ಈ ಬೈಕ್​​​​ಗೆ ಪೆಟ್ರೋಲ್ ಬದಲು​ ಬಿಯರ್​​​​​ ಹಾಕಿದ್ರೆ ಸಾಕು, ಹೊಸ ಪ್ರಯೋಗ ಮಾಡಿದ ಯುವಕ

Akshatha Vorkady

|

Updated on:May 19, 2023 | 5:53 PM

ಬಿಯರ್​​​ ಬಳಸಿ ಕೂಡ ಗಾಡಿಯನ್ನು ಚಲಾಯಿಸಬಹುದು. ಹೌದು ಪೆಟ್ರೋಲ್​ ಬೆಲೆ ಗಗನಕ್ಕೇರುತ್ತಿದ್ದಂತೆ ವ್ಯಕ್ತಿಯೊರ್ವ ಬಿಯರ್​​​ನಿಂದ ಚಲಿಸುವ ಹೊಸ ವಾಹನ ಒಂದನ್ನು ತಯಾರಿಸಿದ್ದಾನೆ.

ಈ ಬೈಕ್​​​​ಗೆ ಪೆಟ್ರೋಲ್ ಬದಲು​ ಬಿಯರ್​​​​​ ಹಾಕಿದ್ರೆ ಸಾಕು, ಹೊಸ ಪ್ರಯೋಗ ಮಾಡಿದ ಯುವಕ
Beer Powered Motorcycle
Follow us

ವಾಹನ ತೆಗೆದುಕೊಳ್ಳುವ ಪ್ಲಾನ್​ನಲ್ಲಿದರೆ, ಪೆಟ್ರೋಲ್​​ ಬೆಲೆ ಗಗನಕ್ಕೇರಿರುವುದನ್ನು ಕಂಡು ಪ್ಲಾನ್​​ನಿಂದ ದೂರ ಸರಿಯುವವರೇ ಹೆಚ್ಚು. ಹೌದು ಪೆಟ್ರೋಲ್​​ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೆಟ್ರೋಲ್​​ ಬೆಲೆಯ ಏರಿಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರೀ ಸದ್ದು ಮಾಡುತ್ತಿದೆ. ಆದರೆ ಇನ್ನೂ ಮುಂದೆ ಬಿಯರ್​​​ ಬಳಸಿ ಕೂಡ ಗಾಡಿಯನ್ನು ಚಲಾಯಿಸಬಹುದು. ಹೌದು ಪೆಟ್ರೋಲ್​ ಬೆಲೆ ಗಗನಕ್ಕೇರುತ್ತಿದ್ದಂತೆ ವ್ಯಕ್ತಿಯೊರ್ವ ಬಿಯರ್​​​ನಿಂದ ಚಲಿಸುವ ಹೊಸ ವಾಹನ ಒಂದನ್ನು ತಯಾರಿಸಿದ್ದಾನೆ. ಬಿಯರ್​​​​ನಿಂದ ಚಲಿಸುವ ಗಾಡಿನಾ? ಏನಿದರ ವಿಶೇಷತೆ ? ಇಲ್ಲಿದೆ ಸಂಪೂರ್ಣ ವಿವರ.

ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿಯೇ ಬಿಯರ್​​ನಿಂದ ಚಲಿಸುವ ಬೈಕ್​​ವೊಂದನ್ನು ಅನ್ವೇಷಿಸಿದಾತ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಪೆಟ್ರೋಲ್​​ ಬದಲಿಗೆ ಬಿಯರ್​​ ತುಂಬಿಸಿದರೆ ಸಾಕು. ಇದು ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಯೂಟ್ಯೂಬ್​​ನಲ್ಲಿ ಭಾರೀ ವೈರಲ್​​ ಆಗುತ್ತಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚ್ಚೈ ಅಪ್ಪ ಕಣ್ಣೀರು; ಚೆನ್ನೈ ಮನೆ ಮಾರುವಾಗ ಭಾವೋದ್ವೇಗದ ಕ್ಷಣಗಳು; ಘಟನೆ ಸ್ಮರಿಸಿದ ತಮಿಳು ನಟ

ಮೈಕೆಲ್ಸನ್​​​ಗೆ ಯಾವುದೇ ಮದ್ಯಪಾನದ ಅಭ್ಯಾಸವಿಲ್ಲವಂತೆ, ನಾನು ಬಿಯರ್​​ ಕುಡಿಯುವುದಿಲ್ಲ, ಆದರೆ ಬಿಯರ್​ನಿಂದ ಚಲಿಸುವ ಗಾಡಿಯನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನನಗೆ ಹಿಂದಿನಿಂದಲೂ ಇತ್ತು. ಇದೀಗಾ ನೆರವೇರಿದೆ ಎಂದು ಮೈಕೆಲ್ಸನ್ ಹೇಳಿಕೊಂಡಿದ್ದಾರೆ. ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕನ್ನು ಅಲ್ಲಿನ ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಆದರೆ ಇನ್ನು ಮುಂದರ ಇದರ ಸಾಮರ್ಥ್ಯದ ಬಗ್ಗೆ ಪರೀಕ್ಷಿಸಿ, ಚಾಲನೆಗೆ ತರುವ ಪ್ರಯತ್ನದಲ್ಲಿದ್ದಾರೆ ಮೈಕೆಲ್ಸನ್.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ತಾಜಾ ಸುದ್ದಿ

Related Stories

Click on your DTH Provider to Add TV9 Kannada