AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಜಲೀಕರಣಗೊಂಡ ಕೈಟ್​ ಹಕ್ಕಿಗಳ ಜೋಡಿ ಮೋದಿ ಕಚೇರಿಯ ಆವರಣಕ್ಕಪ್ಪಳಿಸಿದಾಗ

Wildlife SOS : : ಹಕ್ಕಿಗಳಿಗೆ ನೀರು ಕುಡಿಸಿ ನಂತರ ಅವುಗಳನ್ನು ಪಶು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯೋಪಚಾರ ಮುಗಿದು, ಹಕ್ಕಿಗಳು ಇನ್ನು ಪ್ರಯಾಣಿಸಲು ಶಕ್ತ ಎಂದಾದ ಮೇಲೆ ಅವುಗಳನ್ನು ಅಲ್ಲಿಂದ ಹಾರಿಬಿಡಲಾಯಿತು.

ನಿರ್ಜಲೀಕರಣಗೊಂಡ ಕೈಟ್​ ಹಕ್ಕಿಗಳ ಜೋಡಿ ಮೋದಿ ಕಚೇರಿಯ ಆವರಣಕ್ಕಪ್ಪಳಿಸಿದಾಗ
ಆರೈಕೆಯಲ್ಲಿರುವ ಕೈಟ್​ ಹಕ್ಕಿ
TV9 Web
| Updated By: ಶ್ರೀದೇವಿ ಕಳಸದ|

Updated on:May 20, 2023 | 1:48 PM

Share

Viral : ಈಗ ಎಲ್ಲೆಡೆ ಬಿರುಬೇಸಿಗೆ. ಮನುಷ್ಯರಿಂದ ಹಿಡಿದು ಪ್ರತೀ ಜೀವಿಯೂ ನೀರಿಗಾಗಿ ಹಪಹಪಿಸುವಂಥ ಪರಿಸ್ಥಿತಿ. ಆಕಾಶದಲ್ಲಿ ಆಳೆತ್ತರದಲ್ಲಿ ಹಾರಾಡುವ ಪಕ್ಷಿಗಳಿಗೆ ನೀರು ಎನ್ನುವುದಂತೂ ಜೀವದಾಯಿನಿ ಇದ್ದಂತೆ. ಆದರೆ ಬೇಸಿಗೆಯಲ್ಲಿ ಇದು ಸುಲಭವೆ? ಹಾಗಾಗಿ ನಿರ್ಜಲೀಕರಣಗೊಂಡ ಪಕ್ಷಿಗಳು ಅಸ್ವಸ್ಥಗೊಳ್ಳುವುದು ಸಹಜ. ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯ (PMO) ಆವರಣದಲ್ಲಿ ಎರಡು ಕೈಟ್​ ಹಕ್ಕಿಗಳು ನೆಲಕ್ಕಪ್ಪಳಿಸಿದವು. ಭದ್ರತಾ ಸಿಬ್ಬಂದಿಯು ಆ ಎರಡೂ ಹಕ್ಕಿಗಳ ಸುರಕ್ಷತೆಯ ಬಗ್ಗೆ ಕೂಡಲೇ ಕಾಳಜಿ ವಹಿಸಿತು.

ಇದನ್ನೂ ಓದಿ : ಸೇತುವೆಯ ಕೆಳಗೆ ಎಲ್ಲಿ ಮಾಯವಾಗುತ್ತಿವೆ ವಾಹನಗಳು? ಭಯಾನಕ ಎನ್ನುತ್ತಿದ್ದಾರೆ ನೆಟ್ಟಿಗರು

ಅತಿಯಾದ ಬೇಸಿಗೆಯಿಂದ ಬಳಲಿದ ಆ ಹಕ್ಕಿಗಳಿಗೆ ಹಾರಲು ಸಾಧ್ಯವಾಗಲಿಲ್ಲ. ವೈಲ್ಡ್​ಲೈಫ್​ ಎಸ್​ಒಎಸ್​ನ (Wildlife SOS) ಸದಸ್ಯರಿಬ್ಬರು ಸ್ಥಳಕ್ಕೆ ಧಾವಿಸಿದರು. ನಿರ್ಜಲೀಕರಣಗೊಂಡಿದ್ದರಿಂದ ಹಕ್ಕಿಗಳಿಗೆ ಮೊದಲು ನೀರು ಕುಡಿಸಿ ಉಪಚರಿಸಲಾಯಿತು. ನಂತರ ಎಚ್ಚರಿಕೆಯ ಕ್ರಮಗಳೊಂದಿಗೆ ಅವುಗಳನ್ನು ಪಶು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯೋಪಚಾರ ಮುಗಿದು, ಹಕ್ಕಿಗಳು ಇನ್ನು ಪ್ರಯಾಣಿಸಲು ಶಕ್ತ ಎಂದಾದ ಮೇಲೆ ಅವುಗಳನ್ನು ಅಲ್ಲಿಂದ ಹಾರಿಬಿಡಲಾಯಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video : ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ

ವೈಲ್ಡ್‌ಲೈಫ್ ಎಸ್‌ಒಎಸ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ, ‘ಬದಲಾದ ಹವಾಮಾನ ಮತ್ತು ಅತಿಯಾದ ಬಿಸಿಲಿಗೆ ವನ್ಯಜೀವಿಗಳು ಹೀಗೆ ನಿರ್ಜಲೀಕರಣಗೊಳ್ಳುತ್ತವೆ. ಆಗ ವೈದ್ಯಕೀಯ ಆರೈಕೆಯ ಅಗತ್ಯ ಇರುತ್ತದೆ.’ ಎಂದಿದ್ದಾರೆ.

ಇದನ್ನೂ ಓದಿ : Viral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!

ಎಸ್‌ಒಎಸ್‌ನ ವಿಶೇಷ ಯೋಜನೆಗಳ ಉಪ ನಿರ್ದೇಶಕ ವಾಸಿಮ್ ಅಕ್ರಂ, ‘ಬೇಸಿಗೆಯಲ್ಲಿ ಪಕ್ಷಿಗಳು ಫುಟ್​ಪಾತ್​, ರಸ್ತೆಗಳು, ಉದ್ಯಾನವನಗಳು. ಅಪಾರ್ಟ್​ಮೆಂಟ್​, ಮನೆಯ ಚಾವಣಿ, ಉದ್ಯಾನವನಗಳು, ವಾಣಿಜ್ಯ ಕಟ್ಟಡಗಳಲ್ಲಿ ಮಲಗಿರುತ್ತವೆ. ಇದರರ್ಥ ಬೇಸಿಗೆಯ ಹೊಡೆತಕ್ಕೆ ಅವರು ಸುಸ್ತಾಗಿರುತ್ತವೆ. ಹಾಗಾಗಿ ನಿಮ್ಮ ಸುತ್ತಮುತ್ತಲೂ ಯಾವುದಾದರೂ ಪ್ರಾಣಿ, ಪಕ್ಷಿಗಳು ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದರೆ ದಯವಿಟ್ಟು ವೈಲ್ಡ್ ಲೈಫ್​ ಎಸ್​ಒಎಸ್​ 24/7 ಗೆ ಕರೆಮಾಡಿ’ ಎಂದಿದ್ದಾರೆ.

ಸಂಬಂಧಿಸಿದ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:41 pm, Sat, 20 May 23