Viral Video: ಶರಾರಾ ಶರಾರಾ; ‘ಹೃದಯವೇ ಕಳೆದುಹೋಗುತ್ತಿದೆ’ ಕರಗುತ್ತಿರುವ ನೆಟ್ಟಿಗರು
Asha Bhosle : ಕಪ್ಪು ಸೀರೆ ಉಟ್ಟಿದ್ದರೆ ಇನ್ನೂ ಆಕರ್ಷಕವಾಗಿ ಕಾಣುತ್ತಿದ್ದಿರಿ ಎಂದು ಒಬ್ಬರು ಹೇಳಿದ್ಧಾರೆ. ನೃತ್ಯವನ್ನೇನೋ ಛಂದ ಮಾಡಿದ್ದೀರಿ, ಆದರೆ ಕೊನೇತನಕ ಕೈಯಲ್ಲಿ ರಬ್ಬರ್ ಬ್ಯಾಂಡ್! ಇನ್ನೊಬ್ಬರು ಕಾಲೆಳೆದಿದ್ದಾರೆ. ನೀವೇನಂತೀರಿ?

Sharara : 2002ರಲ್ಲಿ ತೆರೆಗೆ ಬಂದ ‘ಮೇರೆ ಯಾರ್ ಕೇ ಶಾದೀ ಹೈ’ ಸಿನೆಮಾದಲ್ಲಿ ಆಶಾ ಭೋಸ್ಲೆ ಹಾಡಿರುವ ‘ಶರಾರಾ’ ಹಾಡು ಈಗಲೂ ಕಿವಿಗೆ ಬಿದ್ದರೆ ಸಾಕು, ನಮಗರಿವಿಲ್ಲದೆ ಗುನಗುನಿಸುವುದನ್ನು ಶುರುಮಾಡುತ್ತೇವೆ. ಡ್ಯಾನ್ಸ್ನಲ್ಲಿ ಆಸಕ್ತಿ ಇರುವವರು ನಿಂತನಿಂತಲ್ಲಿಯೇ ಹೆಜ್ಜೆ ಹಾಕತೊಡಗುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆನಂದೀ ಬಣ್ಣದ ಸೀರೆಯುಟ್ಟಿರುವ ಯುವತಿಯೊಬ್ಬಳು ಸ್ಟೇಜ್ ಮೇಲೆ ಈ ಹಾಡಿಗೆ ಉಲ್ಲಾಸದಿಂದ ಹೆಜ್ಜೆ ಹಾಕಿದ್ದಾರೆ.
ತೃಪ್ತಿ ಠಾಕೂರ್ ಎನ್ನುವವರು ಈ ವಿಡಿಯೋ ಅನ್ನು ಮೇ 8ಕ್ಕೆ ಹಂಚಿಕೊಂಡಿದ್ದಾರೆ. ಈತನಕ ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 4 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ರೀಲ್ಸ್ ಅನ್ನು ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಸುಂದರವಾಗಿದೆ ಎಂದಿದ್ಧಾರೆ ಹಲವಾರು ಜನ.
ಇದನ್ನೂ ಓದಿ : Viral Video;ಭಾರತೀಯ ವಾಹನೋದ್ಯಮದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕ ಪ್ರತಿಫಲ’ ಆನಂದ ಮಹೀಂದ್ರಾ
ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಜನರ ಹರ್ಷೋದ್ಗಾರ ಮತ್ತಷ್ಟು ಕಲಾವಿದೆಯನ್ನ ಮತ್ತಷ್ಟು ಪ್ರೋತ್ಸಾಹಿಸುವಂತಿದೆ ಎಂದು ಒಬ್ಬರು ಹೇಳಿದ್ದಾರೆ. ಆದರೆ ಒಬ್ಬರು ಮಾತ್ರ, ಆಕರ್ಷಕವಾಗಿ ನರ್ತಿಸಿದೀರಿ. ಆದರೆ ಕೊನೆಯವರೆಗೂ ರಬ್ಬರ್ ಬ್ಯಾಂಡ್ ಕೈಯಲ್ಲೇ ಇತ್ತು ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ : Viral Video: ನಾನ್ ಕಲಿಯುಗದ ಕ್ಯಾಟ್, ನಾ ಪೇಳ್ವಂತೆ ನೀ ಕೇಳ್ ಮಾನವಾ!
ಸಿನೆಮಾದ ನಾಯಕಿಯಂತೆ ನೀವೂ ಕಪ್ಪು ಡ್ರೆಸ್ ಅಥವಾ ಸೀರೆ ಉಟ್ಟಿದ್ದರೆ ಇನ್ನೂ ಚೆಂದ ಕಾಣುತ್ತಿದ್ದಿರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹಾ ನನ್ನ ಹೃದಯವೇ ಕಳೆದುಹೋಗಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ರೀಲ್ ನೋಡುತ್ತ ನಾನು ಹಿಂದೆ ಹಿಂದೆ ಹೋಗುತ್ತಿದ್ದೇನೆ, ಆಹಾ ಎನ್ನುತ್ತಿದ್ದಾರೆ ಇನ್ನೂ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:33 pm, Sat, 20 May 23