RBI Withdraws 2000 Rupee Notes: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸಾಲು ಸಾಲು ಮೀಮ್ಗಳು
Demonetization : ಇಂಥ ಐಡಿಯಾಗಳನ್ನು ಮೋದಿ ಅವರಿಗೆ ಯಾರು ಕೊಡುತ್ತಾರೆ, ಸ್ವತಃ ಅವರೇ ನಿರ್ಧರಿಸುತ್ತಾರಾ? ಎಂದು ಕೆಲವರು. ಮಧ್ಯಮ, ಕೆಳಮಧ್ಯಮ ವರ್ಗದ ಮನೆಗಳಲ್ಲಿ ರೂ. 2,000 ನೋಟುಗಳೇ ಇರುವುದಿಲ್ಲ ಎಂದು ಹಲವರು.
Viral: ಆರ್ಬಿಐ ರೂ. 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸುತ್ತಿರುವ ಬೆನ್ನಲ್ಲೇ ಟ್ವಿಟರ್ನಲ್ಲಿ #Demonetisation ಹ್ಯಾಷ್ ಟ್ಯಾಗ್ನಡಿ ಟ್ರೆಂಡಿಂಗ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸಾಕಷ್ಟು ಮೀಮ್ಗಳು ಸೃಷ್ಟಿಯಾಗುತ್ತಿವೆ. ನೆಟ್ಟಿಗರು ಬಲು ಉತ್ಸಾಹದಿಂದ ಈ ಮೀಮ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವು ಸ್ಯಾಂಪಲ್ ನಿಮಗಾಗಿ ಇಲ್ಲಿವೆ.
Those People who doesn’t have any Rs 2000 notes#Demonetisation #2000note pic.twitter.com/nPEQy8BO6m
ಇದನ್ನೂ ಓದಿ— ͏ ͏ ͏ ͏ ͏. oɥʍ nbbɐ (@aqquwho) May 19, 2023
ದೇಶಾದ್ಯಂತ ರೂ. 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರಿಸಿದ ಹಿನ್ನೆಲೆಯಲ್ಲಿ 2023 ಸೆ. 30 ರೊಳಗೆ ಆ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾರಾದರೂ ಈಗಾಗಲೇ ರೂ. 2,000 ನೋಟುಗಳನ್ನು ಹೊಂದಿದ್ದರೆ ಮೇ 23ರ ನಂತರ ಹತ್ತಿರದ ಬ್ಯಾಂಕ್ಗೆ ತೆರಳಿ ನೋಟು ವಿನಿಮಯ ಮಾಡಿಕೊಳ್ಳಬಹುದಾಗಿದೆ.
Everyone’s reaction after seeing #Demonetisation in trending after 6 yrs ? pic.twitter.com/kmBSv2K6vv
— Naman (@ama_joking) May 19, 2023
ಈ ಹಿನ್ನೆಲೆಯಲ್ಲಿ ಆರು ವರ್ಷದ ನಂತರ ನೋಟು ಅಮಾನ್ಯೀಕರಣವು (#Demonetisation) ಮತ್ತೆ ಟ್ರೆಂಡಿಂಗ್ ಆಗುತ್ತಿರುವುದಕ್ಕೆ ನೆಟ್ಟಿಗರಲ್ಲಿ ವಿದ್ಯುತ್ಸಂಚಾರ ಆರಂಭವಾದಂತಿದೆ. ಕೆಲವರು ರೂ. 1,000 ನೋಟಿನ ಫೋಟೋ ಹಾಕಿ ಇದನ್ನು ಮರಳಿ ತನ್ನಿ ಎಂದಿದ್ದಾರೆ. ಒಬ್ಬರು ಹರಿದ ರೂ. 2,000 ನೋಟಿನ ಫೋಟೋ ಹಾಕಿ ಆರ್.ಐ.ಪಿ ಎಂದಿದ್ಧಾರೆ. ಅಲ್ಲದೆ, ನೋಟು ಅಮಾನ್ಯೀಕರಣ ಬಂದಿತಲ್ಲ ಎಂದಿದ್ದಾರೆ.
Mere pas sirf 1798 rupay hain#Demonetisation Rs 2000 notepic.twitter.com/JVZnKAxQyM
— human (@humanbeing1857) May 19, 2023
ಇಂಥ ಐಡಿಯಾಗಳನ್ನು ಮೋದಿ ಅವರಿಗೆ ಯಾರು ಕೊಡುತ್ತಾರೆ? ಸ್ವತಃ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೋ ಏನೋ ಎಂದು ಅನೇಕರು ಕೇಳಿದ್ದಾರೆ. ರೂ. 2,000 ನೋಟು ಇಲ್ಲದವರೆಲ್ಲ ಹೀಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹಿಂದೀ ಸಿನೆಮಾದ ಹಾಡಿನ ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದ್ದಾರೆ ಇನ್ನೊಬ್ಬರು.
2000 Note RIP ?? #घोरकलजुग #Demonetisation is back pic.twitter.com/VKujpbS1uV
— अपूर्व اپوروا Apurva Bhardwaj (@grafidon) May 19, 2023
ನಾನಂತೂ ಬಡವ, ಇದೆಲ್ಲದರಿಂದ ನನಗೇನು ಲಾಭವಾಗಲಿದೆ, ನನಗಿದು ಸಂಬಂಧವಿಲ್ಲ ಎಂದಿದ್ದಾರೆ ಮತ್ತೊಬ್ಬರು. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮನೆಗಳವರ ಬಳಿ ರೂ. 2,000 ನೋಟುಗಳು ಇರುವುದಿಲ್ಲ. ನಾನಂತೂ 2020 ರಿಂದ ಈ ನೋಟುಗಳನ್ನು ನೋಡಿಯೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ಹೌದು ನಾ ಕೂಡ ಒಂದು ವರ್ಷದಿಂದ ಈ ನೋಟುಗಳನ್ನು ನೋಡಿಯೇ ಇಲ್ಲ ಎಂದಿದ್ದಾರೆ.
ಈ ವಿಷಯವಾಗಿ ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:50 pm, Sat, 20 May 23