Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

Education : ಮದುವೆಯಂತೆ ಶಿಕ್ಷಣವೂ ನನಗೆ ಮುಖ್ಯ ಎಂದ ಕೃಷ್ಣಾ ರಜಪೂತ. ಅಭಿನಂದನೆ! ದೇಶದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ ಎಂದು ಹಲವರು. ಇದು ಬ್ಯಾಡ್​ ಪೇರೆಂಟಿಂಗ್​ ಎಂದು ಕೆಲವರು. ನೀವೇನಂತೀರಿ?

Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು
ಮದುಮಗಳು ಕೃಷ್ಣ ರಜಪೂತ್
Follow us
ಶ್ರೀದೇವಿ ಕಳಸದ
|

Updated on:May 18, 2023 | 4:32 PM

Bride: ಮದುವೆ ಕೂಡ ಜೀವನದ ಒಂದು ಭಾಗ ಎಂಬ ಅರಿವು ಈಗಿನ ಹೆಣ್ಣುಮಕ್ಕಳಿಗೆ ಬಹಳ ಬೇಗ ಅರಿವಾಗಿದೆ. ಹಾಗಾಗಿಯೇ ಮದುವೆಗಾಗಿ ಶಿಕ್ಷಣವನ್ನು ಮೊಟಕುಗೊಳಿಸುವುದನ್ನು, ಕೈಯಲ್ಲಿದ್ದ ಕೆಲಸವನ್ನು ಬಿಡುವುದನ್ನು ಅವರು ಒಪ್ಪಲಾರರು. ಸಮನಾಗಿ ಓದಬೇಕು ಸಮನಾಗಿ ದುಡಿಯಬೇಕು, ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಚೆಂದದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯ ಅವರುಗಳದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವಧುವೊಬ್ಬಳು ತನ್ನ ಮದುವೆಯ ನಂತರ ನೇರ ಪರೀಕ್ಷಾ ಕೊಠಡಿಗೆ ಧಾವಿಸಿದ್ದಾಳೆಂದರೆ… ಶಿಕ್ಷಣ ಎಷ್ಟು ಮಹತ್ವದ್ದು ಎಂದು ಯೋಚಿಸಿ.

ತನ್ನ ಮದುವೆ ನೆರವೇರುವುದನ್ನೇ ಕಾಯುತ್ತಿದ್ದ ನವವಧು ಅಲಂಕಾರ, ಉಡುಪಿನೊಂದಿಗೆ ನೇರ ಕಾಲೇಜಿನ ಪರೀಕ್ಷಾ ಕೊಠಡಿಗೇ ಬಂದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಕ್ಯಾ ಬಾತ್​ ಹೈ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಕೆ ಉತ್ತರ ಪ್ರದೇಶ ನಿವಾಸಿ ಕೃಷ್ಣ ರಜಪೂತ್, ಮೇ. 16ರಂದು  ಬಿಎ ಅಂತಿಮ ವರ್ಷದ ಸಮಾಜ ಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದಾಳೆ.

‘ನನ್ನ ಮದುವೆಯಂತೆ ಪರೀಕ್ಷೆಯೂ ನನಗೆ ಮುಖ್ಯ. ಹಾಗಾಗಿ ಗಂಡನಮನೆಗೆ ಹೋಗುವ ಶಾಸ್ತ್ರ ಪರೀಕ್ಷೆ ಮುಗಿದ ನಂತರ ನಡೆಯಲಿದೆ’ ಎಂದು ಎಎನ್​ಐ ಸುದ್ದಿ ಸಂಸ್ಥೆಗೆ ವಧು ತಿಳಿಸಿದ್ದಾಳೆ. ಈತನಕ ಈ ವಿಡಿಯೋ ಅನ್ನು ಸುಮಾರು 62,000 ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

ಅಭಿನಂದನೆ ವಧುವಿಗೆ. ಇಂದಿನ ಮಹಿಳೆ ತನ್ನ ಸಂಗಾತಿಯಾಗುವವನೊಂದಿಗೆ ಚರ್ಚಿಸಿ ಮದುವೆಯ ದಿನವನ್ನು ನಿಗದಿಗೊಳಿಸಬಹುದು. ಮದುವೆ ನಂತರವೂ ಆರ್ಥಿಕವಾಗಿ ಆಕೆ ಸ್ವತಂತ್ರಳಾಗಬಹುದು. ಆದರೆ ಇದೆಲ್ಲವೂ ಸಾಧ್ಯವಾಗುವುದು ಸಂಪ್ರದಾಯಗಳನ್ನು ಮೀರಿದಾಗ ಮಾತ್ರ! ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

ಶಿಕ್ಷಣ ಯಾವತ್ತೂ ಜೀವನದ ಆದ್ಯತೆಯಾಗಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕೊನೇಪಕ್ಷ ಮದುವೆ ಉಡುಪನ್ನು ತೆಗೆದಿಟ್ಟು ಬರಬಾರದೆ ಎಂದು ಮಗದೊಬ್ಬರು ಸಲಹೆ ನೀಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಇನ್ನೊಬ್ಬರು, ಇದು ಬ್ಯಾಡ್ ಪೇರೆಂಟಿಂಗ್​ ಎಂದಿದ್ದಾರೆ. ಇದೆಲ್ಲ ನಾಟಕವಷ್ಟೇ ಎಂದು ಮತ್ತೊಬ್ಬರು ಹೇಳಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಮಾಧ್ಯಮದವರು! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಒಬ್ಬರು. ನಮ್ಮ ರಾಷ್ಟ್ರದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Thu, 18 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ