ಪ್ರಾಚೀನ ಈಜಿಪ್ಟಿ ಪಿರಮಿಡ್ ತೆರೆದ ಪುರಾತತ್ತ್ವಜ್ಞ; ಮೈ ಜುಮ್ ಎನಿಸುವ ಅನುಭವವನ್ನು ಹಂಚಿಕೊಂಡ ರಾಮಿ ರೊಮಾನಿ!

600 ವರ್ಷಗಳಿಂದ ತೆರೆಯದ ಪುರಾತನ ಈಜಿಪ್ಟಿನ ಸಮಾಧಿಯಾದ ಪಿರಮಿಡ್ ಒಳಗೆ ನಡೆದ, ಪುರಾತತ್ತ್ವ ಶಾಸ್ತ್ರಜ್ಞ ರಾಮಿ ರೊಮಾನಿ ರಕ್ತವನ್ನು ಕೆಮ್ಮುತ್ತಾ, ಭ್ರಮೆಗೆ ಒಳಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಾಚೀನ ಈಜಿಪ್ಟಿ ಪಿರಮಿಡ್ ತೆರೆದ ಪುರಾತತ್ತ್ವಜ್ಞ; ಮೈ ಜುಮ್ ಎನಿಸುವ ಅನುಭವವನ್ನು ಹಂಚಿಕೊಂಡ ರಾಮಿ ರೊಮಾನಿ!
ರಾಮಿ ರೊಮಾನಿ
Follow us
TV9 Web
| Updated By: ನಯನಾ ಎಸ್​ಪಿ

Updated on: May 19, 2023 | 5:17 PM

1920 ರ ದಶಕದಲ್ಲಿ ಹೊವಾರ್ಡ್ ಕಾರ್ಟರ್ ಅವರ ಹಲವಾರು ಸಂಶೋಧನಾ ಸಿಬ್ಬಂದಿಗಳು ಟುಟಾಂಖಾಮನ್ (Tutankhamun) ಸಮಾಧಿಯನ್ನು ಕಂಡುಹಿಡಿದು ಪ್ರವೇಶಿಸಿದ ಕೂಡಲೇ ಅಲ್ಲೇ ನಶಿಸಿದರು ಎಂಬ ಪುರಾವೆಗಳಿವೆ.  ವಿಷಕಾರಿ ಅಂಶಗಳ ಬಿಡುಗಡೆಯು ಅವರ ಸಾವಿಗೆ ಕಾರಣವಾಯಿತು ಎಂದು ಕೆಲವರು ಹೇಳುತ್ತಾರೆ, ಆದರೆ ಇತರರು ಸಮಾಧಿ (Pyramid) ಶಾಪಗ್ರಸ್ತವಾಗಿದೆ (Curse) ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಏನಾಯಿತು? ಇಲ್ಲಿದೆ ಕೆಲವು ಕುತೂಹಲಕಾರಿ ಅಂಶಗಳು. ಇದೀಗ 600 ವರ್ಷಗಳಿಂದ ತೆರೆಯದ ಪುರಾತನ ಈಜಿಪ್ಟಿನ ಸಮಾಧಿಯಾದ ಪಿರಮಿಡ್ ಒಳಗೆ ನಡೆದ, ಪುರಾತತ್ತ್ವ ಶಾಸ್ತ್ರಜ್ಞ ರಾಮಿ ರೊಮಾನಿ ರಕ್ತವನ್ನು ಕೆಮ್ಮುತ್ತಾ, ಭ್ರಮೆಗೆ ಒಳಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಪುರಾತತ್ವ ಶಾಸ್ತ್ರಜ್ಞನು ರಕ್ತ ಕೆಮ್ಮುತ್ತ ಭ್ರಮೆಗೆ ಒಳಗಾದರು

ರಾಮಿ ರೊಮಾನಿ, ಈಜಿಪ್ಟಾಲಜಿಸ್ಟ್, ಪಿರಮಿಡ್ ಸಮಾಧಿಯೊಳಗಿರುವ ಮುಮ್ಮಿಯ ಶಾಪ ವಾಸ್ತವವಾಗಿ ಅಸ್ತಿತ್ವದಲ್ಲಿದೆ ಎಂದು ದೃಢವಾಗಿ ನಂಬುತ್ತಾರೆ. ರೋಮಾನಿ ಅವರು ಡಿಸ್ಕವರಿ ಚಾನೆಲ್‌ನ ‘ಮಮ್ಮಿ ಅನ್​ವ್ರಾಪ್ಡ್’​ ಶೋ ಚಿತ್ರೀಕರಣ ಮಾಡುವಾಗ ಬೈಬಲ್‌ನಿಂದ ಐತಿಹಾಸಿಕ ವ್ಯಕ್ತಿ ಎಂದು ಭಾವಿಸಿದ ಮಮ್ಮಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು, ಅಂದರೆ ಪ್ರಾಚೀನ ಈಜಿಪ್ಟ್ ರಾಜ ಅಖೆನಾಟೆನ್ ಸಮಾಧಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು.

“ಯಾರೂ ಅಲ್ಲಿಗೆ ಭೇಟಿ ನೀಡುವುದಿಲ್ಲ. ಅಖೆನಾಟೆನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನದಲ್ಲಿ ನಾನು ಅಲ್ಲಿಗೆ ಹೋಗಿದ್ದೆ” ಎಂದು ದಿ ಜೋರ್ಡಾನ್ ಹಾರ್ಬಿಂಗರ್ ಶೋನಲ್ಲಿ ಮಾತನಾಡುತ್ತಾ ರೋಮನಿ ಹೇಳಿದರು. “ನಾನು ಆ ಸಮಾಧಿಯೊಳಗೆ ಹೋಗುವವರೆಗೂ ಅಲ್ಲಿರುವ ಯಾವ ಕಾವಲುಗಾರರು ಅದನ್ನು ಇಲ್ಲಿಯವರೆಗೂ ತೆರೆದಿರಲಿಲ್ಲ. ಆ ಸಮಾಧಿಯು ಸುಮಾರು 600 ವರ್ಷಗಳಿಂದ ತೆರೆದಿರಲಿಲ್ಲ” ಎಂದು ರೋಮಣಿ ಹೇಳಿದರು.

ಒಳಗೆ ಹೋಗಿ ಸಮಾಧಿಯ ಕಲ್ಲಿನ ಮೇಲೆ ಬಡಿದಾಗ, ರಾಮೋನಿ ಮತ್ತು ಕಾವಲುಗಾರರು ಎಲ್ಲಾ ಹಾವುಗಳು ಶಬ್ದ ಮಾಡುತ್ತಾ ಹೊರಬರುವುದನ್ನು ಕೇಳಿಸಿಕೊಂಡರು ಎಂದು ರೋಮನಿ ಹೇಳಿದ್ದಾರೆ. “ನಾವು ಪ್ರವೇಶಿಸಿ ರೆಕಾರ್ಡಿಂಗ್ ಪ್ರಾರಂಭಿಸುತ್ತೇವೆ, ನಾನು ಆ ಸಮಾಧಿಯ ಕೆಳಗೆ ಹೋಗಿ ವಸ್ತುಗಳನ್ನು ಹುಡುಕುತ್ತೇನೆ, ಮತ್ತು ನಾನು ನಿಜವಾಗಿಯೂ ಕಷ್ಟದಲ್ಲಿ ಉಸಿರಾಡುತ್ತಿರುವಾಗ ಒಳಗೆ ಬಾವಲಿಗಳು ಕಾಣಿಸುತ್ತದೆ, ಜೊತೆಗೆ ಅಲ್ಲಿನ ವಾಸನೆಯು ತುಂಬಾ ಭೀಕರವಾಗಿತ್ತು, ತಕ್ಷಣ ನಂಗೇನೋ ಸರಿ ಇಲ್ಲ ಎಂದು ಅನಿಸಿ ಸಮಾಧಿಯಿಂದ ನಾನು ಹೊರಗೆ ಬರುತ್ತೇನೆ” ಎಂದು ತಮ್ಮ ಅನುಭವವನ್ನು ಹೇಳಿಕೊಂಡರು.

ನಂತರ ಒಳಗೆ ಪ್ರವೇಶಿಸಿದ ಜನರು ಜ್ವರದಿಂದ ಬಳಲುತ್ತಿದ್ದರು ಮತ್ತು ಅವರು ‘ಸಾಯಲಿದ್ದಾರೆ’ ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿತ್ತು. ಇದು ಪ್ರಾಯಶಃ ಮಮ್ಮಿಯ ಶಾಪವಾಗಿರಬಹುದು ಎಂದು ರೋಮನಿ ಹೇಳಿದರು. ಮರುದಿನ ಬೆಳಿಗ್ಗೆ ಅವರು ಹಾಸಿಗೆಯಲ್ಲಿ ಭಯಾನಕ ಸ್ಥಿತಿಯಲ್ಲಿದ್ದರು. “ನನಗೆ ಜ್ವರ 107 ಕ್ಕೆ ಏರಿತ್ತು” ಎಂದು ಅವರು ಹೇಳಿದರು.

ರೊಮಾನಿ ಹೇಳಿಕೆ ಪ್ರಕಾರ, “ನನ್ನನ್ನು ಪರೀಕ್ಷಿಸಲು ವೈದ್ಯರು ಬಂದಾಗ ನಾನು ರಕ್ತದ ಜೊತೆ ಕೆಮ್ಮುತ್ತಿದ್ದೆ, ಅಲ್ಲದೆ ನಾನು ಸಾಥಿ ಹೋಗುತ್ತೇನೆ ಎಂಬ ಭ್ರಮೆಯಲ್ಲಿದ್ದೆ. ನನ್ನನ್ನು ನೋಡಿ ನನ್ನ ಹೆಂಡತಿ ತುಂಬಾ ಹೆದರುತ್ತಿದ್ದರು. ನಾನು ಹೇಗೆ ಬದುಕಿದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಡಾಲಿ ಜೈನ್, ಸೀರೆ ಉಡಿಸಲು 2 ಲಕ್ಷ ರೂಪಾಯಿ ಚಾರ್ಜ್ ಮಾಡುವ ಸ್ಟೈಲಿಸ್ಟ್!

“ನನಗೆ ಏನಾಗಿದೆ ಎಂದು ಯಾವುದೇ ವೈದ್ಯರಿಗೆ ತಿಳಿದಿರಲಿಲ್ಲ, ಅವರು ನನಗೆ ಆಂಟಿಬಯಾಟಿಕ್ ಹಾಕಿದರು, ನಂತರ ನಾನು ಎಲ್ಲಿಗೆಲ್ಲ ಹೋಗಿದ್ದೆ ಎಂದು ವೈದ್ಯರಿಗೆ ವಿವರಿಸಿದೆ. ಆಗ ವೈದ್ಯರು ‘ಬಾವಲಿಗಳು, ಹಾವುಗಳು, ಧೂಳು ಯಾವತ್ತೂ ಉತ್ತಮ ಸಂಯೋಜನೆಯಲ್ಲ , ನಾವು ನೋಡದ ಯಾವುದಾದರೂ ರೋಗಲಕ್ಷಣಗಳ ಸಂಯೋಜನೆ ಇದು ಆಗಿರಬಹುದು ಆದರೆ ಈ ಪ್ರತಿಜೀವಕಗಳು ಕೆಲಸ ಮಾಡುತ್ತವೆ ಎಂದು ನಾವು ಭಾವಿಸೋಣ, ಎಂದು ಹೇಳಿದರು. ಅದೃಷ್ಟವಶಾತ್ ಅವು ಕೆಲಸ ಮಾಡಿದವು.” ಎಂದು ತಮಗಾದ ಭಯಾನಕ ಅನುಭವವನ್ನು ಶೋನಲ್ಲಿ ಹಂಚಿಕೊಂಡರು.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ