ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ ಒಡಹುಟ್ಟಿದವರು 75 ವರ್ಷಗಳ ನಂತರ ಮತ್ತೆ ಒಂದಾದರು! ಹೇಗೆ ಗೊತ್ತಾ ಇಲ್ಲಿದೆ ವಿಡಿಯೋ
75 ವರ್ಷಗಳ ಹಿಂದೆ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ವ್ಯಕ್ತಿ ಮತ್ತು ಅವನ ಸಹೋದರಿ ಕರ್ತಾರ್ಪುರದಲ್ಲಿ ಮತ್ತೆ ಒಂದಾಗಿದ್ದಾರೆ. ಇದೊಂದು ಐತಿಹಾಸಿಕ ಘಟನೆಯಾಗಿದ್ದು ಬೇರೆ ಬೇರೆಯಾಗಿದ್ದವರನ್ನು ಮತ್ತೆ ಒಂದು ಗೂಡಿಸುವಲ್ಲಿ ಕರ್ತಾರ್ಪುರ ಆಡಳಿತ ಮಂಡಳಿ ಯಶಸ್ವಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ನೀವು ಹಲವಾರು ರೀತಿಯ ವಿಡಿಯೋಗಳನ್ನು ನೋಡಿರಬಹುದು. ಅದರಲ್ಲಿ ಹಲವು ನಿಮ್ಮನ್ನು ನಗಿಸುತ್ತವೆ. ಇನ್ನು ಕೆಲವು ನಿಮಗೆ ಗೊತ್ತಿಲ್ಲದಂತೆ ನಿಮ್ಮ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಸಾಮಾನ್ಯವಾಗಿ ನೀವು ನಿಮ್ಮ ಮನೆಯವರನ್ನು ಒಂದೋ ಎರಡೋ ವರ್ಷ ಬಿಟ್ಟಿರುತ್ತೀರಿ ಹೆಚ್ಚೆಂದರೆ ಐದೋ ಹತ್ತೋ ವರ್ಷ ಆದರೆ 75 ವರ್ಷಗಳಿಂದ ದೂರ ಇದ್ದು ಬಳಿಕೆ ಒಂದಾಗುವುದನ್ನು ನೀವು ನೋಡಿದ್ದೀರಾ? ಆದರೆ ಇಂತಹ ಘಟನೆ ಕರ್ತಾರ್ಪುರದಲ್ಲಿ ನಡೆದಿದೆ. ಬಹಳ ವರ್ಷಗಳ ಹಿಂದೆ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಸಹೋದರ ಮತ್ತು ಅವರ ಸಹೋದರಿ ಒಂದಾದ ಹೃದಯಸ್ಪರ್ಶಿ ಘಟನೆ ನಡೆದಿದೆ. 1947 ರಲ್ಲಿ ನಡೆದ ದುರಂತ ವಿಭಜನೆಯಿಂದ ಒಡಹುಟ್ಟಿದವರು ಬೇರ್ಪಟ್ಟರು, ಬಳಿಕ ಈ ವಿಭಜನೆ ಭಾರತದಿಂದ ಪಾಕಿಸ್ತಾನ ರಚನೆಗೆ ಕಾರಣವಾಯಿತು ಎಂಬುದು ನಿಮಗೆ ತಿಳಿದಿರಬಹುದು.
81 ವರ್ಷದ ಮಹೇಂದ್ರ ಕೌರ್ ತಮ್ಮ ಕುಟುಂಬದೊಂದಿಗೆ ಕರ್ತಾರ್ಪುರ ಕಾರಿಡಾರ್ ಮೂಲಕ ಭಾರತದಿಂದ ಈ ಗುರುದ್ವಾರಕ್ಕೆ ಪ್ರಯಾಣಿಸಿದರು. ಮತ್ತೊಂದೆಡೆ, ಅವರ 78 ವರ್ಷದ ಬೇರ್ಪಟ್ಟ ಸಹೋದರ ಶೇಖ್ ಅಬ್ದುಲ್ ಅಜೀಜ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ತಮ್ಮ ಕುಟುಂಬದೊಂದಿಗೆ ಕರ್ತಾರ್ಪುರಕ್ಕೆ ಆಗಮಿಸಿದರು. ವಯಸ್ಸಾದ ಇಬ್ಬರೂ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ಪುರದಲ್ಲಿ ಭೇಟಿಯಾದರು.
An other separated family meetup at kartarpur Corridor (a Corridor of Peace). Mr sheikh Abdul Aziz and his sister Mohinder kaur who got separated at the time of partition in 1947 met at Gurdwara Sri Darbar Sahib kartarpur. Both families were very happy and praised the government pic.twitter.com/TACb7O7SjH
— PMU Kartarpur Official (@PmuKartarpur) May 20, 2023
ಈ ಒಡಹುಟ್ಟಿದವರ ವೀಡಿಯೊವನ್ನು ಪಿಎಂಯು (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಯುನಿಟ್) ಕರ್ತಾರ್ಪುರ ಅಧಿಕಾರಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ, ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವುದು, ಸಂತೋಷದಿಂದ ಮುಳುಗಿರುವುದನ್ನು ಕಾಣಬಹುದು. ಏಕೆಂದರೆ ಅವರು 75 ವರ್ಷಗಳ ಬಳಿಕ ಒಬ್ಬರನೊಬ್ಬರು ನೋಡುತ್ತಿದ್ದಾರೆ. ಜೊತೆಗೆ ಹಿಂದಿನದನ್ನು ನೆನಪು ಮಾಡಿಕೊಂಡು ಮರುಗುತ್ತಾ ತಮ್ಮ ಹೆತ್ತವರನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿರುವುದನ್ನು ನೀವು ನೋಡಬಹುದು. ಇವರಷ್ಟೇ ಅವರ ಮನೆಯವರು ಸಂತೋಷದಲ್ಲಿ ತೇಲಾಡುತ್ತಿದ್ದಾರೆ.
ಪ್ರತ್ಯೇಕವಾಗಿದ್ದು ಹೇಗೆ?
1947 ರ ವಿಭಜನೆಯ ಸಮಯದಲ್ಲಿ, ಪಂಜಾಬ್ ನಲ್ಲಿ ವಾಸಿಸುತ್ತಿದ್ದ ಸರ್ದಾರ್ ಭಜನ್ ಸಿಂಗ್ ಅವರ ಕುಟುಂಬವು ದುರಂತವಾಗಿ ಛಿದ್ರವಾಯಿತು ಎಂದು ಡಾನ್ ವರದಿ ಮಾಡಿದೆ. ವಿಭಜನೆಯ ನಂತರ, ಅಜೀಜ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರಗೊಂಡರು. ಅವರ ಇತರ ಕುಟುಂಬ ಸದಸ್ಯರು ಭಾರತದಲ್ಲಿಯೇ ಉಳಿದುಕೊಂಡರು. ಅಜೀಜ್ ಅವರು ತಮ್ಮ ಕುಟುಂಬದಿಂದ ಬೇರ್ಪಟ್ಟ ನಂತರ ಅನೇಕ ವರ್ಷ ಸಂಕಟದಲ್ಲಿಯೇ ಕಳೆದೆ ಎಂದು ಅವರೇ ತಮ್ಮ ದುಃಖ ಹಂಚಿಕೊಂಡರು. ಎಲ್ಲರನ್ನು ಹುಡುಕಲು ಪ್ರಯತ್ನಿಸಿದರೂ ಕಳೆದುಹೋದ ಹೆತ್ತವರ ಬಗ್ಗೆ ಯಾಗಲಿ ಅಥವಾ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಬಳಿಕ ಅವರು ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾದರು ಆದರೂ ಅವರಿಗೆ ಬಿಟ್ಟು ಹೋದ ಕುಟುಂಬದೊಂದಿಗೆ ಮತ್ತೆ ಒಂದಾಗುವ ಹಂಬಲವನ್ನು ಯಾವಾಗಲೂ ವ್ಯಕ್ತಪಡಿಸುತ್ತಿದ್ದರು ಎಂದು ಅವರ ಮನೆಯವರು ತಿಳಿಸಿದ್ದಾರೆ.
ಇದನ್ನೂ ಓದಿ: ಆ್ಯಪಲ್ ಸ್ಟೋರ್ನಿಂದ ಮೊಬೈಲ್ ಕದ್ದು, ಎರಡನೇ ಮಹಡಿಯಿಂದ ಬಿದ್ದ, ಏಳಲಾಗದೇ ಸಿಕ್ಕಿಬಿದ್ದ
ಕರ್ತಾರ್ಪುರ ಕಾರಿಡಾರ್: ಬೇರ್ಪಟ್ಟ ಜನರು ಮತ್ತೆ ಒಂದಾಗುವ ಸ್ಥಳ:
ವಿಭಜನೆಯ ಸಮಯದಲ್ಲಿ ತನ್ನ ಸಹೋದರಿಯಿಂದ ಬೇರ್ಪಟ್ಟ ವ್ಯಕ್ತಿಯ ವಿವರಗಳನ್ನು ನೀಡಿದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವು ಎಂದು ಕುಟುಂಬ ಸದಸ್ಯರು ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ಮೂಲಕ ಎರಡೂ ಕುಟುಂಬಗಳು ಸಂಪರ್ಕ ಸಾಧಿಸಿದವು ಮತ್ತು ಮಹೇಂದ್ರ ಮತ್ತು ಅಜೀಜ್ ನಿಜವಾಗಿಯೂ ಬೇರ್ಪಟ್ಟ ಒಡಹುಟ್ಟಿದವರು ಎಂದು ಬಳಿಕ ಗೊತ್ತಾದ್ದರಿಂದ ಎರಡು ಕುಟುಂಬ ಒಂದಾಗುವಂತೆ ಮಾಡಿದೆ.
ಈ ಸುಂದರ ಘಟನೆಯನ್ನು ಗುರುತಿಸಿದ ಕರ್ತಾರ್ಪುರ ಆಡಳಿತ ಮಂಡಳಿ ಅವರನ್ನು ಕರೆತಂದು ಎರಡೂ ಕುಟುಂಬಗಳಿಗೆ ಹೂಮಾಲೆ ಹಾಕುವ ಮೂಲಕ ಬರ ಮಾಡಿಕೊಂಡು ಸಿಹಿತಿಂಡಿ ವಿತರಿಸಿತು. ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಕೃತಜ್ಞತೆ ಸಲ್ಲಿಸಿದ ಮಹೇಂದ್ರ ಸಿಂಗ್, ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳನ್ನು ಶ್ಲಾಘಿಸಿದರು. ಈ ಕಾರಿಡಾರ್, ಎರಡು ಕುಟುಂಬಗಳನ್ನು ಮತ್ತು ದೀರ್ಘಕಾಲದಿಂದ ಕಳೆದುಹೋದ ಪ್ರೀತಿ ಮತ್ತು ಆತ್ಮೀಯತೆಯನ್ನು ಮತ್ತೆ ಒಂದಾಗಿಸುವಲ್ಲಿ ಶ್ರಮ ವಹಿಸಿದೆ, ಎಂದು ಧನ್ಯವಾದ ತಿಳಿಸಿದರು. ಅಂತಹ ಏಕೀಕರಣ ಮತ್ತು ಪ್ರೀತಿಯ ಇದೇ ರೀತಿಯ ಕಥೆಗಳಿಗಾಗಿ, ಕರ್ತಾರ್ಪುರ ಕಾರಿಡಾರ್ ಅನ್ನು ಪ್ರೀತಿ, ಶಾಂತಿ ಮತ್ತು ಏಕೀಕರಣದ ಕಾರಿಡಾರ್ ಎಂದೂ ಕರೆಯಲಾಗುತ್ತದೆ. ಕಳೆದ ವರ್ಷ, ಜನವರಿಯಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಕಾರಿಡಾರ್ನಲ್ಲಿ ಮತ್ತೆ ಒಂದಾಗಿದ್ದರು. ಜೊತೆಗೆ 80 ವರ್ಷದ ಮುಹಮ್ಮದ್ ಸಿದ್ದೀಕ್ ಮತ್ತು 78 ವರ್ಷದ ಹಬೀಬ್ ಭಾವನಾತ್ಮಕ ಪುನರ್ಮಿಲನದಲ್ಲಿ ಪರಸ್ಪರ ಭೇಟಿಯಾಗಿದ್ದರು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: