ಕೇವಲ 270 ರೂ.ಗೆ ಇಟಲಿಯಲ್ಲಿ 3 ಮನೆಗಳನ್ನು ಖರೀದಿಸಿದ ಮಹಿಳೆ; ಆದರೆ ಇಲ್ಲಿದೆ ಒಂದು ಟ್ವಿಸ್ಟ್!

ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರು ಇಟಲಿಯ ಸಿಸಿಲಿಯಲ್ಲಿ ಮೂರು ಹಳೆಯ ಮನೆಗಳನ್ನು ಕೇವಲ $3.30 ಕ್ಕೆ (ಸರಿಸುಮಾರು 270 ರೂ) ಖರೀದಿಸಿದರು.

ಕೇವಲ 270 ರೂ.ಗೆ ಇಟಲಿಯಲ್ಲಿ 3 ಮನೆಗಳನ್ನು ಖರೀದಿಸಿದ ಮಹಿಳೆ; ಆದರೆ ಇಲ್ಲಿದೆ ಒಂದು ಟ್ವಿಸ್ಟ್!
ರುಬಿಯಾ ದನಿಎಲ್ಸ್ Image Credit source: India Times
Follow us
ನಯನಾ ಎಸ್​ಪಿ
|

Updated on: May 19, 2023 | 11:23 AM

ಕ್ಯಾಲಿಫೋರ್ನಿಯಾದ (Californian) ಮಹಿಳೆಯೊಬ್ಬರು ಇಟಲಿಯ ಸಿಸಿಲಿಯಲ್ಲಿ (Italy, Sicily) ಮೂರು ಹಳೆಯ ಮನೆಗಳನ್ನು ಕೇವಲ $3.30 ಕ್ಕೆ (ಸರಿಸುಮಾರು 270 ರೂ) ಖರೀದಿಸಿದರು. 49 ವರ್ಷದ ಬ್ರೆಜಿಲಿಯನ್ ವಲಸಿಗರಾದ ರೂಬಿಯಾ ಡೇನಿಯಲ್ಸ್ (Rubia Daniels)ಅವರು 2019 ರಲ್ಲಿ ಈ ಮನೆಗಳನ್ನು ಖರೀದಿಸಿದರು, ಈಗ ಇದನ್ನೂ ರೆನೊವತೆ ಮಾಡುವುದರಲ್ಲಿ ತೊಡಗಿದ್ದಾರೆ. ಡೇನಿಯಲ್ಸ್ ಸೌರ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ, ಇವರು ಇಟಲಿಯು ದೇಶದಲ್ಲಿನ ದೂರದ ಪಟ್ಟಣಗಳನ್ನು ಮರುಬಳಕೆ ಮಾಡುವ ಪ್ರಯತ್ನದಲ್ಲಿ ಹಳೆಯ ಮನೆಗಳನ್ನು ಅಗ್ಗದ ಬೆಳೆಗೆ ಮಾರುತ್ತಿರುವುದರ ಬಗ್ಗೆ ತಿಳಿದುಕೊಂಡರು .

ಸುದ್ದಿಯನ್ನು ಕೇಳಿದ ನಂತರ, ಡೇನಿಯಲ್ಸ್ ಇಂತಹ ಮನೆಗಳ ಬಗ್ಗೆ ಸರಿಯಾದ ಸಂಶೋಧನೆಗಳನ್ನು ಮಾಡಿ ವಿಷಯ ತಿಳಿದು ಮನೆ ಖರೀದಿಸಲು ನಿರ್ಧರಿಸಿದರು ಎಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ.

ಡೇನಿಯಲ್ಸ್ ಇನ್ಸೈಡರ್ಗೆ, “ನಾನು ತುಂಬಾ ಆಶ್ಚರ್ಯಚಕಿತಳಾದೆ. ಇದು ನಿಜವೆಂದು ಖಚಿತಪಡಿಸಿಕೊಳ್ಳಲು ನಾನು ಅಲ್ಲಿಗೆ ಹೋಗಿ ನನ್ನ ಕಣ್ಣಾರೆ ಪರಿಶೀಲಿಸಬೇಕಾಗಿತ್ತು. ನಾನು ನನ್ನ ಸಂಶೋಧನೆಯನ್ನು ಮಾಡಿದ ನಂತರ ಮೂರು ದಿನಗಳಲ್ಲಿ ನನ್ನ ವಿಮಾನ ಟಿಕೆಟ್, ಬಾಡಿಗೆ ಕಾರು, ಹೋಟೆಲ್ ಬುಕ್ ಮಾಡಿ ಮನೆಗಳನ್ನು ಪರಿಶೀಲಿಸಲು ಇಟಲಿಗೆ ಹೊರಟೆ . ಅದು ಸುಮಾರು 10,000 ನಿವಾಸಿಗಳ ಸಣ್ಣ ಪಟ್ಟಣವಾಗಿತ್ತು. ಇದು ಇಟಲಿಯ ಮುಖ್ಯ ಭೂಭಾಗದ ದ್ವೀಪವಾದ ಸಿಸಿಲಿಯ ಮಧ್ಯಭಾಗದಲ್ಲಿದೆ.

ಇಟಲಿಯ ಹಲವು ಪಟ್ಟಣಗಳು ​​ಇದೇ ಬೆಲೆಗೆ ಮನೆಗಳನ್ನು ಮಾರಾಟ ಮಾಡುತ್ತಿವೆ ಕೋವಿಡ್ ಮೊದಲು, ಇಟಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಇಟಲಿಯ ಖಾಲಿ ಪಟ್ಟಣದ ಮನೆಗಳನ್ನು ಊಹಿಸಲಾಗದಷ್ಟು ಕಡಿಮೆ ಬೆಲೆಗೆ ನೀಡುತ್ತಿದೆ. ಉದಾಹರಣೆಗೆ, 2019 ರಲ್ಲಿ, ಸಿಸಿಲಿಯನ್ ಪಟ್ಟಣವಾದ ಸಾಂಬುಕಾ ಡಿ ಸಿಸಿಲಿಯಾ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ $1 (ರೂ.82.79) ರಷ್ಟು ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡುತ್ತಿದೆ.

ಈ ಪಟ್ಟಣಗಳಲ್ಲಿ ಅದೆಷ್ಟೇ ಕಡಿಮೆ ಬೆಳೆಗೆ ಮನೆಗಳನ್ನು ಬಿಟ್ಟುಕೊಡುತ್ತಿದ್ದರೂ, ಈ ಶಿಥಿಲವಾದ ಮನೆಗಳನ್ನು ನವೀಕರಿಸಲು $ 24,000 (ಸುಮಾರು 20 ಲಕ್ಷ ರೂ.) ಯಿಂದ $ 90,000 (ಸುಮಾರು ರೂ. 74 ಲಕ್ಷ) ವರೆಗೆ ಕರ್ಚಾಗುವುದರ ಕುರಿತು ಯಾರು ಮಾತನಾಡುವುದಿಲ್ಲ.

ಇದನ್ನೂ ಓದಿ: ಮಗಳೇ, ಕರೆಕ್ಟ್ ಆಗಿ ಹೇಳು ಏನು ಮಾಡಿದೀ ಅಂತ; ಗಣೇಶ ಮಗಳ ಪಾಕಶಾಲೆ

ಡೇನಿಯಲ್ಸ್ ಅವರು ದೇಶದಲ್ಲಿ ಖರೀದಿಸಿದ ಮೂರು ಆಸ್ತಿಗಳಿಗೆ ದೊಡ್ಡ ಯೋಜನೆಗಳನ್ನು ಹೊಂದಿದ್ದಾರೆ. ಒಂದು ಕಟ್ಟಡವನ್ನು ಅವರು ಭೇಟಿ ನೀಡಿದಾಗ ವಾಸಿಸಲು ಮನೆಯಾಗಿ ಮಾರ್ಪಡಿಸುತ್ತಿದ್ದರೆ, ಇನ್ನೊಂದು ಕಟ್ಟಡವನ್ನು ಡೇನಿಯಲ್ಸ್ ಪಟ್ಟಣದ ಕಲ್ಯಾಣಕ್ಕಾಗಿ ಸೀಮಿತವಾಗಿರಿಸಲು ನಿರ್ಧರಿಸಿದ್ದಾರೆ. ಇನ್ನೊಂದು ಕಟ್ಟಡವನ್ನು ಆರ್ಟ್ ಗ್ಯಾಲರಿಯಾಗಿ ಪರಿವರ್ತಿಸಲು ಇವರು ಯೋಜಿಸುತ್ತಿದ್ದಾರೆ.

ಜುಲೈ 2019 ರಲ್ಲಿ ಆಸ್ತಿಗಳನ್ನು ಖರೀದಿಸಿದ ನಂತರ, ಡೇನಿಯಲ್ಸ್ ವರ್ಷದ ಉತ್ತರಾರ್ಧದಲ್ಲಿ ಅವುಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಸದ್ಯಕ್ಕೆ, ಎರಡು ಕಟ್ಟಡಗಳ ಹೊರಭಾಗದ ಸಂಪೂರ್ಣ ಕೆಲಸ ಪೂರ್ಣಗೊಂಡಿದೆ, ಆದರೆ ಕ್ಷೇಮ ಕೇಂದ್ರದ ಮರುಸ್ಥಾಪನೆಯು ಕೋವಿಡ್ ನಿಂದಾಗಿ ನಿಧಾನವಾಗಿದೆ ಎಂದು ತಿಳಿಸಿದ್ದಾರೆ.

ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್