Viral Video: ‘ಬಾ ಕೂಸೇ ಮುದ್ದಿಸ್ತೀನಿ’ ವಾತ್ಸಲ್ಯಮಯೀ ಒರಾಂಗುಟಾನ್

Orangutan : ಮೂರು ತಿಂಗಳ ಹಸುಳೆಯನ್ನು ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನೋ ನೆನಪಿಸುವಂತಿಲ್ಲವೆ?

Viral Video: 'ಬಾ ಕೂಸೇ ಮುದ್ದಿಸ್ತೀನಿ' ವಾತ್ಸಲ್ಯಮಯೀ ಒರಾಂಗುಟಾನ್
ಕೆಂಟಕೀ ಝೂನಲ್ಲಿ ಮೂರು ತಿಂಗಳ ಹಸುಳೆಗೆ ಮುದ್ದು ಮಾಡುತ್ತಿರುವ ಒರಾಂಗುಟಾನ್
Follow us
ಶ್ರೀದೇವಿ ಕಳಸದ
|

Updated on:May 24, 2023 | 12:20 PM

Love : ಮನುಷ್ಯರಾದ ನಮಗಷ್ಟೇ ಪ್ರಾಣಿಗಳ ಒಡನಾಟ ಬೇಕೆನ್ನಿಸುವುದಿಲ್ಲ. ಪ್ರಾಣಿಗಳಿಗೂ ಮನುಷ್ಯರ ಒಡನಾಟ ಬೇಕೆನ್ನಿಸುತ್ತದೆ. ಇಲ್ಲೊಬ್ಬ ತಾಯಿ ಪ್ರಾಣಿಸಂಗ್ರಹಾಲಯಕ್ಕೆ ಮಗುವಿನೊಂದಿಗೆ ಹೋಗಿದ್ದಾರೆ. ಇಲ್ಲಿರುವ ಒರಾಂಗುಟಾನ್ ಕೈ ಮಾಡಿ ಈ ಮಗುವನ್ನು ತೋರಿಸಲು ಕೇಳಿಕೊಳ್ಳುತ್ತದೆ. ಮಗುವಿನ ತಾಯಿ ಅದರ ಬಳಿ ಮಗುವನ್ನು ಹಿಡಿಯುತ್ತಾರೆ. ಆಗದು ಅದರ ಕೆನ್ನೆಗೆ ಗಾಜಿನಗೋಡೆಯಿಂದಾಚೆಯೇ ಮುತ್ತು ಕೊಟ್ಟು ಮುದ್ದಿಸಲು ನೋಡುತ್ತದೆ. ಎಂಥ ಹೃದಯಸ್ಪರ್ಶಿಯಾಗಿದೆಯಲ್ಲ!

ಈ ಮೂರು ತಿಂಗಳ ಹಸುಳೆಯನ್ನು ಹತ್ತಿರದಿಂದ ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನು ನೆನಪಿಸುವಂತಿಲ್ಲವೆ? ಬಹುಶಃ ಗಾಜಿನಗೋಡೆ ಇಲ್ಲದಿದ್ದರೆ ಖಂಡಿತ ಅದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿತ್ತು.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ”ಯುವಕ”ನ ಲಗೇಜು ತಾಲೀಮು

ಕೆಂಟಕಿ ಝೂನಲ್ಲಿಯ ಈ ದೃಶ್ಯವನ್ನು ನೋಡಿ ಅನೇಕರು ಈ ವಿಡಿಯೋ ನೋಡಿ ಆನಂದತುಂದಿಲರಾಗಿದ್ದಾರೆ. ನಾಲ್ಕು ಕಾಲುಗಳು ಮತ್ತು ಮೈತುಂಬಾ ಕೂದಲು ಇವೆ ಎಂದ ಮಾತ್ರಕ್ಕೆ ಇವು ಪ್ರಾಣಿಗಳು. ಆದರೆ ಒರಾಂಗುಟಾನ್ ಥೇಟ್​​ ಮನುಷ್ಯರಂತೆಯೇ ಎಂದಿದ್ಧಾರೆ ಒಬ್ಬರು. ಇವುಗಳು​ ಮನುಷ್ಯರ ಸಹವಾಸದಲ್ಲಿರಲು ಮತ್ತು ಪ್ರೀತಿಸಲು ಹಾತೊರೆಯುತ್ತವೆ ಎಂದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು

ನಾನೊಮ್ಮೆ ಒರಾಂಗುಟಾನ್​ ನೋಡಲು ಹೋದಾಗ, ನನ್ನನ್ನು ಕರೆದು ಬ್ಯಾಗ್​ನಲ್ಲಿ ಏನಿದೆ ತೋರಿಸು ಎಂದು ಹೇಳಿದ್ದಳು. ಬ್ಯಾಗ್​ ಕೊಟ್ಟಾಗ ಅದರೊಳಗೆ ಏನೇನಿದೆ ಎಂದು ಕೈಹಾಕಿ ತಡಕಾಡಿ ನೋಡಿಕೊಟ್ಟಳು ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. ಈ ವಿಡಿಯೋದಲ್ಲಿರುವ ಒರಾಂಗುಟಾನ್​ ನೋಡಿದರೆ ಇದು ಪ್ರಾಣಿಸಂಗ್ರಹಾಲಯದಲ್ಲಿರದೆ, ನಮ್ಮೊಂದಿಗೆ ಇರಬೇಕಿತ್ತು ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Wed, 24 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್