Viral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!

Cat : ಸಾಕಿದವನಿಗೇ ಆಟವಾಡಿಸುತ್ತಿರುವ ಬೆಕ್ಕು! ನಾಳೆ ಇವು ಜಗತ್ತನ್ನೇ ಆಳುವಲ್ಲಿ ಸಂಶಯವಿಲ್ಲ ಎಂದು ಕೆಲವರು. ಇದು ಬೆಕ್ಕಿನ ವಿಕಾಸದ ಮೊದಲ ತಳಿ ಇರಬೇಕು ಎಂದು ಹಲವರು. ನೀವೇನಂತೀರಿ? ನೋಡಿ ವಿಡಿಯೋದಲ್ಲಿ ಇದರ ಗತ್ತು.

Viral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!
ಸಾಕಿನವನಿಗೇ ಆಟವಾಡಿಸುತ್ತಿರುವ ಬೆಕ್ಕು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 20, 2023 | 10:42 AM

Viral Video: ಮಕ್ಕಳಿಗೆ ಕೊಡಿಸುವಂತ ದುಬಾರಿ ಆಟಿಕೆಗಳನ್ನೇನೂ ಕೊಡಿಸಬೇಕಿಲ್ಲ ಬೆಕ್ಕುಗಳಿಗೆ. ಒಂದು ಪೇಪರ್​ ತುಂಡು, ಪ್ಲಾಸ್ಟಿಕ್​, ಹಗ್ಗದ ತುಂಡು, ನೆಗ್ಗಿನುಗ್ಗಾಗಿರೋ ಸಣ್ಣ ಚೆಂಡು ಅಥವಾ ಒಣ ಎಲೆ, ಟೊಂಗೆ ಹೀಗೆ ಏನೂ ಆದೀತು. ಎಷ್ಟೋ ಹೊತ್ತು ತನ್ಮಯತೆಯಿಂದ ಆಟದಲ್ಲಿ ಮುಳುಗುತ್ತದೆ. ನೀವು ಆಟವಾಡಿಸಿದರಂತೂ ಅದರ ಹುರುಪು ದುಪ್ಪಟ್ಟಾಗುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸಾಕಿದವನನ್ನೇ ಇದು ಆಟವಾಡಿಸುತ್ತಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Instapawz Pets (@lnstapawz)

ಈ ವಿಡಿಯೋ ನೋಡಿದ ನೆಟ್ಟಿಗರು ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಮುಂದೊಂದು ದಿನ ಈ ಬೆಕ್ಕುಗಳು ಇಡೀ ಜಗತ್ತನ್ನೇ ತಮ್ಮ ಪ್ರಾಬಲ್ಯಕ್ಕೆ  ತೆಗೆದುಕೊಳ್ಳುತ್ತವೆ! ಎಂಬ ಹಾಸ್ಯೋಕ್ತಿಯನ್ನು ಉಲ್ಲೇಖಿಸಿದ್ದಾರೆ. ಅರೆ ಇಲ್ಲಿ ಬೆಕ್ಕು ಯಾರು ಹಾಗಿದ್ದರೆ ಎಂದು ಮತ್ತೊಬ್ಬರು ಕೇಳಿದ್ದಾರೆ. ನಿಮ್ಮ ಬೆಕ್ಕು ನಿಮಗೆ ಹೀಗೇ ಆಟವಾಡಿಸುತ್ತದೆಯಾ ದಿನವೂ ಎಂದು ಮಗದೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ಓಹೋ ಇಲ್ಲಿರು ಇಬ್ಬರಲ್ಲಿ ಬೆಕ್ಕು ಯಾರು ಹಾಗಾದರೆ? ಎಂದಿದ್ದಾರೆ ಇನ್ನೊಬ್ಬರು. ಇದು ಬೆಕ್ಕಿನ ಹೊಸ ವಿಕಾಸದ ಮೊದಲ ತಳಿ ಇರಬೇಕು ಎಂದಿದ್ಧಾರೆ ಮತ್ತೊಬ್ಬರು. ಇದು ಟರ್ಕಿಷ್​ ಐಸ್​ಕ್ರೀಮ್​ ಮ್ಯಾನ್​ ಎಂದಿದ್ದಾರೆ ಇನ್ನೊಬ್ಬರು. ಇದರ ಮೆದುಳನ್ನು AI ಪ್ರೋಗ್ರ್ಯಾಮಿಂಗ್​​ನಿಂದ ರೂಪಿಸಲ್ಪಟ್ಟಿರಬೇಕು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು

ಏಪ್ರಿಲ್​ 25ರಂದು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 75,000 ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:39 am, Sat, 20 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ