ಮದುವೆಗೆ ಬಂದ ಸಂಬಂಧಿಕರ ಎದುರೇ ವಧುವಿನ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಿದ ವರ!
ವಧುವಿನ ಅನೈತಿಕ ಸಂಬಂಧ ತಿಳಿದ ನಂತರ ಮದುವೆಯನ್ನು ಮುರಿಯುವ ಬದಲು ತಮ್ಮ ವಿಶೇಷ ದಿನದಂದು ಎಲ್ಲರ ಮುಂದೆ ಸತ್ಯವನ್ನು ಅನಾವರಣಗೊಳಿಸಲು ನಿರ್ಧರಿಸಿ, ಮದುವೆಗೆ ಬಂದ ಸಂಬಂಧಿಕರಿಗೆ ಶಾಕ್ ನೀಡಿದ್ದಾರೆ.
ಜೀವನದ ಅತಿ ಸಂತೋಷದ ದಿನದಂದು ಯಾರು ಊಹಿಸದ ಟ್ವಿಸ್ಟ್ ಇಲ್ಲೊಬ್ಬ ವರ ಕೊಟ್ಟಿದ್ದಾನೆ. ವರನೊಬ್ಬ (Groom) ತನ್ನನ್ನು ವಂಚಿಸಿದ ವಧುವಿನ (Bride) ಮೇಲೆ ವಿಭಿನ್ನ ರೀತಿಯಲ್ಲಿ ಸೇಡು (Revenge) ತೀರಿಸಿಕೊಂಡಿದ್ದಾನೆ. ವಧುವಿನ ಅನೈತಿಕ ಸಂಬಂಧ ತಿಳಿದ ನಂತರ ಮದುವೆಯನ್ನು ಮುರಿಯುವ ಬದಲು ತಮ್ಮ ವಿಶೇಷ ದಿನದಂದು ಎಲ್ಲರ ಮುಂದೆ ಸತ್ಯವನ್ನು ಅನಾವರಣಗೊಳಿಸಲು ನಿರ್ಧರಿಸಿ, ಮದುವೆಗೆ ಬಂದ ಸಂಬಂಧಿಕರಿಗೆ ಶಾಕ್ ನೀಡಿದ್ದಾರೆ. ವಧು ಬೇರೆ ಯಾರೊಂದಿಗೂ ಅಲ್ಲ, ವರನ ಸ್ನೇಹಿತನೊಂದಿಗೆ ಸಂಬಂಧ ಹೊಂದಿರುವುದು ತಿಳಿದ ನಂತರ ಮದುವೆಯ ದಿನದಂದು ಇವರಿಬ್ಬರ ರಹಸ್ಯಗಳನ್ನು ಯಾರು ಊಹಿಸದ ಅತ್ಯಂತ ಆಘಾತಕಾರಿ ರೀತಿಯಲ್ಲಿ ಬಹಿರಂಗಪಡಿಸಿದರು.
ದಿ ಅನ್‌ಫಿಲ್ಟರ್ಡ್ ಬ್ರೈಡ್‌ನ ನಿರೂಪಕ ಜಾರ್ಜಿ ಅವರು ಇತ್ತೀಚೆಗೆ ಬೆತ್ ಜೊತೆಗೆ ಹೋಸ್ಟ್ ಮಾಡಿದ ಪಾಡ್‌ಕ್ಯಾಸ್ಟ್ ಕ್ಲಿಪ್ ಟಿಕ್‌ಟಾಕ್‌ನಲ್ಲಿ ಸಖತ್ ವೈರಲ್ ಆಗಿದೆ. ಇದು ಯಾರ ಮದುವೆ, ವಧು-ವರರ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ, ಕಥೆಯು ಅನೇಕರನ್ನು ಆಕರ್ಷಿಸಿದೆ.
ಜಾರ್ಜಿಯವರ ಪ್ರಕಾರ, ವಿವಾಹ ಬಹಳ ಸುಂದರವಾಗಿ ನಡಿಯಿತು, ನಂತರ ಅತಿಥಿಗಳು ಊಟವನ್ನು ಆನಂದಿಸಿದರು, ವರನ ಭಾಷಣಕ್ಕಾಗಿ ಕಾಯಿತ್ತಿದ್ದರು
“ವಧುವಿನ ತಂದೆ ತನ್ನ ಮಗಳನ್ನು ಸ್ಟೇಜ್ ಮೇಲೆ ಕರೆತರುತ್ತಾರೆ, ಆ ಸಮಯದಲ್ಲಿ ಮದುಮಗ ಎದ್ದುನಿಂತು ನಾನು ಮಾತನಾಡಲು ಪ್ರಾರಂಭಿಸುವ ಮೊದಲು, ನಿಮ್ಮಗೆ ನೀಡಲಾದ ಲಕೋಟೆಯನ್ನು ತೆರೆದು ನೋಡಿ, ಅದರಲ್ಲಿ ಫೋಟೋಗಳಿವೆ, ಬೇರೆ ಯಾರದ್ದು ಅಲ್ಲ ವಧು ಮತ್ತು ನನ್ನ ಸ್ನೇಹಿತನ ಅನೈತಿಕ ಸಂಬಂಧದ ಸಾಕ್ಷಿ, ಅಷ್ಟೇ.. ಇನ್ನೇನು ಹೇಳಲು ಉಳಿದಿಲ್ಲ.” ಎಂದು ಅಲ್ಲಿಂದ ಹೊರ ನಡೆಯುತ್ತಾನೆ.
ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಮದುವೆ ಮಂಟಪದಿಂದ ಓಡಿ ಹೋದ ವರ, ವಧು ಮಾಡಿದ್ದೇನು?
ಆ ಆಘಾತಕಾರಿ ಹೇಳಿಕೆಯೊಂದಿಗೆ, ವರನು ಮೈಕ್ ಅನ್ನು ಕೆಳಗಿಳಿಸಿ, ತನ್ನ ಕುಟುಂಬದೊಂದಿಗೆ ಹೊರಟುಹೋದನು, ಅವರು ದ್ರೋಹದ ಬಗ್ಗೆ ತಿಳಿದಿದ್ದರು. ಆಕೆಯ ಕುಟುಂಬವು ಸಂಪೂರ್ಣ ಕಾರ್ಯಕ್ರಮಕ್ಕೆ ಹಣವನ್ನು ನೀಡಿದ್ದರಿಂದ ವಧು ತನ್ನ ತಪ್ಪಿಗೆ ಬೆಲೆ ತೆರೆದಿದ್ದಾಳೆ ಎಂದು ಖಚಿತಪಡಿಸಿಕೊಂಡಂತಿತ್ತು.
ಈ ಕಥೆಯು ಜನರಿಂದ ಪ್ರತಿಕ್ರಿಯೆಗಳ ಅಲೆಯನ್ನು ಗಳಿಸಿದೆ, ಕೆಲವರು ವರನ ನಡೆಯನ್ನು ಶ್ಲಾಘಿಸಿದರು ಹಲವರು ಈ ಘಟನೆ ಕೇಳಿ ಶಾಕ್ ಆಗಿದ್ದಾರೆ. ಇನ್ನು ಕೆಲವರು ನಾವು ಅವನ ಸ್ಥಿತಿಯಲ್ಲಿದ್ದರು ಅದನ್ನೇ ಮಾಡುತ್ತಿದ್ದೆವು ಎಂದು ಒಪ್ಪಿಕೊಂಡರು. ಈ ಮದುವೆಗೆ ಬಂದರು ಯಾರು ಈ ಘಟನೆಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ, ಸಂತೋಷದ ಸಂದರ್ಭಗಳಲ್ಲಿಯೂ ಸಹ ಈ ಘಟನೆಯ ನೆನಪು ಮರುಕಳಿಸುವಲ್ಲಿ ಸಂಶಯವೇ ಇಲ್ಲ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Wed, 24 May 23