Viral Video: ಸ್ಕೂಟರ್​ ಸವಾರಿಯೊಂದಿಗೆ ಸ್ನಾನ ಮಾಡುತ್ತಿರುವ ಜೋಡಿ; ಪೊಲೀಸ್ ಕ್ರಮ

Maharashtra : ಹೋಗ್ರೋ ಹೋಗ್ರಿ ಎಲ್ಲಾ ರೀಲ್ಸ್​ಗಾಗಿ ಇಂಥ ಹುಚ್ಚಾಟ ಮಾಡ್ತೀರಿ. ಇದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಹೋಗಿ ಮಾವನ ಮನೆಯಲ್ಲಿ ಆತಿಥ್ಯ ನಿಮಗಾಗಿ ಕಾಯ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ಸ್ಕೂಟರ್​ ಸವಾರಿಯೊಂದಿಗೆ ಸ್ನಾನ ಮಾಡುತ್ತಿರುವ ಜೋಡಿ; ಪೊಲೀಸ್ ಕ್ರಮ
ಉಲ್ಲಾನಗರದ ರಸ್ತೆಯಲ್ಲಿ ಈ ಜೋಡಿ ಸ್ಕೂಟರ್​ ಮೇಲೆ ಸ್ನಾನ ಮಾಡುತ್ತ ಸಾಗಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 19, 2023 | 11:48 AM

Scooter: ಈಗೀಗ ಅಚ್ಚರಿ ಪಡಲೇಬೇಕಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಸಹಜವೆನ್ನಿಸುವ ಏನಾದರೂ ಚಟುವಟಿಕೆ ನಡೆಯುತ್ತಿದೆ ಎಂದರೆ ಅದು ರೀಲ್ಸ್​ಗಾಗಿ. ಸಾಮಾಜಿಕ ಜಾಲತಾಣದ ಮೂಲಕ ಅಸ್ತಿತ್ವ ಕಂಡುಕೊಳ್ಳಲು ನಡೆಸುವ ಕಸರತ್ತೇ ಎನ್ನುವುದು ಈಗೀಗ ಎಲ್ಲರಿಗೂ ಅರ್ಥವಾಗತೊಡಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಹಾರಾಷ್ಟ್ರದ ರಸ್ತೆಯಲ್ಲಿ ಸ್ಕೂಟರ್​ಮೇಲೆ ಚಲಿಸುತ್ತಿರುವ ಈ ಜೋಡಿ ಸ್ನಾನ ಮಾಡುತ್ತ ಸಾಗಿದೆ. ಮುಂದೇನಾಯಿತು?

ಮುಂದೇನಾಗುತ್ತದೆ? ದಾರಿಹೋಕರು ಈ ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಥಾಣೆಯ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದಾರೆ. ಉಲ್ಲಾಸನಗರದ ಜನನಿಬಿಡ ರಸ್ತೆಯಲ್ಲಿ ಈ ಯುವಜೋಡಿ ಹೀಗೆ ಮಾಡಿದ್ದು ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ : Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

ಸ್ಕೂಟರ್​ ಹಿಂದೆ ಬಕೆಟ್​, ಮಗ್​ ಹಿಡಿದುಕೊಂಡು ಕುಳಿತ ಯುವತಿ ತಾನೂ ನೀರು ಸುರಿದುಕೊಳ್ಳುತ್ತಾಳೆ. ಗಾಡಿ ಓಡಿಸುವ ಯುವಕನ ಮೇಲೂ ನೀರು ಸುರಿಯುತ್ತಾಳೆ. ನೋಡಲೇನೋ ಅತ್ಯಂತ ಉಲ್ಲಾಸದಾಯಕವಾಗಿದೆ ಈ ಬೇಸಿಗೆಯಲ್ಲಿ. ಆದರೆ ಏನೇ ಮೋಜು ಮಸ್ತಿ ಮಾಡುವ ಮೊದಲು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿಯೇ ಯೋಚಿಸಬೇಕಲ್ಲವೆ?

ಇದನ್ನೂ ಓದಿ : Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

ಮೇ 15ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 4,500 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಣ ಎಂದರೆ ಸರ್ಟಿಫಿಕೇಟ್​ ಪಡೆಯುವುದಲ್ಲ, ಸಾಮಾನ್ಯ ತಿಳಿವಳಿಕೆ ಎಂದಿದ್ದಾರೆ ಒಬ್ಬರು. ಜನ ಪ್ರಸಿದ್ಧಿಗಾಗಿ ಏನೂ ಮಾಡುತ್ತಾರೆ ಹೀಗೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಹಲವರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ