Viral Video: ಆ್ಯಪಲ್ ಸ್ಟೋರ್‌ನಿಂದ ಮೊಬೈಲ್ ಕದ್ದು, ಎರಡನೇ ಮಹಡಿಯಿಂದ ಬಿದ್ದ, ಏಳಲಾಗದೇ ಸಿಕ್ಕಿಬಿದ್ದ
ಮೊಬೈಲ್ಗಳ ಕಳ್ಳತನ ಮಾಡುವುವರಿದ್ದಾರೆ, ಸರಗಳ್ಳತನ ಮಾಡುವವರಿದ್ದಾರೆ, ಮನೆ ದರೋಡೆ ಮಾಡುವವರಿದ್ದಾರೆ ನಿಮ್ಮ ಲಕ್ ಚೆನ್ನಾಗಿದ್ದರೆ ಅಥವಾ ಅವರ ಲಕ್ ಕೈ ಕೊಟ್ಟರೆ ಜಯ ನಿಮ್ಮದೇ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
ಮೊಬೈಲ್ಗಳ ಕಳ್ಳತನ ಮಾಡುವುವರಿದ್ದಾರೆ, ಸರಗಳ್ಳತನ ಮಾಡುವವರಿದ್ದಾರೆ, ಮನೆ ದರೋಡೆ ಮಾಡುವವರಿದ್ದಾರೆ ನಿಮ್ಮ ಲಕ್ ಚೆನ್ನಾಗಿದ್ದರೆ ಅಥವಾ ಅವರ ಲಕ್ ಕೈ ಕೊಟ್ಟರೆ ಜಯ ನಿಮ್ಮದೇ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ನಿತ್ಯ ನೂರಾರು ಕಳ್ಳತನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ, ಹಾಗೆಯೇ ಆ್ಯಪಲ್ ಸ್ಟೋರ್‌ನಿಂದ ಮೊಬೈಲ್ಗಳನ್ನು ಕುದ್ದು ಎಸ್ಕೇಪ್ ಆಗಲು ನೋಡಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ ಅದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಸಾಮಾನ್ಯವಾಗಿ ಜನರು ತರಾತುರಿಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದು ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ.
Dude jumps off 2nd floor trying to get away after robbing Apple store ? pic.twitter.com/pdEjodh1Ka
— Crazy Clips (@crazyclipsonly) May 17, 2023
ಈ ವೀಡಿಯೊದಲ್ಲಿ, ಆ್ಯಪಲ್ ಸ್ಟೋರ್‌ನಿಂದ ದರೋಡೆ ಮಾಡಿದ ನಂತರ ವ್ಯಕ್ತಿಯು ಸಿಕ್ಕಿಬಿದ್ದಿದ್ದಷ್ಟೇ ಅಲ್ಲದೇ ತೊಂದರೆಯನ್ನು ಅನುಭವಿಸಬೇಕಾಯಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆ್ಯಪಲ್ ಸ್ಟೋರ್‌ನಿಂದ ಕಳ್ಳತನ ಮಾಡಿ ಓಡಿಹೋಗಲು ಯತ್ನಿಸುತ್ತಿರುವುದು ಕಂಡು ಬರುತ್ತದೆ.
ಅಷ್ಟರಲ್ಲಿ ಎರಡನೇ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗುತ್ತಾನೆ. ಮೇಲಿಂದ ಕೆಳಗೆ ಬೀಳುತ್ತಾನೆ, ಗಂಭೀರ ಗಾಯವಾಗುತ್ತದೆ. ಇದರ ಹೊರತಾಗಿಯೂ, ಆತ ಮತ್ತೆ ಓಡಿಹೋಗಲು ಪ್ರಯತ್ನಿಸುತ್ತಾನೆ ಆದರೆ ಗಾಯವು ತುಂಬಾ ತೀವ್ರವಾಗಿರುತ್ತದೆ, ನಡೆಯಲು ಸಾಧ್ಯವಾಗದೆ ಅಲ್ಲಿಯೇ ಮಲಗುತ್ತಾನೆ. ವಿಡಿಯೋ ನೋಡಿದ ಜನರು ಕೂಡ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, ಬಹುಶಃ ಕೆಳಗೆ ಬಿದ್ದ ಕಾರಣ ಅವನ ಬೆನ್ನು ಮುರಿಸಿರಬೇಕು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, ತಪ್ಪು ಮಾಡಿದರೆ ತಪ್ಪು ಫಲಿತಾಂಶವೇ ಬರುವುದು ಎಂದು ಬರೆದಿದ್ದಾರೆ. ಇಲ್ಲಿಯವರೆಗೆ 11 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ