AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ

ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ.

Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 19, 2023 | 3:09 PM

Share

ಅಣ್ಣ ಎಂಬ ಶಕ್ತಿ ನಮ್ಮ ಜತೆಗೆ ಇದ್ದಾಗ ಯಾವುದೇ ಸಮಸ್ಯೆ ಬಂದರು ಅದನ್ನು ತಡೆಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ, ಹೌದು ಅಮೆರಿಕದ ಮಿಚಿಗನ್​​ನಲ್ಲಿ ಹದಿಹರೆಯದ ಹುಡುಗನೊಬ್ಬ, ತನ್ನ ಪುಟ್ಟ ತಂಗಿಯನ್ನು ಕಿಡ್ನಾಪರ್​​ನಿಂದ ತುಂಬಾ ಚುರುಕುತನದಿಂದ ಕಾಪಾಡಿದ್ದಾನೆ. ಸ್ಕೈ ನ್ಯೂಸ್ ಪ್ರಕಾರ , ಆಲ್ಪೆನಾ ಟೌನ್‌ಶಿಪ್‌ನಲ್ಲಿ ಮೇ 10ರಂದು ಈ ಘಟನೆ ನಡೆದಿದೆ. ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ. ಆತನ 13 ವರ್ಷ ವಯಸ್ಸಿನ ತಂಗಿ ಸ್ನೇಹಿತರೊಂದಿಗೆ ಆಟವಾಡುತ್ತಿರುವಾಗ ಕಿರುಚಾಟ ಕೇಳುತ್ತದೆ, ಏನೋ ಅವರೇ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದುಕೊಂಡ ಅಣ್ಣ, ನಂತರ ಮತ್ತೆ ಜೋರಾಗಿ ಕಿರುಚಾಟ ಕೇಳಿದೆ, ತಕ್ಷಣ ಅಣ್ಣ ಅವಳ ಸಹಾಯಕ್ಕೆ ಧಾವಿಸಿದ್ದಾನೆ.

ಅಣ್ಣ ಓವನ್ ತಿಳಿಸಿರುವಂತೆ ನಾನು ಕಿಟಕಿಯಿಂದ ಹೊರಗೆ ನೋಡಿದಾಗ ಆಕೆಯನ್ನು ಒಬ್ಬ ವ್ಯಕ್ತಿ ಅಪಹರಿಸಿರುವುದನ್ನು ನೋಡಿದೆ, ಇದರಿಂದ ನಾನು ತುಂಬಾ ಭಯಭೀತನಾಗಿ ಏನು ಮಾಡಬೇಕು ಎಂದು ತಿಳಿಯದೆ ಕವಣೆಯಿಂದ ಹೊಡೆದಿದ್ದಾನೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ:Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ನಾನು ಕವಣೆ (ಚಾಟಿ ಬಿಲ್ಲು) ಹಿಡಿದು ಅದಕ್ಕೆ ಜಲ್ಲಿಕಲ್ಲು ಸೇರಿಸಿ ಕಿಟಕಿಯಲ್ಲಿ ಗುರಿಯಿಟ್ಟು ಅವನಿಗೆ ಹೊಡೆದೆ. ಅಣ್ಣ ಓವನ್ ಈ ಕೆಲಸದಿಂದ ಕಿಡ್ನಾಪರ್​​ ಆತ ತಂಗಿಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಿಡ್ನಾಪರ್​​ 17 ವರ್ಷದ ಯುವಕನಾಗಿದ್ದು, ಆತನ ವಿರುದ್ಧ ದೂರ ದಾಖಲಿಸಲಾಗಿದ್ದು, ಓವನ್ ಕವಣೆ (ಚಾಟಿ ಬಿಲ್ಲು) ಯಿಂದ ಹೊಡೆದ ಪರಿಣಾಮ ಆತನ ತಲೆ ಮತ್ತು ಎದೆಗೆ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆ ಕಿಡ್ನಾಪರ್​​ನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ