Viral Video: ಎಲ್ಲಿಂದ ಬಂದರೋ ಎಲ್ಲಿಗೆ ಹೊರಟಿರುವರೋ ಈ ಅಜ್ಜಿ; ನಿಮಗೇನಾದರೂ ಗೊತ್ತೆ?
Body Art : ನೋಡ್ತಾ ಇದ್ರೆ ತೊಂಬತ್ತು ಗ್ಯಾರಂಟಿ! ಇವರು ನಮ್ಮ ದೇಶದವರಂತೂ ಖಂಡಿತ ಅಲ್ಲ. ಆದರೆ ಬಹಳ ಮುದ್ದಾಗಿದಾರಲ್ವಾ? ನೀಟ್ ಆಗಿ ಮೇಕಪ್ ಬೇರೆ ಮಾಡ್ಕೊಂಡಿದಾರೆ. ವಿಡಿಯೋದಲ್ಲಿರುವ ಈ ಅಜ್ಜಿಯನ್ನು ನೋಡಿದ್ದೀರೇ?

Art : ಇಲ್ಲಿ ಇಷ್ಟೊಂದು ಸೆಕೆ ಸುರೀತಿದೆ. ಆದರೆ ಈ ಹಣ್ಣಣ್ಣು ಅಜ್ಜಿ ಮಾತ್ರ ಉಣ್ಣೆ ಟೋಪಿ,ಸ್ಕಾರ್ಫ್ ಹಾಕ್ಕೊಂಡು ಬಾಯಾಡಿಸ್ತಾ ಇದ್ದಾರೆ. ಯಾರು ಯಾವ ಚಾಕೋಲೇಟ್ ಕೊಟ್ಟಿದ್ದರೋ ಏನೋ, ರುಚಿ ಇರಬೇಕು ಎಷ್ಟು ಛಂದ ಮೆಲ್ಲತಾ ಇದ್ಧಾರೆ ನೋಡಿ. ಅಂದಹಾಗೆ ಈ ಅಜ್ಜಿಗೆ ಸಾಕಷ್ಟು ವಯಸ್ಸಾಗಿರಬೇಕಲ್ವಾ? ನೋಡ್ತಾ ಇದ್ರೆ ತೊಂಬತ್ತು ಗ್ಯಾರಂಟಿ! ಇವರು ನಮ್ಮ ದೇಶದವರಂತೂ ಖಂಡಿತ ಅಲ್ಲ. ಆದರೆ ಬಹಳ ಮುದ್ದಾಗಿದಾರಲ್ವಾ? ನೀಟ್ ಆಗಿ ಮೇಕಪ್ ಬೇರೆ ಮಾಡ್ಕೊಂಡಿದಾರೆ. ಎಲ್ಲಿಯವರೋ ಏನೋ, ಎಲ್ಲಿಗೆ ಹೊರಟಿದ್ದಾರೋ ಏನೋ ಇವರ ತಲೆಮೇಲೆ ಪಕ್ಷಿ ಬೇರೆ ಇದೆ. ಹೀಗೆ ಇವರು ಇನ್ಸ್ಟಾನಲ್ಲಿ ಸಿಕ್ಕರು.
ಈಗ ಗೊತ್ತಾಯ್ತಾ ಅಜ್ಜಿಯ ಮೂಲ! ಹೌದು ಕಲೆಯ ಬೆರಗೆಂದರೆ ಇದೇ. ಇಲ್ಲದಿರುವುದನ್ನು ಕಾಣಿಸುವುದು. ಕಲಾವಿದರೊಬ್ಬರು ಕೈಮೇಲೆ ಮಾಡಿದ ಪೇಂಟಿಂಗ್ ಇದು. ಸುಮಾರು 16 ಸಾವಿರ ಜನರು ಈತನಕ ಇದನ್ನು ಮೆಚ್ಚಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಅದ್ಭುತವಾದ ಕಲೆ ಎಂದು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್ಸ್ಟಾಮಾರ್ಟ್ ಸ್ಪರ್ಧೆ
ಬಾಡಿ ಆರ್ಟ್ ಎಂದು ಹೇಳುವ ಈ ಕಲೆಯನ್ನು ಯಾರು ಚಿತ್ರಿಸಿದ್ಧರೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಇದು ಅತ್ಯುನ್ನತ ಮಟ್ಟದ ಕಲೆ ಎಂದು ಒಬ್ಬರು ಶ್ಲಾಘಿಸಿದ್ದಾರೆ. ಮೊದಲಿಗೆ ನೋಡಿದಾಗ ಇದು ಪೇಂಟಿಂಗ್ ಎಂದು ಅನ್ನಿಸಲೇ ಇಲ್ಲ ಎಂದಿದ್ದಾರೆ. ಅಜ್ಜಿಯೊಂದಿಗೆ ಹೊರಟ ಆ ಪಕ್ಷಿಯೂ ಬಹಳ ಆಕರ್ಷಕವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!
ಸಾಮಾಜಿಕ ಜಾಲತಾಣವು ನಮ್ಮ ನಿತ್ಯಬದುಕಿನ ಅವಿಭಾಜ್ಯ ಅಂಗವಾಗಿದೆ. ಕುಳಿತಲ್ಲಿಂದಲೇ ನಾವು ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಬೇಕಾಗಿದ್ದು ಬೇಡವಾಗಿದ್ದು ಎಲ್ಲವೂ ಇಲ್ಲಿ ದಕ್ಕುತ್ತದೆ. ಆದರೆ ಮನಸಿನಂತೆ ಮಾದೇವ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:02 pm, Thu, 25 May 23