Viral Video: ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ರಕ್ಷಿಸುತ್ತಿರುವ ಪುಟ್ಟ ಬಾಲಕ; ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡ ನಾಗಾಲ್ಯಾಂಡ್ ಸಚಿವರು

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು, ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ರಕ್ಷಿಸುತ್ತಿರುವ ಪುಟ್ಟ ಬಾಲಕನ ಹೃದಯ ವಿದ್ರಾವಕ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Viral Video: ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ರಕ್ಷಿಸುತ್ತಿರುವ ಪುಟ್ಟ ಬಾಲಕ; ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡ ನಾಗಾಲ್ಯಾಂಡ್ ಸಚಿವರು
Follow us
| Updated By: ಅಕ್ಷತಾ ವರ್ಕಾಡಿ

Updated on:May 20, 2023 | 7:01 PM

ನಾಗಾಲ್ಯಾಂಡ್ ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವರಾದ ತೆಮ್ಜೆನ್ ಇಮ್ನಾ ಅಲಾಂಗ್, ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಭರಿದ ಪೋಸ್ಟ್ ಗಳನ್ನು ಹಂಚಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಹಾಸ್ಯದ ಪೋಸ್ಟ್ ಗಳು ಜನರ ಮುಖದಲ್ಲಿ ಮಂದಹಾಸವನ್ನು ಮೂಡಿಸಲು ಎಂದಿಗೂ ವಿಫಲವಾಗುವುದಿಲ್ಲ. ಅವರು ಇತ್ತೀಚಿಗೆ ಚಂಡಮಾರುತದ ನಡುವೆ ತನ್ನ ಅಂಗಡಿಯನ್ನು ರಕ್ಷಿಸುವ ಪುಟ್ಟ ಬಾಲಕನ ಕುರಿತ ಹೃದಯವಿದ್ರಾವಕ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದಾರೆ. ಹಾಗೂ ‘ಜವಬ್ದಾರಿಯನ್ನು ಅರ್ಥಮಾಡಿಕೊಳ್ಳಲು ವಯಸ್ಸಿನ ಅಗತ್ಯವಿಲ್ಲ, ಸಂದರ್ಭಗಳು ಮಾತ್ರ ಅದನ್ನು ಕಲಿಸುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವೀಡಿಯೋ ಎಲ್ಲರಿಗೂ ಸ್ಪೂತಿದಾಯಕ ಸಂದೇಶವನ್ನು ನೀಡುವಂತಿದೆ.

ಈ ವೈರಲ್ ವೀಡಿಯೋ ಚಂಡಮಾರುತದ ನಡುವೆ ತಮ್ಮ ಅಂಗಡಿಯನ್ನು ಉಳಿಸಿಕೊಳ್ಳಲು ಚಿಕ್ಕ ಹುಡುಗ ತನ್ನ ತಾಯಿಗೆ ಸಹಾಯ ಮಾಡುವುದನ್ನು ತೋರಿಸುತ್ತದೆ. ಅಂಗಡಿಯಲ್ಲಿನ ವಸ್ತುಗಳನ್ನು ಭದ್ರಪಡಿಸಲು ಬಾಲಕನ ತಾಯಿ ವಸ್ತುಗಳಿಗೆ ಟರ್ಪಾಲಿನ್ ಹಾಳೆಯನ್ನು ಸುತ್ತಿ ಹಗ್ಗವನ್ನು ಕಟ್ಟುತ್ತಿರುತ್ತಾರೆ. ಇತ್ತಕಡೆ ಅಂಗಡಿ ಮೇಲೆ ಕಟ್ಟಿದ್ದ ಟರ್ಪಾಲಿನ್ ಹಾಳೆ ಗಾಳಿಯ ರಭಸಕ್ಕೆ ಕಿತ್ತು ಹೋಗಬಾರದೆಂದು, ಬಾಲಕ ತನ್ನ ಕೈಗಳಿಂದ ಅದನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ ನಂತರ ಗಾಳಿಯಿಂದ ಹಾರಿಹೋದ ಕುರ್ಚಿಯನ್ನು ಓಡಿ ಹೋಗಿ ತೆಗೆದುಕೊಂಡು ಬಂದು ಅಂಗಡಿಯ ಒಳಗೆ ಇಡುತ್ತಾನೆ. ಇಲ್ಲಿ ಪುಟ್ಟ ಬಾಲಕನ ಜವಬ್ದಾರಿ ಹಾಗೂ ಪ್ರೌಢತೆ ನೋಡುಗರ ಗಮನ ಸೆಳೆದಿದೆ.

ಇದನ್ನೂ ಓದಿ: ಇಮೇಲ್​​ನಲ್ಲಿ ‘XX’ ಸಂದೇಶವನ್ನು ತಪ್ಪಾಗಿ ಭಾವಿಸಿ ಬಾಸ್ ವಿರುದ್ಧ ದೂರು ನೀಡಿದ ಮಹಿಳೆ

31 ಸೆಕೆಂಡುಗಳ ಈ ವೀಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, 427.8 ಸಾವಿರ ವೀಕ್ಷಣೆಗಳನ್ನು ಮತ್ತು 17.5 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ ಗಳು ಕೂಡಾ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ನಿಮ್ಮ ಉಳಿವಿಗಾಗಿ ನಿಮ್ಮ ಬಳಿ ಏನಿದೆ ಎಂಬುವುದನ್ನು ನೀವು ಅರಿತುಕೊಂಡ ಕ್ಷಣ ನಿಮ್ಮ ವಯಸ್ಸು ಎಷ್ಟೇ ಆಗಿದ್ದರೂ, ನೀವು ಜವಬ್ದಾರಿಯುತರಾಗುತ್ತೀರಿ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಪ್ರತಿಕೂಲತೆ ಮತ್ತು ಕೆಟ್ಟ ಸಮಯಗಳು ನಮಗೆ ಕಾಳಜಿ ಮತ್ತು ಜವಬ್ದಾರಿಯುತವಾಗಿರಲು ಎಲ್ಲವನ್ನೂ ಕಲಿಸುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಶಾಲೆಗಳಲ್ಲಿ ಕಲಿಸದ ಪ್ರಾಯೋಗಿಕ ಪಾಠಗಳನ್ನು ಜೀವನ ಕಲಿಸುತ್ತದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:01 pm, Sat, 20 May 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ