Viral News: ಕ್ಯಾನ್ಸರ್​​ ಗೆದ್ದು ಬಂದ ಪೊಲೀಸ್​​​ ಇಲಾಖೆಯ ಶ್ವಾನ ಸಿಮ್ಮಿ

ಪಂಜಾಬ್​​ನ ಪೊಲೀಸ್​​​​​ ಶ್ವಾನ ಪಡೆಯ ಲ್ಯಾಬ್ರಡಾರ್ ತಳಿಯ ಸಿಮ್ಮಿ ಹೆಸರಿನ ಶ್ವಾನ ಸಾಕಷ್ಟು ದಿನಗಳಿಂದ ಕ್ಯಾನ್ಸರ್​​​​​ನಿಂದ ಬಳಲುತ್ತಿತ್ತು. ಅದೃಷ್ಟವಶಾತ್‌ ಸಿಮ್ಮಿ ಕ್ಯಾನ್ಸರ್ ಮಹಾಮಾರಿಯಿಂದ​​ ಗೆದ್ದು ಬಂದಿದ್ದು, ಮತ್ತೇ ತನ್ನ ಕರ್ತವ್ಯಕ್ಕೆ ಮರಳಿದೆ.

Viral News: ಕ್ಯಾನ್ಸರ್​​ ಗೆದ್ದು ಬಂದ ಪೊಲೀಸ್​​​ ಇಲಾಖೆಯ ಶ್ವಾನ ಸಿಮ್ಮಿ
labrador named Simmy beat cancerImage Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:May 19, 2023 | 6:57 PM

ಕ್ಯಾನ್ಸರ್​​​ ಕಾಯಿಲೆಯಲ್ಲಿ ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಇಲ್ಲೊಂದು ಶ್ವಾನ ಕ್ಯಾನ್ಸರ್​​​ನಿಂದ ಗೆದ್ದು, ಗುಣಮುಖವಾಗಿ ಮತ್ತೇ ತನ್ನ ಕರ್ತವ್ಯಕ್ಕೆ ಹಾಜರಾಗಿದೆ. ಪಂಜಾಬ್​​ನ ಪೊಲೀಸ್​​​​​ ಶ್ವಾನ ಪಡೆಯ ಲ್ಯಾಬ್ರಡಾರ್ ತಳಿಯ ಸಿಮ್ಮಿ ಹೆಸರಿನ ಶ್ವಾನ ಸಾಕಷ್ಟು ದಿನಗಳಿಂದ ಕ್ಯಾನ್ಸರ್​​​​​ನಿಂದ ಬಳಲುತ್ತಿತ್ತು. ಕ್ಯಾನ್ಸರ್​​​ ಎಂದಾಕ್ಷಣ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ. ಯಾಕೆಂದರೆ ಈ ಕಾಯಿಲೆಯಿಂದ ಬಳಲುತ್ತಿದ್ದರೆ, ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಸಿಮ್ಮಿಗೆ ಪಂಜಾಬ್​​ನ ಪೊಲೀಸ್ ತಂಡದಿಂದ ಸರಿಯಾದ ಸಮಯಕ್ಕೆ ವೈದ್ಯರನ್ನು ನೇಮಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಅದೃಷ್ಟವಶಾತ್‌ ಸಿಮ್ಮಿ ಕ್ಯಾನ್ಸರ್ ಮಹಾಮಾರಿಯಿಂದ​​ ಗೆದ್ದು ಬಂದಿದ್ದು, ಮತ್ತೇ ತನ್ನ ಕರ್ತವ್ಯಕ್ಕೆ ಮರಳಿದೆ.

ಕ್ಯಾನ್ಸರ್​​ನಿಂದ ಗುಣಮುಖವಾದ ಬಳಿಕ ಪೊಲೀಸ್ ಅಧಿಕಾರಿಯೊಂದಿಗೆ ಸಿಮ್ಮಿ ಶ್ವಾನ ಓಡಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟರ್​​​ ಖಾತೆಯಲ್ಲಿ ಶೇರ್​​ ಮಾಡಲಾಗಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ‘ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಮುಗ್ಧಜೀವಗಳನ್ನು ಬಳಸಿಕೊಂಡಿದ್ದೀರಿ!’

ಎಎನ್‌ಐ ಟ್ವೀಟ್​​ಗೆ ರೀಟ್ವೀಟ್​​ ಮಾಡಿದ ಫರೀದ್‌ ಕೋಟ್‌ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿತ್‌ ಸಿಂಗ್‌, “ಸಿಮ್ಮಿ ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಈಗ ಇದರ ಆರೋಗ್ಯ ಸುಧಾರಿಸಿದೆ. ಮುಂದೆ ಪಂಜಾಬ್​​ನ ಪೊಲೀಸ್ ಇಲಾಖೆಯ ವಿರೋಧಿ ವಿಧ್ವಂಸಕ ತಪಾಸಣೆ ಸಹಾಯ ಮಾಡಲಿದ್ದು, ಮತ್ತೆ ತನ್ನ ಕರ್ತವ್ಯವದಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ವಿಡಿಯೋ ಸಾಕಷ್ಟು ಲೈಕ್​​,ಕಾಮೆಂಟ್​​ ಹಾಗೂ ಶೇರ್​​ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಶ್ವಾನವನ್ನು ಆರೋಗ್ಯವಾಗಿ ನೋಡಿಕೊಳ್ಳಿ ಎಂದು ಸಾಕಷ್ಟು ನೆಟ್ಟಿಗರು​​​ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:57 pm, Fri, 19 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ