸ್ಸೂ ಬರುವುದಿಲ್ಲ. ಏಕೆಂದರೆ ಇದು ಮನೆ. ಆದರೂ ಯಾಕಿವರು ಹೀಗೆ ಓಡಾಡುತ್ತಿದ್ಧಾರೆ? ಪರಾವಲಂಬಿಗಳಾಗುತ್ತಿರುವ ನಮ್ಮೆಲ್ಲರಿಗೂ ಇಲ್ಲೊಂದು ಸಂದೇಶವಿದೆ!

Viral Video: ಹೈದರಾಬಾದಿನ 76 ವರ್ಷದ ಈ 'ಯುವಕ'ನ ಲಗೇಜು ತಾಲೀಮು
76 ವರ್ಷದ ಇವರು ರೈಲುನಿಲ್ದಾಣದಲ್ಲಿ ಕೂಲಿ ಸಹಾಯವಿಲ್ಲದೆ ನಡೆಯುವುದು ಹೇಗೆ ಎನ್ನುವುದನ್ನು ಮನೆಯೊಳಗೆ ಅಭ್ಯಾಸ ಮಾಡುತ್ತಿರುವುದು.
Follow us
ಶ್ರೀದೇವಿ ಕಳಸದ
|

Updated on:May 24, 2023 | 10:26 AM

Hyderabad : ಫುಟ್​ಬಾಲ್​, ಕ್ರಿಕೆಟ್​, ವಾಲಿಬಾಲ್​ ಹೀಗೆ ಯಾವ ಕ್ರೀಡೆಯಾಗಲಿ, ನಾಟಕ, ಸಂಗೀತ, ನೃತ್ಯ ಹೀಗೆ ಯಾವುದೇ ಪ್ರದರ್ಶನ ಕಲೆಯಾಗಲಿ ಅಷ್ಟೇ ಏಕೆ ನಿತ್ಯವೂ ತಟ್ಟುವ ರೊಟ್ಟಿಯೇ ಇರಲಿ, ಅಭ್ಯಾಸವಿಲ್ಲದೇ ಯಾವುದೂ ಕರಗತವಾಗದು. ಅಭ್ಯಾಸ ಎನ್ನುವುದು ಆತ್ಮವಿಶ್ವಾಸವನ್ನು ಕೊಡುತ್ತದೆ ಅಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ವೃದ್ಧರೊಬ್ಬರು ಮನೆಯೊಳಗೆ ಲಗೇಜುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ.  ಅರೆ! ಇವರು ಹೀಗೇಕೆ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಏಳುತ್ತಿದೆಯೇ?

ಹೈದರಾಬಾದಿನಲ್ಲಿ ಪತ್ರಕರ್ತೆಯಾಗಿರುವ ಮಂಜು ಲತಾ ಕಲಾನಿಧಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇವರ ತಂದೆ ಪ್ರವಾಸಕ್ಕೆ ಹೋಗುವ ಮೊದಲು ಹೀಗೆ ಮನೆಯೊಳಗೆ ‘ಲಗೇಜು ತಾಲೀಮು’ ನಡೆಸಿದ ವಿಡಿಯೋ ಇದಾಗಿದೆ. ಅಂದರೆ, 76 ವರ್ಷದ ಅವರು ಅವರ ಹೆಂಡತಿ ಮತ್ತು ಲಗೇಜುಗಳೊಂದಿಗೆ ರೈಲುನಿಲ್ದಾಣದಲ್ಲಿ ಕೂಲಿಯ ಸಹಾಯವಿಲ್ಲದೆ ನಡೆಯಬಲ್ಲೆನೇ? ಎಂದು ಸ್ವಯಂಪರೀಕ್ಷೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ

ಇಂದು ಬೆರಳತುದಿಯಲ್ಲಿಯೇ ಇಷ್ಟೆಲ್ಲ ಸೌಲಭ್ಯಗಳು ಲಭ್ಯವಿದ್ದರೂ ಹಳೆಯ ತಲೆಮಾರಿನವರು ಆದಷ್ಟು ಸ್ವಾವಲಂಬಿತನವನ್ನು ಕಾಪಾಡಿಕೊಳ್ಳುವಲ್ಲಿ ಉತ್ಸುಕರಾಗಿರುತ್ತಾರೆ. ಇದು ಮೈಗೂ ಮನಸಿಗೂ ಹಿತಕರ ಎಂಬ ಗಟ್ಟಿ ನಿಲುವು ಅವರದು. ಹಾಗಾಗಿ ನಿತ್ಯದ ಚಟುವಟಿಕೆಗಳಿರಲಿ ಅಥವಾ ಇಂಥ ಅಪರೂಪದ ಚಟುವಟಿಕೆಗಳಿರಲಿ, ಅವಲಂಬನೆಯಿಂದ ತಪ್ಪಿಸಿಕೊಳ್ಳುವ ಆಲೋಚನೆಯಲ್ಲಿ ಅವರು ಸದಾ ಮುಳುಗಿರುತ್ತಾರೆ.

ಇದನ್ನೂ ಓದಿ : Viral Video: ಮುಂಬೈ ಲೋಕಲ್​ ಟ್ರೇನಿನ ಈ ನಿತ್ಯಪ್ರಯಾಣಿಕನ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಸುಮಾರು 6.7 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತಂದೆಗೆ ಸಲಾಮ್​ ತಿಳಿಸಿ, ಅವರು ಯುವಕರಿಗಿಂತ ಯುವಕರಾಗಿ ಕಾಣುತ್ತಿದ್ದಾರೆ ಎಂದು ಒಬ್ಬರು ಹೇಳಿದ್ಧಾರೆ. 79 ವರ್ಷದ ನನ್ನ ತಂದೆಯೂ ಹೀಗೇ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅವರ ಮುಖದ ಮೇಲಿನ  ಆತ್ಮವಿಶ್ವಾಸವನ್ನು ನೋಡಲು ಹೆಮ್ಮೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಹೌದು ನಮ್ಮ ತಂದೆತಾಯಿಯ ತಲೆಮಾರಿನವರೆಲ್ಲರೂ ಸ್ವಸಹಾಯವನ್ನು ನೆಚ್ಚಿಕೊಂಡಿದ್ದವರು. ಅದಕ್ಕೇ ಅವರ ಆರೋಗ್ಯ, ಮನಸ್ಸು ಅಷ್ಟು ಗಟ್ಟಿಯಾಗಿರುವುದು ಎಂದು ಕೆಲವರು ಹೇಳಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:22 am, Wed, 24 May 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್