Updated on:Apr 11, 2023 | 7:06 PM
ನಟಿ ಅನುಪಮಾ ಪರಮೇಶ್ವರನ್ ಅವರು ಬಹುಭಾಷೆಯಲ್ಲಿ ಬೇಡಿಕೆ ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾದ ಇನ್ನುಳಿದ ವಿಭಾಗಗಳ ಬಗ್ಗೆಯೂ ಅವರು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.
ನಟನೆಯ ಜೊತೆಗೆ ಛಾಯಾಗ್ರಹಣದಲ್ಲೂ ಅನುಪಮಾ ಪರಮೇಶ್ವರನ್ ಅವರಿಗೆ ಆಸಕ್ತಿ ಇದೆ. ಹಾಗಾಗಿ ‘ಐ ಮಿಸ್ ಯೂ’ ಕಿರುಚಿತ್ರಕ್ಕೆ ಅವರು ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅವರ ಈ ಪ್ರತಿಭೆ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಎನಿಸಿದೆ.
ತೆಲುಗು ಭಾಷೆಯ ‘ಐ ಮಿಸ್ ಯೂ’ ಕಿರುಚಿತ್ರ ಯೂಟ್ಯೂಬ್ನಲ್ಲಿ ಲಭ್ಯವಿದೆ. ಇದಕ್ಕೆ ಸಂಕಲ್ಪ ಗೋರಾ ನಿರ್ದೇಶನ ಮಾಡಿದ್ದಾರೆ. 10 ನಿಮಿಷ ಅವಧಿಯ ಈ ಶಾರ್ಟ್ ಫಿಲ್ಮ್ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೆಲವು ನಟಿಯರು ಕೇವಲ ಗ್ಲಾಮರ್ ಗೊಂಬೆಯಾಗಿ ಇರುವ ಬದಲು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ದುಲ್ಕರ್ ಸಲ್ಮಾನ್ ನಿರ್ಮಾಣದ ಮೊದಲ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು.
ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಅವರು ನಾಯಕಿಯಾಗಿ ನಟಿಸಿದರು. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಪರಿಚಯಗೊಂಡರು.
Published On - 7:06 pm, Tue, 11 April 23