Viral News: ಡಾಲಿ ಜೈನ್, ಸೀರೆ ಉಡಿಸಲು 2 ಲಕ್ಷ ರೂಪಾಯಿ ಚಾರ್ಜ್ ಮಾಡುವ ಸ್ಟೈಲಿಸ್ಟ್!
ಇವರು ಆಲಿಯಾ ಭಟ್ (Alia Bhatt) ನಿಂದ ಕತ್ರಿನಾ ಕೈಫ್ (Katrina Kaif) ಅವರ ವರೆಗೂ ಅದೆಷ್ಟು ಸೆಲೆಬ್ರಿಟಿ ಮದುವೆಗಳಲ್ಲಿ ವಧುವಿಗೆ ಸೀರೆ ಉಡಿಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್ (Dolly Jain) ಈಗ ಸೆಲೆಬ್ರಿಟಿ ಸೀರೆ ಉಡಿಸುವ ಕಲಾವಿದೆಯಾಗಿದ್ದಾರೆ.
ನಿಮ್ಮಗೆ ಸೀರೆ ಉಡಿಸಲು (Saree Draping) ನೀವು ಯಾರಿಗಾದರೂ 2 ಲಕ್ಷ ರೂಪಾಯಿ ನೀಡಲು ಸಿದ್ಧರಿದ್ದೀರಾ? ಈ ಮಹಿಳೆ ಸೀರೆ ಉಡಿಸಲು 35,000 ರಿಂದ 2 ಲಕ್ಷ ರೂ. ಪಡೆಯುತ್ತಿದ್ದಾರೆ. ಇವರು ಆಲಿಯಾ ಭಟ್ (Alia Bhatt) ನಿಂದ ಕತ್ರಿನಾ ಕೈಫ್ (Katrina Kaif) ಅವರ ವರೆಗೂ ಅದೆಷ್ಟು ಸೆಲೆಬ್ರಿಟಿ ಮದುವೆಗಳಲ್ಲಿ ವಧುವಿಗೆ ಸೀರೆ ಉಡಿಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್ (Dolly Jain) ಈಗ ಸೆಲೆಬ್ರಿಟಿ ಸೀರೆ ಉಡಿಸುವ ಕಲಾವಿದೆಯಾಗಿದ್ದಾರೆ. ಜೈನ್ ಮೆಟ್ ಗಾಲಾಗಾಗಿ ನತಾಶಾ ಪೂನಾವಾಲಾ ಅವರನ್ನು ಕೂಡ ಅಲಂಕರಿಸಿದ್ದಾರೆ.
ಸೀರೆಯನ್ನು ದ್ವೇಷಿಸುತ್ತಿದ್ದ ಜೈನ್ ಮದುವೆಯ ಬಳಿಕ ಅಲ್ಲಿ ಪ್ರತಿದಿನ ಸೀರೆಯನ್ನೇ ಧರಿಸಬೇಕಾಗಿತ್ತು. ಪ್ರತಿದಿನ ಬೆಳಗ್ಗೆ ಸೀರೆ ಉಡಲು ಅವರಿಗೆ ಕನಿಷ್ಠ 45 ನಿಮಿಷ ಬೇಕಾಗುತ್ತಿತ್ತು. ಜೈನ್ ತಮ್ಮ ಅತ್ತೆಗೆ ಕುರ್ತಾಗಳನ್ನು ಧರಿಸಲು ಅನುಮತಿಸುವಂತೆ ಮನವಿ ಮಾಡಿದ್ದರು. ಆದರೆ ಅವರ ಅತ್ತೆ ಒಪ್ಪಿರಲಿಲ್ಲ. ಹೀಗೆ ಪ್ರಾರಂಭವಾದ ಇವರ ಪಯಣ ಈಗ ಅವರು ಸೀರೆಯನ್ನು ಪ್ರೀತಿಸುವುದರ ಜೊತೆಗೆ ಅದರಿಂದ ತಮ್ಮ ವೃತ್ತಿಯನ್ನು ಕಟ್ಟಿಕೊಂಡಿದ್ದಾರೆ.
View this post on Instagram
ಈ ಸಮಯದಲ್ಲಿ ಅವರು ಎಲ್ಲಾ ವಯೋಮಾನದ ಮಹಿಳೆಯರು ಸೀರೆ ಉಡುವುದನ್ನು ನಿಲ್ಲಿಸಿ ಗೌನ್‌ಗಳನ್ನು ಆರಿಸಿಕೊಳ್ಳುವುದನ್ನು ಅವರು ಗಮನಿಸಿದರು. ಇದನ್ನು ನೋಡಿ ಜೈನ ಜಾಗತಿಕ ಮಟ್ಟದಲ್ಲಿ ಸೀರೆಗಳ ಛಾಪು ಮೂಡಿಸಲು ನಿರ್ಧರಿಸಿ ಅದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡರು. ಸೀರೆ ಉಡುವ 325 ವಿಧಾನಗಳನ್ನು ಇವರು ತಿಳಿದಿದ್ದಾರೆ.
“ಸೀರೆಯು ನೀವು ಹಲವು ವಿಧಗಳಲ್ಲಿ ಪ್ರಯೋಗ ಮಾಡಬಹುದಾದ ಏಕೈಕ ಉಡುಪಾಗಿದೆ. ನೀವು ಅದನ್ನು ಡೆನಿಮ್‌ನೊಂದಿಗೆ, ಸ್ಕರ್ಟ್‌ನೊಂದಿಗೆ ಅಥವಾ ಅಂಡರ್‌ಸ್ಕರ್ಟ್‌ನೊಂದಿಗೆ ಧರಿಸಬಹುದು, ಅದರಲ್ಲಿ ಹಲವು ವ್ಯತ್ಯಾಸಗಳಿವೆ. ನಿಮ್ಮ ಅಜ್ಜಿ ಅಥವಾ ನಿಮ್ಮ ತಾಯಿಯಿಂದ ಅವುಗಳನ್ನು ನೀವು ಪಡೆಯುವ ಸೌಂದರ್ಯವೂ ಇದೆ. ನೀವು ಮಾರುಕಟ್ಟೆಯಿಂದ ಅಥವಾ ಡಿಸೈನರ್‌ನಿಂದ ಸೀರೆಯನ್ನು ಖರೀದಿಸುತ್ತೀರಿ, ಆದರೆ ನೀವು ನಿಮ್ಮ ಮನೆಯವರಿಂದ ಪಡೆಯುವ ಸೀರೆ ಯಾವಾಗಲು ವಿಶೇಷ ಮತ್ತು ವಿಭಿನ್ನವಾಗುತ್ತವೆ” ಎಂದು ಜೈನ್ ಫಸ್ಟ್‌ಪೋಸ್ಟ್‌ಗೆ ತಿಳಿಸಿದರು.
View this post on Instagram
ತಾನು ಸ್ಟೈಲ್ ಮಾಡುವ ಇತರ ವಧುಗಳು ತಮಗೆ ಯಾವ ರೀತಿಯ ಸ್ಟೈಲಿಂಗ್ ಬೇಕು ಎಂಬ ನಿರ್ಧಿಷ್ಟತೆ ಹೊಂದಿಲ್ಲ ಎಂದು ಜೈನ ಹೇಳಿದ್ದಾರೆ. “ಸೆಲೆಬ್ರಿಟಿ ವಧುಗಳನ್ನು ಉಲ್ಲೇಖಿಸುತ್ತಾ, ಉದಾಹರಣೆಗೆ, ಕತ್ರಿನಾ ಅವರ ಮದುವೆಯನ್ನು ನೋಡಿ, ಈ ಇತರ ವಧುಗಳು ಸಬ್ಯಾ ಲೆಹೆಂಗಾವನ್ನು ಖರೀದಿಸುತ್ತಾರೆ ಮತ್ತು ನಾನು ಕತ್ರಿನಾಳಂತೆ ಕಾಣಬೇಕೆಂದು ಎಂದು ನನಗೆ ಹೇಳುತ್ತಾರೆ. ಈಗ ಅದು ಸಮಸ್ಯೆಯಾಗಿದೆ, ನೀವು ಸೀರೆ ಉಡುವಾಗ ಯಾರನ್ನು ಅನುಕರಿಸಬೇಡಿ, ಏಕೆಂದರೆ ನೀವು ನಿಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದೀರಿ ಮತ್ತು ಅದು ಕೊನೆಯಲ್ಲಿ ಕಂಡುಬರುತ್ತದೆ, ”ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಕೇವಲ 270 ರೂ.ಗೆ ಇಟಲಿಯಲ್ಲಿ 3 ಮನೆಗಳನ್ನು ಖರೀದಿಸಿದ ಮಹಿಳೆ; ಆದರೆ ಇಲ್ಲಿದೆ ಒಂದು ಟ್ವಿಸ್ಟ್!
ಜೈನ್ ಅವರು ಫೋಟೋಶೂಟ್‌ಗಳಿಗೆ ಸೀರೆ ಉಡಿಸಲು ಆದ್ಯತೆ ನೀಡುತ್ತಾರೆ ಏಕೆಂದರೆ ಅಂತಹ ಸಮಯದಲ್ಲಿ ಅವರು ಪ್ರಯೋಗ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. “ವಿವಿಧ ರೀತಿಯಲ್ಲಿ ಸೀರೆ ಉಡುವುದರಿಂದ ನೀವು ಅದನ್ನು ಆನಂದಿಸಬಹುದು ಮತ್ತು ಅದರಿಂದ ಮ್ಯಾಜಿಕ್ ಅನ್ನು ಕೂಡ ರಚಿಸಬಹುದು, ಏಕೆಂದರೆ ಫೋಟೋ ಶೂಟ್ ಸಮಯದಲ್ಲಿ ನನಗೆ ಹೀಗೆ ಬೇಕು ಹಾಗೆ ಬೇಕು ಎಂದು ನನ್ನನ್ನು ನಿರ್ಬಂಧಿಸುವುಲ್ಲ” ಎಂದು ಜೈನ ಹೇಳಿದರು. ಜೈನ್ ಕೆಲವು ಪುರುಷರಿಗೂ ಸೀರೆ ಉಡಿಸಿದ್ದಾರೆ. ಅವರು ಅನುಭವವನ್ನು “ಇನ್ಕ್ರೆಡಿಬಲ್” ಎಂದು ವಿವರಿಸಿದರು.
Published On - 1:01 pm, Fri, 19 May 23