Viral News: ಕೊನೇ ಕ್ಷಣದಲ್ಲಿ ಮದುವೆ ಮಂಟಪದಿಂದ ಓಡಿ ಹೋದ ವರ, ವಧು ಮಾಡಿದ್ದೇನು?

ಮದುವೆ ಮನೆಯಲ್ಲಿ ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದವು, ಕೆಂಪು ಸೀರೆಯುಟ್ಟು, ಅಲಂಕಾರ ಮಾಡಿಕೊಂಡು ವಧು ವರನಿಗಾಗಿ ಕಾಯುತ್ತಿದ್ದಳು, ಆದರೆ ಅಮ್ಮನ ಕರೆದುಕೊಂಡು ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ, ಎಷ್ಟೇ ಕರೆ ಮಾಡಿದರೂ ಸ್ಪಂದಿಸಿರಲಿಲ್ಲ, ಅದಕ್ಕೆ ವಧು ಮಾಡಿದ್ದೇನು ಇಲ್ಲಿದೆ ಸ್ಟೋರಿ.

Viral News: ಕೊನೇ ಕ್ಷಣದಲ್ಲಿ ಮದುವೆ ಮಂಟಪದಿಂದ ಓಡಿ ಹೋದ ವರ, ವಧು ಮಾಡಿದ್ದೇನು?
ಮದುವೆImage Credit source: NDTV
Follow us
ನಯನಾ ರಾಜೀವ್
|

Updated on: May 24, 2023 | 9:22 AM

ಮದುವೆ(Marriage) ಮಂಟಪದಿಂದ ಓಡಿ ಹೋಗುತ್ತಿದ್ದ ವರನನ್ನು ವಧು 20 ಕಿ.ಮೀ ಬೆನ್ನಟ್ಟಿ ಹಿಡಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವಧುವಿಗೆ ತಾನು ಮದುವೆಯಾಗಲಿರುವ ವ್ಯಕ್ತಿ ಮೆರವಣಿಗೆಯಿಂದಲೇ ಪರಾರಿಯಾಗಿರುವುದು ಗೊತ್ತಾಗಿತ್ತು. ವಧು ವರನನ್ನು 20 ಕಿಲೋಮೀಟರ್ ಬೆನ್ನಟ್ಟಿ ವರನನ್ನು ಹಿಡಿದು ಕರೆತಂದಿದ್ದಾಳೆ. ಆ ನಂತರ ಇಬ್ಬರೂ ಹತ್ತಿರದ ದೇವಸ್ಥಾನದಲ್ಲಿ ಮದುವೆಯಾದರು. ವಧು ಅಲಂಕಾರ ಮಾಡಿಕೊಂಡು ವರನ ಬರುವಿಕೆಕಾಗಿ ಕಾಯುತ್ತಿದ್ದಳು, ವರ ಯಾವುದೋ ವಿಷಯಕ್ಕೆ ಬೇಸರಗೊಂಡು ಓಡಿಹೋಗಲು ಪ್ರಯತ್ನಿಸಿದ್ದ, ಮದುವೆಗೆ ಮನೆಯವರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು. ಅವರು ಎರಡೂವರೆ ವರ್ಷಗಳಿಂದ ಪ್ರೀತಿಸಿದ್ದರು. ವಧು ಮಂಟಪದಲ್ಲಿಯೇ ಅವನಿಗಾಗಿ ಕಾಯುತ್ತಿದ್ದಳು.

ಮದುವೆ ಸ್ಥಳಕ್ಕೆ ತನ್ನ ತಾಯಿಯನ್ನು ಕರೆತರಲು ಹೋಗಿರುವುದಾಗಿ ವರ ದೂರವಾಣಿ ಕರೆಯಲ್ಲಿ ತಿಳಿಸಿದ್ದರೂ ಆಕೆ ನಂಬಲಿಲ್ಲ. ಅವಳು ಅವನನ್ನು ಹುಡುಕಲು ಹೊರಟುಬಿಟ್ಟಳು.

ಅಂತಿಮವಾಗಿ ವರನನ್ನು ಬರೇಲಿ ನಗರ ವ್ಯಾಪ್ತಿಯ ಹೊರಗಿರುವ ಪೊಲೀಸ್ ಠಾಣೆ ಬಳಿ ಪತ್ತೆ ಮಾಡಲಾಯಿತು. ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಇಬ್ಬರೂ ಮದುವೆಯಾಗಿದ್ದಾರೆ. ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗ ಬದೌನ್ ಮೂಲದವನಾಗಿದ್ದು, ಇಬ್ಬರ ಮನೆಯವರು ಮದುವೆಗೆ ಒಪ್ಪಿದ್ದರು. ಆದರೆ ಮದುವೆಯ ದಿನವೇ ಹುಡುಗ ಮನಸ್ಸು ಬದಲಿಸಿ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ಮತ್ತಷ್ಟು ಓದಿ: Viral Video: ಮುಂಬೈ ಲೋಕಲ್​ ಟ್ರೇನಿನ ಈ ‘ನಿತ್ಯಪ್ರಯಾಣಿಕ’ನ ವಿಡಿಯೋ ವೈರಲ್

ವರ ಪರಾರಿಯಾದ ಬಗ್ಗೆ ವಧು ಕೇಳಿದಾಗ, ವರನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಳು ಆದರೆ ಆತ ಕರೆ ಸ್ವೀಕರಿಸಲಿಲ್ಲ, ಬಳಿಕ ತಾಯಿಯನ್ನು ಕರೆದುಕೊಂಡು ಬರಲು ಬದೌನ್‌ಗೆ ಹೋಗುವುದಾಗಿ ಹೇಳಿದ್ದ, ಆದರೆ ಯಾಕೋ ಆಕೆಗೆ ಅವನ ಮಾತಿನ ಮೇಲೆ ನಂಬಿಕೆ ಬಂದಿರಲಿಲ್ಲ, ಹಾಗಾಗಿ ಆತನನ್ನು ಹುಡುಕಲು ಹೊರಟುಬಿಟ್ಟಳು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ