Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು

Snake : ದಿನವಿಡೀ ಇದೇ ಡ್ರಾಯರಿನೆದುರು ಕುಳಿತು ಬಾರ್​ ಮ್ಯಾನೇಜರ್ ಕೆಲಸ ಮಾಡಿದ್ದಾನೆ. ಅದೊಮ್ಮೆ ಏನೋ ಕಾಗದಪತ್ರಗಳಿಗಾಗಿ ಡ್ರಾಯರ್​ ತೆರೆದಾಗಲಿಟಲ್ ಕಾರ್ಪೆಟ್​ ಹಾವುರಾಯರು ಹೀಗೆ ಪ್ರತ್ಯಕ್ಷರಾಗಿದ್ದಾರೆ!

Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು
ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 19, 2023 | 4:01 PM

Viral: ಬೂಟಿನೊಳಗೆ, ಸಿಲಿಂಡರಿನ ಕೆಳಗೆ, ಮಂಚದ ಮೇಲೆ, ಹಂಡೆಯೊಳಗೆ, ಬಸ್ಸಿನೊಳಗೆ ಹೀಗೆ ಹಾವು ಎಲ್ಲೆಂದರಲ್ಲಿ ಅಡಗಿ ಕುಳಿತ ವಿಡಿಯೋಗಳನ್ನು ನೀವೀಗಾಗಲೇ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಾರೊಂದರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಈ ಲಿಟಲ್ ಕಾರ್ಪೆಟ್​ ಹಾವು ಮಲಗಿದೆ. ಡ್ಯಾಯರ್​ ಓಪನ್ ಮಾಡಿದಾಗ ಮ್ಯಾನೇಜರ್ ಪರಿಸ್ಥಿತಿ ಹೇಗಾಗಿರಬೇಡ? ಇದೀಗ ನೆಟ್ಟಿಗರು ಇದನ್ನು ಪರಿಪರಿಯಾಗಿ ಪ್ರತಿಕ್ರಿಯಿಸಿ ಮಲಗಿರುವ ಹಾವನ್ನು ದೂರದಿಂದಲೇ ಗೋಳು ಹುಯ್ದುಕೊಳ್ಳುತ್ತಿದ್ದಾರೆ!

ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ 24/7 ಫೇಸ್​ಬುಕ್​ ಪುಟದಲ್ಲಿ ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ದಿನವಿಡೀ ಇದೇ ಡ್ರಾಯರಿನೆದುರು ಕುಳಿತು ಬಾರ್​ ಮ್ಯಾನೇಜರ್ ಕೆಲಸ ಮಾಡಿದ್ದಾನೆ. ಅದೊಮ್ಮೆ ಏನೋ ಕಾಗದಪತ್ರಗಳಿಗಾಗಿ ಡ್ರಾಯರ್​ ತೆರೆದಾಗ ನಾಗರಾಜರು ಹೀಗೆ ಪ್ರತ್ಯಕ್ಷರಾಗಿದ್ದಾರೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ಈಗಾಗಲೇ ಈ ಪೋಸ್ಟ್​ ಅನ್ನು 1,300ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಹಂಚಿಕೊಂಡಿದ್ದು, ಸುಮಾರು 190 ಜನರು ಪ್ರತಿಕ್ರಿಯಿಸಿದ್ದಾರೆ. ತುಂಬಾ ಆರಾಮದಾಯಕವಾಗಿದೆಯಲ್ಲ ನಾಗಣ್ಣ ಈ ಜಾಗ ಎಂದು ಹಲವರು ಕೇಳಿದ್ದಾರೆ. ವೀಕೆಂಡ್​ನಲ್ಲಿ ಬಿಯರ್​ ಕುಡಿಯುವ ಆಸೆಯಾಗಿತ್ತೋ ನಿನಗೆ ಎಂದು ಪ್ರಶ್ನಿಸಿದ್ಧಾರೆ ಕೆಲವರು. ಲೆಕ್ಕಗಿಕ್ಕ ಎಲ್ಲ ಸರಿಯಾಗಿ ಇಟ್ಟಿದ್ದಾನಾ ಮ್ಯಾನೇಜರ್​ ಎಂದು ಒಬ್ಬರು ಕೇಳಿದ್ದಾರೆ. ನೀನು ಆಡಿಟಿಂಗ್​ ಕೆಲಸ ಯಾವಾಗ ಮಾಡಲು ಶುರು ಮಾಡಿದೆ ಎಂದು ಮತ್ತೊಬ್ಬರು ಕೇಳಿದ್ಧಾರೆ.

ಈ ಫೋಟೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:53 pm, Fri, 19 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ