Viral: ಕನಸನ್ನು ಬೆನ್ನಟ್ಟಲು ಲಿಂಕ್ಡ್​ಇನ್​ನಲ್ಲಿ ಕೆಲಸ ಬಿಟ್ಟ ಯುವತಿಯ ಯಶೋಗಾಥೆ

Dream : ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಕಾರ್ಪೋರೇಟ್​ ಕೆಲಸವನ್ನು ಬಿಟ್ಟು ಮನಸಾ ಜಗತ್ತನ್ನು ಸುತ್ತಿದೆ. ನಾನೀಗ 5.3 ಲಕ್ಷ ಉತ್ಸಾಹಿ ಪ್ರಯಾಣಿಕರ ಸಮುದಾಯವನ್ನು ಹೊಂದಿದ್ದೇನೆ. ನಾನೀಗ ಪೂರ್ಣಾವಧಿಯ ಕಂಟೆಂಟ್​ ಕ್ರಿಯೇಟರ್!

Viral: ಕನಸನ್ನು ಬೆನ್ನಟ್ಟಲು ಲಿಂಕ್ಡ್​ಇನ್​ನಲ್ಲಿ ಕೆಲಸ ಬಿಟ್ಟ ಯುವತಿಯ ಯಶೋಗಾಥೆ
ಆಕಾಂಕ್ಷಾ ಮೊಂಗಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 19, 2023 | 1:19 PM

Viral: ಜೀವಿಸುವುದಕ್ಕೊಂದು ಕೆಲಸವನ್ನು ಹೇಗೋ ಹುಡುಕೊಳ್ಳಬಹುದು. ಆದರೆ ಬದುಕುವುದಕ್ಕಾಗಿ ಕನಸು ಬಹಳ ಮುಖ್ಯ. ಹಾಗೆಂದು ಕನಸು ಕಂಡವರೆಲ್ಲರೂ ನನಸನ್ನಾಗಿಸಿಕೊಳ್ಳುತ್ತಾರೆ ಎಂದು ಹೇಳಲಾಗದು. ಕೆಲವೇ ಕೆಲವರಿಗೆ ಇದು ಸಾಧ್ಯವಾಗುತ್ತದೆ. ಇದೀಗ ವೈರಲ್ ಆಗಿರುವ ಈ ಲಿಂಕ್ಡ್​ಇನ್​  ಪೋಸ್ಟ್ ಗಮನಿಸಿ. ದೆಹಲಿ ಮೂಲದ ಯುವತಿಯೊಬ್ಬಳು ತನ್ನ ಕನಸಿಗಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ತೊರೆದಳು. ಮುಂದೇನಾಯಿತೆಂದು ಓದಿ.

ಪ್ರತಿಯೊಬ್ಬರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಉತ್ಸಾಹದಿಂದ ಕೆಲಸ ಮಾಡಲು ಬಯಸುತ್ತಾರೆ. ಆ ಪ್ರಕಾರ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ತಮ್ಮ ಆಯ್ಕೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ಅವರಿಗಿರುತ್ತದೆ. ಆಕಾಂಕ್ಷಾ ಮೊಂಗಾ ಎಂಬ ಕಂಟೆಂಟ್​ ಕ್ರಿಯೇಟರ್ ಲಿಂಕ್ಡ್​ಇನ್​ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ  2022ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ‘ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ಬಿಟ್ಟಿದ್ದೆ. ನನ್ನ ಹಂಬಲವನ್ನು ಆಗುಮಾಡಿಕೊಳ್ಳುವುದಕ್ಕೋಸ್ಕರ ಜಗತ್ತನ್ನು ಪೂರ್ಣ ಮನಸ್ಸು ಕೊಟ್ಟು ಪ್ರಯಾಣಿಸಬೇಕೆಂದು ನಿರ್ಧರಿಸಿದ್ದೆ. ಅದು ಸಾಧ್ಯವಾಯಿತು’ ಎಂದಿದ್ದಾರೆ.

ಆರುಜನರ ತಂಡವನ್ನು ಕಟ್ಟಿಕೊಂಡು ಈತನಕ 12 ದೇಶಗಳಲ್ಲಿ ಈಕೆ ಪ್ರಯಾಣಿಸಿದ್ದಾರೆ. 300ಕ್ಕೂ ಹೆಚ್ಚು ವಿಡಿಯೋ ಕಂಟೆಂಟ್​ ಸೃಷ್ಟಿಸಿದ್ದಾರೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇವರು ಸಾಮಾಜಿಕ ಜಾಲತಾಣದಲ್ಲಿ 2,50,000 ಫಾಲೋವರ್​ಗಳನ್ನು ಹೊಂದಿದ್ದಾರೆ. ಈಗ ವೈರಲ್ ಆಗಿರುವ ಈ ಪೋಸ್ಟ್​ ಅನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ನೆಟ್ಟಿಗರು ಈಕೆಯ ಪೋಸ್ಟ್​ನಿಂದ ಪ್ರಭಾವಿತರಾಗಿದ್ದಾರೆ.

ನಿಮಗೆ ಖುಷಿ ಕೊಡುವುದನ್ನೇ ನೀವು ವೃತ್ತಿಯಾಗಿಸಿಕೊಳ್ಳಿ. ಆಗ ನಿಮ್ಮ ಜೀವನ ಇನ್ನೂ ಎತ್ತರಕ್ಕೇರುತ್ತದೆ ಎಂದು ಅಭಿನಂದಿಸಿದ್ದಾರೆ ಅನೇಕರು. ನೀವು ನಿಮ್ಮ ಪ್ರಯಾಣದ ವೆಚ್ಚವನ್ನು ಹೇಗೆ ನಿರ್ವಹಿಸಿದಿರಿ ಎಂದು ಕೇಳಿದ್ದಾರೆ ಕೆಲವರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:19 pm, Fri, 19 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ