Viral News: ಇಮೇಲ್ನಲ್ಲಿ ‘XX’ ಸಂದೇಶವನ್ನು ತಪ್ಪಾಗಿ ಭಾವಿಸಿ ಬಾಸ್ ವಿರುದ್ಧ ದೂರು ನೀಡಿದ ಮಹಿಳೆ
ಇ.ಎಸ್.ಎಸ್.ಡಿ.ಒ.ಸಿ.ಎಸ್ ನ ಲಂಡನ್ ಕಛೇರಿಯಲ್ಲಿ ಐಟಿ ವೃತ್ತಿಪರ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕರೀನಾ ಗ್ಯಾಸ್ಪರೋವಾ ಅವರು ತಪ್ಪು ಗ್ರಹಿಕೆಯಿಂದ ತನ್ನ ಬಾಸ್ ಅಲೆಕ್ಸಾಂಡರ್ ಗೌಲಾಂಡ್ರಿಸ್ ವಿರುದ್ಧ ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಅನ್ಯಾಯದ ವಜಾಗೊಳಿಸುವಿಕೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದರು. ಮತ್ತು ಈಕೆ ತನ್ನ ತಪ್ಪು ಗ್ರಹಿಕೆಗಾಗಿ 5 ಸಾವಿರ ಪೌಂಡ್ ಗಣನೀಯ ಮೊತ್ತವನ್ನು ಕಂಪೆನಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಬಾಸ್ ಮತ್ತು ಉದ್ಯೋಗಿ ನಡುವೆ ಘರ್ಷಣೆ ಸಾಮಾನ್ಯವಾಗಿರುತ್ತದೆ. ಇಲ್ಲದಿದ್ದರೆ ಕೆಲಸ ಸುಗಮವಾಗಿ ನಡೆಯುವುದಿಲ್ಲ. ಕೆಲವು ಮೇಲಾಧಿಕಾರಿಗಳು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಕೂಡಾ ಹೇಳಲಾಗುತ್ತದೆ. ಆದರೆ ಈ ರೀತಿಯ ಕೆಲವೊಂದು ತಪ್ಪು ಗ್ರಹಿಕೆಗಳಿಂದ ದೊಡ್ಡ ಮೊತ್ತದ ಬೆಲೆಯನ್ನು ತೆರಬೇಕಾಗುತ್ತದೆ. ಇದೇ ರೀತಿ ತನ್ನ ಬಾಸ್ ಕಳುಹಿಸಿದ ಮೇಲ್ನ್ನು ತಪ್ಪಾಗಿ ಗ್ರಹಿಸಿದ ಉದ್ಯೋಗಿಯು ಕಂಪೆನಿಯ ವಿರುದ್ಧ ಉದ್ಯೋಗ ನ್ಯಾಯ ಮಂಡಳಿಯಲ್ಲಿ ದೂರನ್ನು ಸಲ್ಲಿಸಿ, ಮೇಲಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಗೆ ಕಳುಹಿಸಿದ ಅಧಿಕೃತ ಮೇಲ್ ನಲ್ಲಿ ಬಾಸ್ ‘XX’ ಮತ್ತು ‘YY’ ನಂತಹ ಲೈಂಗಿಕ ಭಾಷೆಯನ್ನು ಬಳಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕಾಗದ ರಹಿತ ವ್ಯಾಪರ ಪರಿಹಾರಗಳನ್ನು ಒದಗಿಸುವ ಕಂಪೆನಿಯಾದ ಇ.ಎಸ್.ಎಸ್.ಡಿ.ಒ.ಸಿ.ಎಸ್ ನ ಲಂಡನ್ ಕಛೇರಿಯಲ್ಲಿ ಐಟಿ ಉದ್ಯೋಗಿ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕರೀನಾ ಗ್ಯಾಸ್ಪರೋವಾ ಅವರು ಈಮೇಲ್ ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತನ್ನ ಬಾಸ್ ಅಲೆಕ್ಸಾಂಡರ್ ಗೌಲಾಂಡ್ರಿಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಉದ್ಯೋಗ ನ್ಯಾಯಮಂಡಳಿಯಲ್ಲಿ ಕಂಪೆನಿಯ ವಿರುದ್ಧ ದೂರನ್ನು ಸಲ್ಲಿಸಿ, ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಅನ್ಯಾಯದ ವಜಾಗೊಳಿಸುವಿಕೆ ಆರೋಪದ ಮೇಲೆ ಕರೀನಾ ಮೊಕದ್ದಮೆ ಹೂಡಿದ್ದಾರೆ.
ಈ ಸಂದರ್ಭದಲ್ಲಿ ಆಕೆ ತನ್ನ ಬಾಸ್ ತನಗೆ ಕಳುಹಿಸಿದ ಇಮೇಲ್ ನ್ನು ಉದ್ಯೋಗ ನ್ಯಾಯಮಂಡಳಿಗೆ ಲಗತ್ತಿಸಿದ್ದಾರೆ.
ಇಮೇಲ್ನಲ್ಲಿ ಹೀಗಿದೆ:
“ನೀವು ದಯವಿಟ್ಟು ಈ ಕೆಳಗಿನವುಗಳನ್ನು ಪೂರ್ಣಗೊಳಿಸಬಹುದೇ: ನಾವು ಪ್ರಸ್ತುತ ‘XX’ ಅಗ್ರಿಸ್ ಕಂಪೆನಿಗಳು, ‘YY’ ಜಾರ್ಜಾ ಲೈನ್ ಗಳ ಮೂಲಕ ಉತ್ತರ- ದಕ್ಷಿಣ ಹರಿವುಗಳಲ್ಲಿ ಜಲಮಾರ್ಗದ ಮೂಲಕ ಮೆಕ್ಕೆಜೋಳದ ಸರಕುಗಳನ್ನು ಬಳಸುತ್ತಿದ್ದೇವೆಯೇ??? ಅಲ್ಲದೆ ಸರಿಯಾದ ಸಮಯದೊಂದಿಗೆ ರೋಲ್ ಔಟ್, ಬ್ಯಾಲೆನ್ಸ್, ಅಂದಾಜು ಸಮಯದ ಬಗ್ಗೆ ನೀವು ಹೇಳಬಲ್ಲಿರಾ…. ಧನ್ಯವಾದ” ಎಂಬುದು ಇಮೇಲ್ ನ ಸಾರಾಂಶವಾಗಿದೆ.
ಆದರೆ ಅದನ್ನು ವಿವರಿಸುವಾಗ ‘XX’ ಕಿಸಸ್ ಮತ್ತು ‘YY’ ಲೈಂಗಿಕತೆಯ ಸಂಕೇತವೆಂದು ಗ್ಯಾಸ್ಪರೋವಾ ಹೇಳುತ್ತಾರೆ. ‘???” ಈ ಪ್ರಶ್ನಾರ್ಥಕ ಚಿಹ್ನೆಗಳು ಲೈಂಗಿಕ ಕ್ರಿಯೆಗಳಿಗೆ ಅವಳು ಯಾವಾಗ ಸಿದ್ಧಳಾಗುತ್ತಾಳೆ ಎಂದು ಕೇಳುವ ಪ್ರಶ್ನೆಯನ್ನು ಸೂಕ್ಷ್ಮವಾಗಿ ಕೇಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶರಾರಾ ಶರಾರಾ; ‘ಹೃದಯವೇ ಕಳೆದುಹೋಗುತ್ತಿದೆ; ಕರಗುತ್ತಿರುವ ನೆಟ್ಟಿಗರು
ಪ್ರಕರಣದ ಸಮಗ್ರ ಪರಿಶೀಲನೆ ಮತ್ತು ಪ್ರಸ್ತುತಪಡಿಸಿದ ಸಾಕ್ಷ್ಯವನ್ನು ಪರಿಶೀಲಿಸಿದ ನಂತರ, ‘ಇಮೇಲ್ ಲೈಂಗಿಕವಾಗಿ ಏನನ್ನೂ ಸೂಚಿಸುತ್ತಿಲ್ಲ ಎಂದು ನ್ಯಾಯಮಂಡಳಿ ಕಂಡುಹಿಡಿದಿದೆ. ಲಂಡನ್ ಸೆಂಟ್ರಲ್ ಕೋರ್ಟ್ನಲ್ಲಿನ ಉದ್ಯೋಗ ನ್ಯಾಯಮಂಡಳಿಯು ಘಟನೆಗಳ ಬಗ್ಗೆ ಗ್ಯಾಸ್ಪರೋವಾ ಅವರ ಗ್ರಹಿಕೆ ತಪ್ಪಾಗಿದೆ ಎಂದು ತೀರ್ಮಾನಿಸಿತು. ಉದ್ಯೋಗ ನ್ಯಾಯಾಧೀಶ ಎಮ್ಮಾ ಬರ್ನ್ಸ್, ಗ್ಯಾಸ್ಪರೋವಾ ತನ್ನ ಆಧಾರರಹಿತ ಆರೋಪಗಳನ್ನು ಯಾವುದೇ ಪುರಾವೆಗಳಿಲ್ಲದೆ ಸ್ಥಿರವಾದ ಮಾದರಿಯನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ಆಕೆಯ ಆರೋಪಗಳನ್ನು ರದ್ದುಗೊಳಿಸುವ ಜೊತೆಗೆ, ನ್ಯಾಯಾಲಯವು ಗ್ಯಾಸ್ಪರೋವಾ ಅವರಿಗೆ 5 ಸಾವಿರ ಪೌಂಡ್ ಗಣನೀಯ ಮೊತ್ತವನ್ನು ಇ.ಎಸ್.ಎಸ್.ಡಿ.ಒ.ಸಿ.ಎಸ್ ಕಂಪೆನಿಗೆ ಪಾವತಿಸಬೇಕೆಂದು ಆದೇಶ ನೀಡಿತು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:09 pm, Sat, 20 May 23