AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು

Uorfi Javed : ಈ ಉಡುಪನ್ನು ತಯಾರಿಸುವಾಗ ಯಾವುದೇ ಮರಗಳಿಗೆ ಹಾನಿಯನ್ನುಂಟು ಮಾಡಿಲ್ಲ ಎಂದು ಊರ್ಫಿ ಜಾವೇದ್ ಹೇಳಿದ್ದಾಳೆ. ತಾಯೀ, ಈ ಸಲಾ ಇಷ್ಟಾದರೂ ತೊಟ್ಟಿದ್ದೀಯಲ್ಲ ಎಂದು ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ!​

Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು
ಮರದ ತೊಗಟೆಯಲ್ಲಿ ಕಾಣಿಸಿಕೊಂಡ ಊರ್ಫಿ ಜಾವೇದ್
TV9 Web
| Edited By: |

Updated on:May 24, 2023 | 2:19 PM

Share

Viral Video: ಊರ್ಫಿ ಜಾವೇದ್​ (Uorfi Javed) ಎಂದತಕ್ಷಣ ಆಕೆ ತೊಟ್ಟುಕೊಳ್ಳುವ ಚಿತ್ರವಿಚಿತ್ರ ಬಟ್ಟೆಗಳೆಲ್ಲ ಕಣ್ಣಮುಂದೆ ಬರುತ್ತವೆ. ಹಿಂದೊಮ್ಮೆ ಕೂದಲಿನಿಂದ ಮಾಡಿದ ಉಡುಪನ್ನು ಧರಿಸಿ ಥೇಟ್ ನಮ್ಮ ಅಕ್ಕಮಹಾದೇವಿಯನ್ನು ನೆನಪಿಸಿದ್ದನ್ನು ನೀವ ನೋಡಿರಬಹುದು. ಇದೀಗ ಈಕೆ ಮರದ ತೊಗಟೆಯನ್ನು ಮೈಗೆ ಸುತ್ತಿಕೊಂಡು ಟ್ರೆಂಡ್​ನಲ್ಲಿದ್ದಾರೆ. ಮಾರ್ವೆಲ್ ಸಿನೆಮಾದ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿಯಲ್ಲಿನ ಪಾತ್ರ ಗ್ರೂಟ್ ಅನ್ನು ಇದು ನೆನಪಿಸುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ನೋಡಿ ವೈರಲ್ ಆಗುತ್ತಿರುವ ಈಕೆಯ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Uorfi (@urf7i)

ಈ ವಿಡಿಯೋ ಪೋಸ್ಟ್ ಮಾಡಿದ ಈಕೆ, ‘ಈ ಉಡುಗೆ ತಯಾರಿಸುವಾಗ ಯಾವುದೇ ಮರಗಳಿಗೆ ಹಾನಿಯನ್ನುಂಟುಮಾಡಿಲ್ಲ’ ಎಂದು ಹೇಳಿದ್ದಾರೆ. ತಿಳಿಲ್ಯಾವೆಂಡರ್​ ಉಡುಪಿನಲ್ಲಿ ಮರದ ಬಳಿ ಬಂದು ನಿಲ್ಲುವ ಊರ್ಫಿ ನಂತರ ತೊಗಟೆಯನ್ನು ತೊಟ್ಟುಕೊಂಡ ಕ್ಲಿಪ್ಪಿಂಗ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈತನಕ ಸುಮಾರು 2.4 ಮಿಲಿಯನ್​ ಜನ ನೋಡಿದ್ದಾರೆ. ಸುಮಾರು 14 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ಯುವಕನ ಲಗೇಜು ತಾಲೀಮು

ಇದು ಪೇಯ್ಡ್​ ಪೋಸ್ಟ್​ ಎಂದು ಕೆಲವರು ಹೇಳಿದ್ದಾರೆ. ಸದ್ಯ ಈ ಸಲ ಇಷ್ಟಾದರೂ ಬಟ್ಟೆ ಧರಿಸಿದ್ದೀಯಲ್ಲ ಒಳ್ಳೆಯದು ಎಂದಿದ್ದಾರೆ ಅನೇಕರು. ನಾನಂತೂ ಈ ಪೋಸ್ಟ್​​ಗೆ ಹಾಕುವ ಮಜಾ ಕಾಮೆಂಟ್​ಗಳನ್ನು ಓದಲೆಂದೇ ಬಂದಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಇದು ಚಾಕೋಲೇಟ್​ ಮೆತ್ತಿದ ಬಟ್ಟೆಯಂತೆ ಕಾಣುತ್ತಿದೆ, ತಿನ್ನಬಹುದೆ? ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ನಂಗಂತೂ ಇದು ಸೆಗಣಿ ಮೆತ್ತಿದಂತೆ ಕಾಣುತ್ತಿದೆ ಎಂದು ಇನ್ನೊಬ್ಬರು.

ಇದನ್ನೂ ಓದಿ : Viral Video: ಬಾ ಕೂಸೇ ಮುದ್ದಿಸ್ತೀನಿ; ವಾತ್ಸಲ್ಯಮಯೀ ಒರಾಂಗುಟಾನ್

ಗಿಡಮರಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿರುವಂತೆ ಕಾಣುತ್ತಿದೆ ಒಳ್ಳೆಯದು, ತುಂಬಾ ಚೆಂದ ಕಾಣುತ್ತಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಎವಿಡ್​ ಡೆಡ್​ ಸಿನೆಮಾ ನೆನಪಿಗೆ ಬರುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಡಿಸ್ಲೈಕ್​ ಬಟನ್​ ಎಲ್ರೋ ಎಂದು ಹಲವರು ಕೇಳಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:18 pm, Wed, 24 May 23

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ